ಚಿಂಚೋಳಿ :ಕೆಲವೇ ದಿನಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸಿರುವುದರಿಂದ ತಾಲೂಕಿನಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪೊಲೀಸ ಇಲಾಖೆ ವಿವಿಧ ಗ್ರಾಮಗಳ ಗಡಿಗಳಲ್ಲಿ ಚೆಕ್ ಪೋಸ್ಟ್ ಗಳನ್ನು ತೆರೆದು ಹದ್ದಿನ ಕಣ್ಣಿಟ್ಟಿದೆ ಎಂದು ಚಿಂಚೋಳಿ ಸಿಪಿಐ ಅಮರಪ್ಪಾ ಶಿವಬಲ್ಲ ತಿಳಿಸಿದರು
ಅವರು ನಮ್ಮ ಪ್ರತಿನಿಧಿಯ ಜೊತೆ ಮಾತನಾಡಿ ಕಲಬುರ್ಗಿ ಜಿಲ್ಲಾ ಪೊಲೀಸ ವರೀಷ್ಠಾಧಿಕಾರಿ ಹಾಗೂ ಚಿಂಚೋಳಿ ಡಿವಾಯ್ಎಸ್ಪಿ ಅವರ ಸೂಚನೆಯಂತೆ ತಾಲೂಕಿನ ಮಿರಿಯಾಣ ಕುಸರಂಪಳ್ಳಿ ತುಮಕುಂಟಾ ಹಾಗೂ ಶಿವರಾಮಪೂರ ಗ್ರಾಮಗಳ ಗಡಿಗಳಲ್ಲಿ ಚೆಕ್ ಪೋಸ್ಟರಗಳನ್ನು ತೆರೆಯಲಾಗಿದೆ ತಾಲೂಕಿನಲ್ಲಿ ಅಕ್ರಮ ವಸ್ತುಗಳು ಆಮದು ಹಾಗೂ ರಫ್ತು ಆಗದಂತೆ ಪೊಲೀಸರು ತೀವ್ರವಾದ ನಿಗಾ ಇಟ್ಟಿದ್ದಾರೆಂದರು
ಪಕ್ಕದ ತೆಲಂಗಾಣ ರಾಜ್ಯದಿಂದ ಅಕ್ರಮ ಮದ್ಯ ಹಣ ಸೇರಿದಂತೆ ಇತರೆ ವಸ್ತುಗಳು ತಾಲೂಕಿನಲ್ಲಿ ಬರದಂತೆ ಕ್ರಮ ಕೈಗೊಳ್ಳಲಾಗಿದೆ ಇಲಾಖೆಯ ಸಿಬ್ಬಂದಿಗಳು ಪ್ರತಿಯೊಂದು ವಾಹನಗಳಿಗೆ ತಪಾಸಣೆ ಮಾಡುವುದಲ್ಲದೆ ವಾಹನಗಳ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆಂದು ಶಿವಬಲ್ಲ ತಿಳಿಸಿದರು
ಈ ನಾಲ್ಕು ಚೆಕ್ ಪೋಸ್ಟ್ ಗಳಲ್ಲಿ ಪಿ.ಆರ್.ಇ.ಲೋಕೋಪಯೋಗಿ ಸೇರಿದಂತೆ ಇತರೆ ಇಲಾಖೆಗಳ ಸಿಬ್ಬಂದಿಗಳು ನಮ್ಮ ಇಲಾಖೆಗೆ ಸಹಾಯ ಮಾಡುತ್ತಿದ್ದಾರೆ ಪ್ರತಿಯೊಂದು ಚೆಕ್ ಪೋಸ್ಟ್ ಗಳಲ್ಲಿ ದಿನದ 24 ಗಂಟೆ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು ಸಿಬ್ಬಂದಿಗಳಿಗೆ ವಾಹನ ಚಾಲಕರು ಕಣ್ ತಪ್ಪಿಸಲು ಪ್ರಯತ್ನ ಮಾಡದಂತೆ ಸಿ.ಸಿ.ಕ್ಯಾಮರಾಗಳನ್ನು ಅಳವಡಿಸಲಾಗಿದೆ ಎಂದರು
ತಾಲೂಕಿನಲ್ಲಿ ಶಾಂತಿಯುತವಾಗಿ ಮತದಾನ ನಡೆಯುವಂತೆ ಪೊಲೀಸ ಇಲಾಖೆಯ ಮೇಲಾಧಿಕಾರಿಗಳು ಈಗಾಗಲೇ ನಮಗೆ ಸೂಕ್ತ ನಿರ್ದೇಶನ ಹಾಗೂ ಮಾರ್ಗದರ್ಶನ ನೀಡಿದ್ದಾರೆ ಯಾರಾದರೂ ಅಹಿತಕರ ಘಟನೆಗಳಿಗೆ ಕಾರಣರಾದರೆ ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಅವರು ಕಿಡಿಗೇಡಿಗಳಿಗೆ ಸಂದೇಶ ರವಾನಿಸಿದರು.
Be the first to comment