ಬೆಂಗಳೂರು : ಭಟ್ಕಳ ಕಾಂಗ್ರೆಸ್ ಶಾಸಕ ಮಾಂಕಾಳ ವೈಧ್ಯಯವರಿಗೆ ಕ್ಯಾಬಿನೆಟ್ ದರ್ಜೆಯ ಸಚಿವ ಸ್ಥಾನ ನೀಡಬೇಕು ಎಂದು ರಾಜ್ಯ ಬುಡಕಟ್ಟು ಜನಾಂಗ ಸಂರಕ್ಷಣ ಸಮೀತಿ ರಾಜ್ಯಾಧ್ಯಕ್ಷರಾದ ಅಮರೇಶಣ್ಣ ಕಾಮನಕೇರಿಯವರು ಆಗ್ರಹ ಮಾಡಿದರು. ರಾಜ್ಯಾದ್ಯಂತ 45ರಿಂದ 50 ಲಕ್ಷ ಜನಸಂಖ್ಯೆ ಇರುವ ಕೋಲಿ ಬೆಸ್ತ ಮೋಗವೀರ ಸಮುದಾಯವು ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅತೀ ಹೆಚ್ಚಿನ ಸ್ಥಾನ ಗೆಲ್ಲಲು ಹಾಗೂ ಮೈಸೂರಿನ ಕರ್ನಾಟಕ ದಲ್ಲೂ ಹೆಚ್ಚಿನ ಸ್ಥಾನ ಪಡೆಯಲು ಕೋಲಿ ಬೆಸ್ತ ಮೋಗವೀರ ಸಮಾಜವೇ ಕಾರಣ. ಕರ್ನಾಟಕ ಪ್ರದೇಶ ಮೀನುಗಾರ ವಿಭಾಗ ಕಾಂಗ್ರೆಸ ಸಮುದಾಯದ ಮತಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್ ಪರ ಮತ ಚಲಾಯಿಸುವಂತೆ ಮಾಡಿದೆ ರಾಜ್ಯಾಧ್ಯಕ್ಷರಾದ ಮಂಜುನಾಥ ಸುಣಗಾರ ನೇತೃತ್ವದಲ್ಲಿ ನಿರಂತರ ಮೀನುಗಾರರ ಹಕ್ಕುಗಳ ಬಗ್ಗೆ ಮೀನುಗಾರಿಗೆ ಆದ ಅನ್ಯಾಯದ ಬಗ್ಗೆ ಹೋರಾಟ ಮಾಡಿ ಕಾಂಗ್ರೆಸ್ ಪರ ಸಮುದಾಯದ ಒಲವು ತೋರುವಂತೆ ಮಾಡಿ ಸಮಾಜದ ಮತಗಳು ಕಾಂಗ್ರೆಸ್ ಪರ ಮಾಡಿಸಿದ್ದಾರೆ.ಮೀನುಗಾರ ಸಮುದಾಯದವು ಸಮಾಜಿಕವಾಗಿ ತೀರ ಹಿಂದುಳಿರುವ ಕೋಲಿ ಬೆಸ್ತ ಮೋಗವೀರ ಅಭಿವೃದ್ಧಿ ದೃಷ್ಟಿಯಿಂದ ಸಮಾಜದಿಂದ ಶಾಸಕರಾದ ಮಾಂಕಾಳ ವೈದ್ಯರು ಆಯ್ಕೆಯಾಗಿದ್ದು, ಸಂಪುಟ ದರ್ಜೆಯ ಸಚಿವ ಸ್ಥಾನಮಾನ ನೀಡಬೇಕು. ಸಮುದಾಯದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.
ಕನಕಪುರದಲ್ಲಿ ಡಿಕೆ ಶಿವಕುಮಾರ ಗೆಲ್ಲಲು ಕೋಲಿ ಬೆಸ್ತ ಸಮಾಜವೇ ಕಾರಣ ಅದೇ ರೀತಿಯಲ್ಲಿ ವರಣು ಕ್ಷೇತ್ರದಲ್ಲಿ ಸಿದ್ದರಾಮಯ್ಯಯ ಗೆಲ್ಲಲು ಕೂಡ ಕೋಲಿ ಬೆಸ್ತ ಸಮಾಜವೇ ಕಾರಣ ಆದರಿಂದ ಸಮಾಜವನ್ನು ಸಚಿವ ಸ್ಥಾನ ನೀಡುವಲ್ಲಿ ಕಡೆಗಣಿಸಿದರೆ ಮುಂಬರಲಿರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಕ್ಕೆ ಕರ್ನಾಟಕದಾದ್ಯಂತ ತಕ್ಕ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು
Be the first to comment