ಕಾರವಾರ: ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಉತ್ತರಕನ್ನಡ ಜಿಲ್ಲಾಧಿಕಾರಿಗಳ ಕಚೇರಿಯ ಇಬ್ಬರು ಸಿಬ್ಬಂದಿಗಳನ್ನ ಸರಕಾರ ಕೊನೆಗೂ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಭ್ರಷ್ಟಾಚಾರ ದೂರಿನ ಆರೋಪದಡಿ ವರ್ಗಾವಣೆಗೋಂಡ ಸಿಬ್ಬಂದಿ
ದೇವಸ್ಥಾನಗಳ ಜೀರ್ಣೊದ್ಧಾರಕ್ಕಾಗಿ ಹಣವನ್ನು ಒತ್ತಾಯಪೂರ್ವಕವಾಗಿ ಸಾರ್ವಜನಿಕರಿಂದ ಪಡೆಯುತ್ತಾರೆಂಬ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಸಂತೋಷ ಸಿರಸಂಗಿ ಹಾಗೂ ಮುಜರಾಯಿ ಇಲಾಖೆಯ ದ್ವಿತೀಯ ದರ್ಜೆಯ ಸಹಾಯಕ ಸುರೇಶ ಹೊನ್ನಯ್ಯರ್ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಹಾಗೂ ತಕ್ಷಣ ಅವರನ್ನು ವರ್ಗಾಯಿಸುವಂತೆ ಕಳೆದ ನವೆಂಬರ್ 23ರಂದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ಪತ್ರ ಬರೆದಿದ್ದ ಸರ್ಕಾರದ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಪಿ.ಹೆಮಂತರಾಜು ಅವರು ತಕ್ಷಣ ಇವರಿಬ್ಬರನ್ನು ವರ್ಗಾಯಿಸುವ ಸಲುವಾಗಿ ಖಾಲಿ ಹುದ್ದೆಗಳ ಮಾಹಿತಿಯನ್ನು ಕೇಳಿದ್ದರು.ವರ್ಗಾವಣೆಗೊಂಡ ಇನೋರ್ವ ಸಿಬ್ಬಂದಿ
ಅಲ್ಲದೇ ಈ ಸಿಬ್ಬಂದಿಗಳ ವಿರುದ್ಧ ಇಲಾಖಾ ತನಿಖೆ ಸಹ ನಡೆದಿತ್ತು. ಆದರೂ ಕೆಲ ಹಿರಿಯ ಅಧಿಕಾರಿಗಳ ಕೃಪಾಟಾಕ್ಷದಿಂದ ಈ ಇಬ್ಬರು ಸಿಬ್ಬಂದಿಗಳು ಇಲ್ಲಿಯೇ ಮುಂದುವರೆದಿದ್ದರು.
ಜಾಹೀರಾತುವರ್ಗಾವಣೆ ಆದೇಶ ಪ್ರತಿ
ಆದರೆ ಫೆ27 ಗುರುವಾರ ಕಂದಾಯ ಇಲಾಖೆಯ (ಮುಜರಾಯಿ) ಸರ್ಕಾರದ ಅಧೀನ ಕಾರ್ಯದರ್ಶಿ/ಇವರ ವರ್ಗಾವಣೆ ಆದೇಶ ಹೊರಡಿಸಿ, ಹಾಲಿ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂತೋಷ ಸಿರಸಂಗಿಯನ್ನು ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಗೂ ಹಾಗೂ ಮುಜರಾಯಿ ಇಲಾಖೆಯಲ್ಲಿ ದ್ವಿತೀಯ ದರ್ಜೆಯ ಸಹಾಯಕರಾಗಿದ್ದ ಸುರೇಶ ಹೊನ್ನಾಯ್ಕರ್ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಸಹಾಯಕ ಆಯುಕ್ತರ ಕಚೇರಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಭೃಷ್ಟ ಸಿಬ್ಬಂದಿಗಳನ್ನ ವರ್ಗಾವಣೆ ಮಾಡುವಂತೆ ಕಾರವಾರ ಶಾಸಕಿ ರೂಪಾಲಿ ನಾಯ್ಕ ಸರಕಾರಕ್ಕೆ ಬರೆದ ಪತ್ರ
ಈ ಇಬ್ಬರು ಸಿಬ್ಬಂದಿಗಳ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಕಾರವಾರದ ಶಾಸಕಿ ರೂಪಾಲಿ ನಾಯ್ಕ ಸಹ ಸರ್ಕಾರಕ್ಕೆ ದೂರು ನೀಡಿದ್ದನ್ನು ಸ್ಮರಿಸಬಹುದು
Be the first to comment