ಟಿ20 ಕ್ರಿಕೆಟ್‌ನಲ್ಲಿ ವೇಗದ ಶತಕ: ದಾಖಲೆ ಬರೆದ ಆಸ್ಟ್ರೇಲಿಯಾದ ಬ್ಯಾಟ್ಸ್​​ಮನ್

ಲಂಡನ್​: ಆಸ್ಟ್ರೇಲಿಯಾದ ಬ್ಯಾಟ್ಸ್​​ಮನ್​ ಶಾನ್​ ಅಬಾಟ್ ಇಂಗ್ಲೆಂಡ್‌ನಲ್ಲಿ ನಡೆದ ಟಿ20 ಕ್ರಿಕೆಟ್​ ಪಂದ್ಯದಲ್ಲಿ ವೇಗದ ಶತಕ ದಾಖಲಿಸುವ ಮೂಲಕ ​T20ಯಲ್ಲಿ ದಾಖಲೆಯನ್ನು ಬರೆದಿದ್ದಾರೆ.

ಕೆಂಟ್ ವಿರುದ್ಧದ 2ನೇ ಪಂದ್ಯದಲ್ಲಿ ಕೇವಲ 34 ಎಸೆತಗಳಲ್ಲಿ ಶತಕ ಬಾರಿಸಿದ ಶಾನ್​ ಅಬಾಟ್​, ಇಂಗ್ಲೆಂಡ್‌ನ T20 ಕ್ರಿಕೆಟ್‌ನಲ್ಲಿ ಜಂಟಿ-ವೇಗದ ಶತಕವನ್ನು ದಾಖಲಿಸಿದ ಆಟಗಾರ ಎನಿಸಿಕೊಂಡರು. ಈ ಮೊದಲು ಇಂಗ್ಲೆಂಡ್ ಟಿ20 ಕ್ರಿಕೆಟ್‌ನಲ್ಲಿ ಆಸೀಸ್ ದಿಗ್ಗಜ ಆಂಡ್ರ್ಯೂ ಸೈಮಂಡ್ಸ್‌ ಕೂಡ 34 ಎಸೆತಗಳಲ್ಲಿ ಶತಕ ಬಾರಿಸಿದ್ದರು. 

34 ಎಸೆತಗಳಲ್ಲಿ ಶತಕವನ್ನು ಬಾರಿಸಿದ ಶಾನ್​ ಒಟ್ಟಾರೆಯಾಗಿ T20 ಕ್ರಿಕೆಟ್​ನಲ್ಲಿ ವೇಗದ ನಾಲ್ಕನೇ ಶತಕ ದಾಖಲಿಸಿದ ಆಟಗಾರನಾಗಿದ್ದಾರೆ. ವೆಸ್ಟ್​ ಇಂಡಿಸ್​ ತಂಡದ ಕ್ರಿಸ್​ ಗೇಲ್​ ಐಪಿಎಲ್​ನಲ್ಲಿ 30 ಎಸೆತಗಳಲ್ಲಿ ಶತಕ ಬಾರಿಸಿದ್ದು, ಇಂದಿಗೂ ದಾಖಲೆಯಾಗಿಯೇ ಉಳಿದಿದ್ದು ಮೊದಲನೇ ಸ್ಥಾನದಲ್ಲಿದ್ದಾರೆ.

ಇನ್ನು, 2018ರಲ್ಲಿ ಹಿಮಾಚಲ ಪ್ರದೇಶ ವಿರುದ್ಧ ದೆಹಲಿಯ ಪಂದ್ಯದಲ್ಲಿ 32 ಎಸೆತಗಳಲ್ಲಿ ಶತಕ ಬಾರಿಸಿದ್ದ ರಿಷಬ್ ಪಂತ್ ಎರಡನೇ ಸ್ಥಾನದಲ್ಲಿದ್ದರೆ, ವಿಹಾನ್ ಲುಬ್ಬೆ 2018ರಲ್ಲಿ ನಾರ್ತ್ ವೆಸ್ಟ್ ವಿರುದ್ಧ 33 ಎಸೆತಗಳಲ್ಲಿ ಶತಕ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ.(ಏಜೆನ್ಸೀಸ್)

Be the first to comment

Leave a Reply

Your email address will not be published.


*