ಜೀಲ್ಲಾ ಸುದ್ದಿಗಳು
ನಾರಾಯಣಪುರ ಗ್ರಾ.ಪಂ.ವ್ಯಾಪ್ತಿಗೊಳಪಡುವ ನಾನಾ ಗ್ರಾಮಗಳಲ್ಲಿ ಹೆಚ್ಚಿರುವ ಅಕ್ರಮ ಮಧ್ಯ ಮಾರಾಟ ಮತ್ತು ಮಟ್ಕಾ ದಂಧೆಗೆ ಕಡಿವಾಣ ಹಾಕಬೇಕೆಂದು ಸ್ವತಃ ನಾನೆ ಇತ್ತೀಚೆಗೆ ಮನವಿ ಪತ್ರ ಸಲ್ಲಿಸಿದರು ಠಾಣಾ ಸಿಬ್ಬಂದಿ ಕ್ರಮಕ್ಕೆ ಮುಂದಾಗದೆ ಇರುವುದು ನಮ್ಮಗೆ ಪೋಲಿಸ ಇಲಾಖೆಯ ಮೇಲೆ ಅನುಮಾನು ಮೂಡಿಸುತ್ತಿದೆ
ಅಮರೇಶ ಕಾಮನಕೇರಿ ಮುಖ್ಯಸ್ಥರು ಅಂಬಿಗ ನ್ಯೂಸ್ ಸಾಮಾಜಿಕ ಕಾರ್ಯಕರ್ತ
ಹುಣಸಗಿ; ನಾರಾಯಣಪುರ ಗ್ರಾ.ಪಂ.ವ್ಯಾಪ್ತಿಗೊಳಪಡುವ ನಾನಾ ಗ್ರಾಮಗಳಲ್ಲಿ ಹೆಚ್ಚಿತಿರುವ ಅಕ್ರಮ ಮದ್ಯ ಮತ್ತು ಮಟ್ಕಾ ದಂಧೆಗೆ ಕಡಿವಾಣ ಹಾಕಬೇಕೆಂದು ಗ್ರಾಮಸ್ಥರು ಇತ್ತೀಚೆಗೆ ಒತ್ತಾಯಿಸಿದ್ದಾರೆ.
ಅಕ್ರಮ ಚಟುವಟಿಕೆ ಮೇಲೆ ಕಡಿವಾಣ ಹಾಕುವಂತೆ ಮನವಿ ಮಾಡಿದ ವಿಡಿಯೋ
ಕಲ್ಯಾಣಿ ಮತ್ತು ಬಾಂಬೆ ಹೆಸರಿನಡಿ ಮಟ್ಕಾ ಬರೆಯಲಾಗುತ್ತಿದೆ.ಕಿರಾಣಿ ಅಂಗಡಿ ಹೋಟಲ್ ಗಳಲ್ಲಿ ಅಕ್ರಮಗಳ ಮದ್ಯ ಮಾರಾಟ ಎಗ್ಗಿಲ್ಲದೆ ಸಾಗುತ್ತಿದ್ದು ನಿತ್ಯ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ ಮತ್ತು ಮಟ್ಕಾ ದಂಧೆ ನಡೆಯುತ್ತಿದೆ. ಪೊಲೀಸ್ ಮೆಟ್ಟಿಲೇರಿ ಬಂದಿದ್ದರೂ ಕೆಲವರು ಅಕ್ರಮ ಮದ್ಯ ಮಾರಾಟ ಮತ್ತು ಮಟ್ಕಾ ಬರೆಯುವುದನ್ನು ಬಿಟ್ಟಿಲ್ಲ. ಕೆಲ ಜನಪ್ರತಿನಿಧಿಗಳ ಕೃಪಾಕಟಾಕ್ಷವೇ ಇದಕ್ಕೆ ಕಾರಣ ಎಂದು ಪ್ರಜ್ಞಾವಂತ ನಾಗರಿಕರು ಮತ್ತು ಸಾರ್ವಜನಿಕ ವಲಯದಲ್ಲಿ ಸಂಶ ವ್ಯಕ್ತಪಡಿಸಿದ್ದಾರೆ. ಕೂಲಿಕಾರರು ದುಡಿದ ಹಣವನ್ನು ಮದ್ಯೆ ಸೇವನೆಗೆ ಮತ್ತು ಮಟ್ಕಾ ದಂಧೆಗೆ ಸುರಿಯುತ್ತಿದ್ದು, ಬಡ ಕುಟುಂಬಗಳಲ್ಲಿ ನೆಮ್ಮದಿ ಹಾಳಾಗಿದೆ.ಪೋಲಿಸ ಇಲಾಖೆಯ ಉನ್ನತ ಅಧಿಕಾರಿಗಳು ಗಮನಹರಿಸಿ ಅಕ್ರಮ ಮದ್ಯ ಮಟ್ಕಾ ದಂಧೆಗೆ ಸಂಪೂರ್ಣ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವಿಶೇಷ
ಯಾದಗಿರಿ ಜೀಲ್ಲೆಯ ಪ್ರತಿ ನಿತ್ಯದ ಕೇಸಗಳು ಮತ್ತು ಇಡೀ ಜೀಲ್ಲೆಯ ಪೋಲಿಸ ಠಾಣಾ ಸಂಪೂರ್ಣ ಮಾಹಿತಿ ಆನ ಲೈನ ಲಭ್ಯ.
ಈ ವೆಬ್ ಸೈಟ್ ಮೂಲಕ S P ಯಾದಗಿರಿ ಯವರ ಪೋನ ಪಡೆಯಬಹುದು ಇ ಮೇಲ್ ಮೂಲಕ ದೂರನು ಸಲ್ಲಿಸ ಬಹುದು
Be the first to comment