ಎನ್​​ಕೌಂಟರ್​ ಆದ ಸ್ಲಂ ಭರತ್​ ಯಾರು? ಈತನ ಹಿಸ್ಟರಿ ಏನು?

ವರದಿ: ಅಮರೇಶ ಕಾಮನಕೇರಿ


     ಕ್ರೈಮ್-ಪೋಕಸ್


ಬೆಂಗಳೂರು: ಕುಖ್ಯಾತ ರೌಡಿ ಭರತ್​ ಅಲಿಯಾಸ್​ ಸ್ಲಂ ಭರತ್​ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ. ಕೊಲೆ ಪ್ರಕರಣವೊಂದ್ರಲ್ಲಿ ಬೇಕಾಗಿದ್ದ ಭರತ್, 20 ದಿನಗಳ ಹಿಂದೆ ತನ್ನನ್ನು ಬಂಧಿಸಲು ಮುಂದಾದ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದ. ಬಳಿಕ ಉತ್ತರಪ್ರದೇಶದಲ್ಲಿ ಸಿಕ್ಕಿಬಿದ್ದಿದ್ದ ಆತನನ್ನು ಬೆಂಗಳೂರಿಗೆ ಕರೆತರುವಾಗ ಇಂದು ಮತ್ತೆ ಎಸ್ಕೇಪ್​ ಆಗಲು ಪ್ರಯತ್ನಿಸಿದ್ದ. ಈ ವೇಳೆ ಫೈರಿಂಗ್​ನಲ್ಲಿ ಗಾಯಗೊಂಡಿದ್ದ ಭರತ್​, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಹಾಗಾದ್ರೆ ಭರತ್​ ಯಾರು, ಈತನ ಹಿಸ್ಟರಿ ಏನು ಅನ್ನೋ ಡೀಟೇಲ್ಸ್​ ಇಲ್ಲಿದೆ.

ಸ್ಲಂ ಭರತ್​​​​, ಮಾಜಿ ರೌಡಿ ಮುಲಾಮ ಅಲಿಯಾಸ್ ಲೋಕೇಶನ ಶಿಷ್ಯ. ಮುಲಾಮನ ಗರಡಿಯಲ್ಲಿ ಅನೇಕ ವರ್ಷಗಳ ಕಾಲ ಪಳಗಿದ್ದ. ನಗರದ ರಾಜಗೋಪಲನರ ನಿವಾಸಿಯಾಗಿದ್ದ ಭರತ್​​ ಮೂಲತಃ ರಾಮನಗರದ ಒಂದು ಹಳ್ಳಿಯವನು. ಭರತ್​​​ ಬೆಳೆಯುತ್ತ ಹೋದಂತೆ ರೌಡಿ ಲಕ್ಷ್ಮಣನಿಗೂ ಆಪ್ತನಾಗಿ ಗುರುತಿಸಿಕೊಂಡಿದ್ದ. ಕಳೆದ ವರ್ಷ ಲಕ್ಷ್ಮಣನ ಕೊಲೆಯಾದ ನಂತರ ರೌಡಿ ಸೈಕಲ್ ರವಿ ಜೊತೆಗೆ ಹೆಚ್ಚು ಒಡನಾಟ ಇಟ್ಟುಕೊಂಡಿದ್ದ.

ಲಕ್ಷ್ಮಣನ ನಂತರ ಆತನ ಏರಿಯಾಗೆ ತಾನು ಬಾಸ್ ಆಗಲು ಭರತ್​​​​ ಪ್ಲಾನ್ ಮಾಡಿಕೊಂಡು ಸ್ಕೆಚ್​​ ಹಾಕಿದ್ದ. ಅದಕ್ಕಾಗಿ ಲಕ್ಷ್ಮಣನ ಹುಡುಗರನ್ನು ಕರೆಯಿಸಿ ಪಾರ್ಟಿ ಕೊಟ್ಟು, ಮಾತುಕತೆ ಕೂಡ ನಡೆಸಿದ್ದನಂತೆ. ಅದಕ್ಕೆ ಆ ಹುಡುಗರು, ಲಕ್ಷ್ಮಣನ ಹತ್ಯೆ ಮಾಡಿದವರನ್ನ ಮುಗಿಸಿದ್ರೆ ಓ.ಕೆ ಅಂದಿದ್ರಂತೆ. ಈ ವೇಳೆ ತನ್ನ ಗುರುವನ್ನ ಮರೆಯದ ಸ್ಲಂ ಭರತ್​, ಮುಲಾಮನ ಜೊತೆ ಸಂಪರ್ಕದಲ್ಲಿ ಇದ್ದುಕೊಂಡೇ ಹೆಸರು ಮಾಡಬೇಕು ಅನ್ನೋದು ತಿಳಿದಿದ್ದ. ಅದರಂತೆ ಕಳೆದ ವರ್ಷ ಕೆಲ ಸ್ಯಾಂಡಲ್​ವುಡ್​​ ಸ್ಟಾರ್ ನಟರ ವಿರುದ್ಧ ಸುಪಾರಿ ಪಡೆದಿದ್ದ. ಅಲ್ಲದೇ ಸ್ಟಾರ್ ನಟನ ಕೊಲೆಗೆ, ಕುರುಬರಹಳ್ಳಿ ಶಫಿ ಜೊತೆ ಸ್ಕೆಚ್ ಕೂಡ ಹಾಕಿದ್ದ. ಇದೇ ವಿಚಾರದಲ್ಲಿ ಇತ್ತೀಚೆಗೆ ಭರತ್​​ನ ಕಾಲಿಗೆ ಸಿಸಿಬಿ ಅಧಿಕಾರಿಗಳು ಗುಂಡು ಹಾರಿಸಿದ್ರು. ಇದಾದ ನಂತರ ಭರತ್ ಜೈಲು ಸೇರಿದ್ದ​. ಜೈಲಿನಿಂದ ಬಂದ ಕೆಲವೇ ಕೆಲವು ದಿನಗಳಲ್ಲಿ ಭರತ್​​ ಹಳೇ ದ್ವೇಷದ ನೆಪದಲ್ಲಿ ಕಾಮಾಕ್ಷಿಪಾಳ್ಯದ ಮಹೇಶ್​​ನ ಕಥೆ ಮುಗಿಸಿದ್ದ.

ಇನ್ನು ಈ ಸ್ಲಂ ಭರತನಿಗೆ ಕತ್ರಿಗುಪ್ಪೆ ಲಿಂಗ ಬದ್ಧ ವೈರಿ. ಹೀಗಾಗಿ ಸೈಕಲ್‌ ರವಿ ಜೊತೆ ಸೇರಿ ಲಿಂಗನ ಶಿಷ್ಯರನ್ನ ಮುಗಿಸಲು ಪ್ಲಾನ್ ಮಾಡಿದ್ದ. ಅದರಂತೆ ಮೊದಲು ಕತ್ರಿಗುಪ್ಪೆ ಪವನನ ಹತ್ಯೆಗೆ ಸ್ಕೆಚ್ ಹಾಕಿದ್ದ. ಅಲ್ಲದೇ ಎರಡು ತಿಂಗಳ ಹಿಂದೆ‌ ಲಕ್ಷ್ಮಣನ ಶಿಷ್ಯರಿಗೆ ಮಾತು ಕೊಟ್ಟಂತೆ, ಲಕ್ಷ್ಮಣನ ಕೊಲೆ ಆರೋಪಿ‌ ಹೇಮಿಯ ತಮ್ಮ ಚೇತೂ ಮೇಲೂ ಆಟ್ಯಾಕ್ ಮಾಡಿಸಿದ್ದ. ಎರಡು ಬಾರಿ ಸ್ಕೆಚ್ ಮಿಸ್ ಆಗಿ ಚೇತೂ ಬಚಾವ್ ಆಗಿದ್ದ.

ಸೈಕಲ್ ರವಿ ಮತ್ತು ಸ್ಲಂ ಭರತ ಬೆಂಗಳೂರು ಸೌತ್ ಮತ್ತು ನಾರ್ತ್​​ ಅಂತಾ ಡಿವೈಡ್ ಮಾಡಿಕೊಂಡು ರೌಡಿಸಂ ಮಾಡಲು ಒಪ್ಪಂದ ಮಾಡಿಕೊಂಡಿದ್ದರು ಎನ್ನಲಾಗಿದೆ. ಅದರಂತೆ ಸೌತ್​​ನಲ್ಲಿ ಸೈಕಲ್ ರವಿ ಮೆಂಟೈನ್ ಮಾಡ್ತಿದ್ರೆ ನಾರ್ತ್​​ನಲ್ಲಿ ಭರತ ಮೆಂಟೈನ್ ಮಾಡ್ತಿದ್ದ ಎನ್ನುತ್ತಾರೆ ಪೊಲೀಸರು

Be the first to comment

Leave a Reply

Your email address will not be published.


*