CHETAN KENDULIಪ್ರಕ್ರಿಯೆ ವೇಳಾಪಟ್ಟಿ ಘೋಷಣೆ ಮತದಾರರನ್ನು ಗುರುತಿಸಿ ಪಟ್ಟಿ ಮುದ್ರಿಸುವುದು ಮೇ 29ರಿಂದ ಜೂನ್ 4.ಪಟ್ಟಿ ಪರಿಶೀಲನೆ ಕರಡು ಪ್ರತಿ ತಯಾರಿಸುವುದು ಜೂನ್ 5 ರಿಂದ ಜೂ,13.ಒಟ್ಟು ಮತದಾರರ ಕರಡು ಪಟ್ಟಿ ಪ್ರಕಟಿಸುವುದು ಜೂನ್ 14.ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕ ಜೂನ್ 19.ಬಂದ ಆಕ್ಷೇಪಣೆ ಇತ್ಯರ್ಥಪಡಿಸುವುದು ಜೂನ್ 22.ಅಂತಿಮ ಮತದಾರರ ಪಟ್ಟಿ ಮರು ಪರಿಶೀಲನೆ ಜೂನ್ 25.ಮತದಾರರ ಅಂತಿಮ ಪಟ್ಟಿ ಪ್ರಕಟಣೆ ಜೂನ್ 27.
ಬೆಂಗಳೂರು: ವಿವಿಧ ಕಾರಣಗಳಿಂದ ನನೆಗುದಿಗೆ ಬಿದ್ದಿರುವ ರಾಜ್ಯದ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳನ್ನು ನಡೆಸಲು ಮುಂದಾಗಿರುವ ರಾಜ್ಯ ಚುನಾವಣಾ ಆಯೋಗ ಈ ಸಂಬಂಧ ಮತದಾರರ ಪಟ್ಟಿ ಮತ್ತು ಮತಗಟ್ಟೆಗಳ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ.
ರಾಜ್ಯ ಚುನಾವಣಾ ಆಯೋಗದ ಮೇ 26ರಂದು ಈ ಸಂಬಂಧ ಸುತ್ತೋಲೆ ಹೊರಡಿಸಿದೆ. ಎಲ್ಲ ಜಿಲ್ಲಾಧಿಕಾರಿ ಉಪವಿಭಾಗಾಧಿಕಾರಿ ಮತ್ತು ತಹಸೀಲ್ದಾರ್‌ಗಳಿಗೆ ಈ ಸೂಚನೆ ರವಾನಿಸಲಾಗಿದ್ದು ಪಂಚಾಯತ್‌ರಾಜ್ ಅಧಿನಿಯಮ 1993ರ ಪ್ರಕರಣ 165ರಂತೆ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಗಳಿಗೆ ಚುನಾವಣೆ ನಡೆಸಬೇಕಿದ್ದು ಮತದಾರರ ಪಟ್ಟಿಯನ್ನು ತಯಾರಿಸುವಂತೆ ಹೇಳಿದೆ. ತಾಪಂ ಮತ್ತು ಜಿಪಂಗಳಿಗೆ ಏಕಕಕಾಲದಲ್ಲಿ ಚುನಾವಣೆ ನಡೆಯಲಿದ್ದು ಎರಡಕ್ಕೂ ಒಂದೇ ಮತದಾರರ ಪಟ್ಟಿ ಅನ್ವಯಿಸಲಿದೆ. ಈಗಾಗಲೇ ನೂತನವಾಗಿ ಜಿಪಂ-ತಾಪಂ ಕ್ಷೇತ್ರ ಪುನರ್ವಿಂಗಡೆಣೆಗೆ ರಚಿಸಲಾಗಿದ್ದು,ಸೀಮಾ ನಿರ್ಣಯ ಆಯೋಗ ಅಂತಿಮ ವರದಿ ಸಲ್ಲಿಸಿದ್ದು ಅದರಂತೆ ಕ್ಷೇತ್ರಗಳ ಗಡಿ ಅಂತಿಮವಾಗಿದೆ, ಇದಾದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು ಮತದಾರರನ್ನು ಕ್ಷೇತ್ರವಾರು ಹಂಚಿಕೆ ಸಂದರ್ಭ ವೈಜ್ಞಾನಿಕ ನೀತಿ ಅನುಸರಿಸುವಂತೆ ಆಯೋಗ ನಿರ್ದೇಶನ ನೀಡಿದೆ.ಗಡಿಭಾಗಗಳಲ್ಲಿ ಹೆಚ್ಚಿನ ಕಾಳಜಿ ವಹಿಸಿ ಮತದಾರರ ಪಟ್ಟಿ ತಯಾರಿಸಿ, ಈಗಾಗಲೇ ವಿಧಾನಸಭೆಗೆ ರಚಿತವಾಗಿರುವ ಪಟ್ಟಿಯನ್ನೇ ಆಧರಿಸಿ ಕ್ಷೇತ್ರವಿಂಗಡಣೆ ಆಧರಿಸಿ ಮತಗಟ್ಟೆವಾರು ಹಂಚಿಕೆ ಮಾಡುವಂತೆ ತಿಳಿಸಿದೆ.
ಆಯಾ ಜಿಲ್ಲಾಧಿಕಾರಿಗಳೇ ಇದರ ಸಂಪೂರ್ಣ ಉಸ್ತುವಾರಿ ವಹಿಸಿಕೊಳ್ಳಲಿದ್ದು ಉಪವಿಭಾಗಾಧಿಕಾರಿಗಳು ಮತ್ತು ತಹಸೀಲ್ದಾರರು ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಮತದಾರರ ಪಟ್ಟಿ ಹೊಣೆ ಹೊರಲಿದ್ದಾರೆ. ಮತಗಟ್ಟೆಗಳನ್ನೂ ಅಷ್ಟೇ ಎಚ್ಚರಿಕೆಯಿಂದ ತಲಾ 750 ಮತದಾರರಿಗೆ ಒಂದರಂತೆ ಸ್ಥಾಪಿಸಲು ಮಾರ್ಗಸೂಚಿ ಹೊರಡಿಸಲಾಗಿದೆ.
Be the first to comment