ಚಂದಾಪೂರದಲ್ಲಿರುವ ಸರಕಾರಿ ಪಿಯು ಕಾಲೇಜು ಚಿಂಚೋಳಿಯ ವಿದ್ಯಾರ್ಥಿಗಳು ಪಿಯು ಪರೀಕ್ಷೆಯಲ್ಲಿ ಶೇ.69 ಶೇಕಡಾವಾರು ಉತ್ತೀರ್ಣರಾಗಿ, ಉತ್ತಮ ದರ್ಜೆ ಪಡೆಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ.
*ಕಲಾ ವಿಭಾಗ* ದಲ್ಲಿ *ಒಟ್ಟು 101* ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇವರಲ್ಲಿ *ರಾಜೇಶ್ವರಿ ಹಣಮಂತರಾವ ವಿದ್ಯಾರ್ಥಿನಿ 516 (ಶೇ.86℅) ಅಂಕಗಳನ್ನು ಪಡೆಯುವ ಮೂಲಕ ಅಗ್ರಾಶ್ರೇಣಿ ( Distinction)* ಯಲ್ಲಿ ಉತ್ತೀರ್ಣಳಾಗಿದ್ದಾಳೆ. ಕಲಾ ವಿಭಾಗದಲ್ಲಿ *ಪ್ರಥಮ ದರ್ಜೆಯಲ್ಲಿ*-19 , *ದ್ವಿತೀಯ ದರ್ಜೆಯಲ್ಲಿ* -43, *ಪಾಸ್ ಕ್ಲಾಸನಲ್ಲಿ*-38 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.
ಅಕ್ಷತಾ ನಾಗಪ್ಪ (496), ಪೂಜಾ ಸದಾಶಿವ (479), ಉಮ್ಮೇತಯ್ಯಬ್ ಜಾವೀದಪಟೇಲ್(471), ಅನುಶಾ ಪ್ರಕಾಶ(463)ರವರು ಕಲಾ ವಿಭಾಗದಲ್ಲಿ ಉತ್ತಮ ಅಂಕಗಳನ್ನು ಪಡೆದಿರುತ್ತಾರೆ.
ವಿಜ್ಣಾನ ವಿಭಾಗದಲ್ಲಿ ಒಟ್ಟು 74 ವಿದ್ಯಾರ್ಥಿಗಳಲ್ಲಿ 50 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. *ಪ್ರಥಮ ದರ್ಜೆಯಲ್ಲಿ*- 10, *ದ್ವಿತೀಯ ದರ್ಜೆಯಲ್ಲಿ*- 24, *ಪಾಸ್ ಕ್ಲಾಸ್ ನಲ್ಲಿ*- 16 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.
ವಿಜ್ಞಾನ ವಿದ್ಯಾರ್ಥಿಗಳಾದ ಪೂಜಾ ಮಲ್ಲಣ್ಣ ಅಮ್ನೇರ್-456, ಸನಾ ಮಹೇಕ್-426, ಯುವರಾಜ ಲಾಲು- 423, ಸಾನಿಯಾ ಫಾತಿಮಾ ಅಬ್ದುಲ್ ನಬಿ-420, ರೇವಣಸಿದ್ದ ರಮೇಶ-393 ರವರು ಉತ್ತಮ ಅಂಕಗಳನ್ನು ಪಡೆದು ಅಗ್ರಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
*ವಾಣಿಜ್ಯ ವಿಭಾಗದಲ್ಲಿ * ಪರೀಕ್ಷೆಗೆ ಹಾಜರಾದ 24 ವಿದ್ಯಾರ್ಥಿಗಳಲ್ಲಿ ಒಟ್ಟು 16* ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.
*ಪ್ರಥಮ ದರ್ಜೆಯಲ್ಲಿ*- 06, *ದ್ವಿತೀಯ ದರ್ಜೆಯಲ್ಲಿ* -04, *ಪಾಸ್ ಕ್ಲಾಸ್ ನಲ್ಲಿ*-06 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಇವರಲ್ಲಿ ನಾಗಾರ್ಜುನ ಸಂಗಮೇಶ-458, ಬಸಮ್ಮ ಬಾಲಪ್ಪ- 431, ದೀಪಿಕಾ ವಿಶ್ವನಾಥ-416, ಭಾಗ್ಯಶ್ರೀ ದಶರಥ-412, ನೇಹಾ ಆಯುಬಖನ್-381, ನಾಗಮ್ಮ ರಮೇಶ-379 ಉತ್ತಮ ಅಂಕಗಳನ್ನು ಗಳಿಸಿದ್ದಾರೆ.
*ವಿಜ್ಞಾನ ವಿಭಾಗದ*- ಶೇಕಡಾವಾರು ಫಲಿತಾಂಶ ಶೇ-66.66℅
*ವಾಣಿಜ್ಯ ವಿಭಾಗದ ಶೇಕಡಾವಾರು ಫಲಿತಾಂಶ* ಶೇ.64℅,
*ಕಲಾ ವಿಭಾಗದ ಶೇಕಡಾವಾರು ಫಲಿತಾಂಶ* ಶೇ.60.9℅ ಫಲಿತಾಂಶ ಬಂದಿರುತ್ತದೆ. ವಿದ್ಯಾರ್ಥಿಗಳ ಅಭೂತಪೂರ್ವ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರಾದ ಮಲ್ಲಿಕಾರ್ಜುನ ಪಾಲಾಮೂರ್ ಹಾಗೂ ಉಪನ್ಯಾಸಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
Be the first to comment