ಶಾಂತಿಯುತವಾಗಿ ಪ್ರಾರಂಭವಾದ ಎಸ್ಎಸ್ಎಲ್ಸಿ ಪರೀಕ್ಷೆಗಳು*

ಚಿಂಚೋಳಿ ತಾಲೂಕಿನಾದ್ಯಂತ ಎಸ್ಎಸ್ಎಲ್ಸಿ ಪರೀಕ್ಷೆಗಳು ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಕಾರಣವಾಗದೇ ಶಾಂತಿಯುತವಾಗಿ ನಡೆದವು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುಧಾರಾಣಿ ನಾಯ್ಕ ತಿಳಿಸಿದರು

 

ಅವರು ನಮ್ಮ ಪ್ರತಿನಿಧಿಯ ಜೊತೆ ಮಾತನಾಡಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತಾಲೂಕಿನಲ್ಲಿ ಒಟ್ಟು 13 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ ಇಂದು ಮಾತೃಭಾಷೆ ಇರುವುದರಿಂದ 3340 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಸಿದ್ದಾರೆ ಅದರಲ್ಲಿ 3228 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರೆ 112 ವಿದ್ಯಾರ್ಥಿಗಳು ಗೈರಾಗಿದ್ದರೆಂದು ಸುಧಾರಾಣಿ ತಿಳಿಸಿದರು

 

ಆರೋಗ್ಯ ಇಲಾಖೆಯ ಸಿಬ್ಬಂದಿಗಳು ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಮಾಡಿದ ನಂತರ ಕೊಠಡಿಯೊಳಗೆ ಬೀಳ್ಕೊಟ್ಟರು ತಾಲೂಕಿನ ವಿವಿಧ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಯಾವುದೇ ತರಹದ ಅಹಿತಕರ ಘಟನೆ ನಡೆಯದಂತೆ ಡಿವಾಯ್ಎಸ್ಪಿ ರುದ್ರಪ್ಪಾ ಉಜ್ಜನಕೊಪ್ಪ ಸೂಚನೆಯಂತೆ ಚಿಂಚೋಳಿ ಸಿಪಿಐ ಅಮರಪ್ಪಾ ಶಿವಬಲ್ಲ ಸುಲೇಪೇಟ ಸಿಪಿಐ ಚಿಂಚೋಳಿ ಮಿರಿಯಾಣ ಕುಂಚಾವರಂ ಸುಲೇಪೇಟ ರಟಕಲ್ ಪಿಎಸ್ಐ ಹಾಗೂ ಸಿಬ್ಬಂದಿಗಳು ಸೂಕ್ತ ಬಂದುಬಸ್ತ ವಹಿಸಿದರು.

Be the first to comment

Leave a Reply

Your email address will not be published.


*