ಸೈನಿಕರ ಸೇವೆಯನ್ನು ಪ್ರತಿಯೊಬ್ಬರೂ ಸ್ಮರಿಸಬೇಕು: ಬಸವರಾಜ ಹಿಟ್ಟಿನಮಠ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಬಾಗಲಕೋಟೆ:ಮಹಾಲಿಂಗಪುರ ಪಟ್ಟಣದ ಗೋಕುಲ ಹೋಟೆಲ್ ಸಭಾಭವನದಲ್ಲಿ ಅಖಿಲ ಕರ್ನಾಟಕ ಮಾಜಿ ಯೋಧರ ಸಂಘ ದಿಂದ ಹೊಸ ಯರಗುದ್ರಿ ಗ್ರಾಮದ ನಿವೃತ್ತ ಯೋಧ ವೆಂಕಪ್ಪಲಕ್ಕಾರ ಅವರ ಸನ್ಮಾನ ಸಮಾರಂಭ ನಡೆಯಿತು.

CHETAN KENDULI

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಪುರಸಭೆ ಅಧ್ಯಕ್ಷ ಬಸವರಾಜ ಹಿಟ್ಟಿನಮಠ, ದೇಶದ ಬಗ್ಗೆ ಅಭಿಮಾನ ಉಳ್ಳವರು ಮಾತ್ರ ದೇಶದ ಗಡಿ ಕಾಯಲು ಹೋಗುತ್ತಾರೆ.ಸೈನಿಕರು ಹಗಲು-ರಾತ್ರಿ ರಾಷ್ಟ್ರಕ್ಕಾಗಿ ದುಡಿಯುತ್ತಾರೆ.ಅವರ ಸೇವೆಯನ್ನು ಪ್ರತಿಯೊಬ್ಬರೂ ಸ್ಮರಿಸಬೇಕು’ ಎಂದು ಹೇಳಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ವೆಂಕಪ್ಪಲಕ್ಕಾರ,22 ವರ್ಷಗಳವರೆಗೆ ಸೈನಿಕನಾಗಿ ಸೇವೆ ಸಲ್ಲಿಸಿದ ತೃಪ್ತಿ ಇದೆ.ಕಠಿಣ ಪರಿಸ್ಥಿತಿಯಲ್ಲೂ ಸೇವೆ ಮಾಡಿದ್ದು ನನ್ನ ಸೌಭಾಗ್ಯ’ ಎಂದರು.

ಪತ್ರಕರ್ತ ಶಿವಲಿಂಗ ಸಿದ್ಧಾಳ ಮಾತನಾಡಿದರು.ಬಿಡಿಸಿಸಿ ಬಾಂಕ್‌ ನಿರ್ದೇಶಕ ಬಸನಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು.ಲಕ್ಕಾರ ಅವರ ತಂದೆ ಹನಮಂತ, ತಾಯಿ ಶಾಂತವ್ವ, ಪತ್ನಿ ಗೀತಾ, ಮಾಜಿ ಯೋಧರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಸಪ್ಪ ಮುಂಗರವಾಡಿ, ರಾಹುಲ ಜಂಬಗಿ, ಬಸವರಾಜ ದಲಾಲ,ಲಕ್ಷ್ಮೀ ಜಂಬಗಿ ಇದ್ದರು.

Be the first to comment

Leave a Reply

Your email address will not be published.


*