ವಿಜಯನಗರ :ಜಿಲ್ಲೆ ಕೂಡ್ಲಿಗಿ ನ್ಯಾಯಾಲಯ ಸಿಬ್ಬಂದಿ, ಹಾಗೂ ಕಾನೂನು ಸೇವಾ ಸಮಿತಿ. ವಕೀಲರ ಸಂಘ ಮತ್ತು ಪಟ್ಟಣ ಪಂಚಾಯ್ತಿ ವತಿಯಿಂದ, ವಿಶ್ವ ಜಲ ಸಂರಕ್ಷಣಾ ದಿನಾಚರಣೆ ಆಚರಿಲಾಯಿತು. ಜಲ ಸಂರಕ್ಷಣೆ ಕುರಿತು ಜಾಗ್ರತೆ ಮೂಡಿಸಲು, ಜಾಥಾ ಆಯೋಜಿಸಲಾಗಿತ್ತು. ನ್ಯಾಯಾಲಯದ ಆವರಣದಲ್ಲಿ ಜಾಗೃತಿ ಜಾಥಾದ ಉದ್ಘಾಟನೆಯನ್ನು, ಕಿರಿಯ ಶ್ರೇಣಿ ನ್ಯಾಯಾಧೀಶರಾದ ಮುರುಗೇಂದ್ರ ತುಬಾಕೆರವರು ಉದ್ಘಾಟಿಸಿದರು. ಅವರು ನೆರೆದವರಿಗೆ ವೈಯಕ್ತಿಕ ಸ್ವಚ್ಚತೆ ಹಾಗೂ ಪರಿಸರದಲ್ಲಿ ಸ್ವಚ್ಚತೆ ಕಾಪಾಡುವ ಕುರಿತು ಮತ್ತು ಜಲ ಸಂರಕ್ಷಣೆ ಹಾಗೂ ಮಿತವ್ಯಯ ಕುರಿತು ಪ್ರಮಾಣ ವಚನ ಬೋಧಿಸಿದರು. ಜಾಥದ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ, ಪ್ರಮುಖ ವೃತ್ತಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ಪ್ಯಾನಲ್ ವಕೀಲರು ಹಾಗೂ ವಕೀಲರ ಸಂಘದ ಅಧ್ಯಕ್ಷರಾದ ಜಿ.ಎಮ್.ಮಲ್ಲಿಕಾರ್ಜುನಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಲ ಸಂರಕ್ಷಣೆ ಕುರಿತು ಮಾತನಾಡಿದರು. ನ್ಯಾಯಾಲಯದ ಸಿಬ್ಬಂದಿ, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಫಿರೋಜ್ ಖಾನ್, ಆರೋಗ್ಯಾಧಿಕಾರಿ ಗೀತಾ, ಪಟ್ಟಣದ ನೀರಗಂಟಿಗರಾದ ವೆಂಕಟೇಶಪ್ಪ, ಬಿ.ವೆಂಕಟೇಶ, ಪಕೃದ್ದೀನ್ ಸಾಬ್, ಚಿತ್ತಪ್ಪ, ನಾಯ್ಕ, ಭೀಮೆಶ, ಸಿರಿವಲ್ಲವರ ಮಲ್ಲಪ್ಪ ಸೇರಿದಂತೆ ಪಟ್ಟಣದ ಎಲ್ಲಾ ನೀರಗಂಟಿಗರು ಹಾಗೂ ಪಪಂ ಸಿಬ್ಬಂದಿ. ಕಾನೂನು ಸೇವಾ ಸಮಿತಿ ಸಿಬ್ಬಂದಿ, ಸರ್ಕಾರಿ ಸಹಾಯಕ ಅಭಿಯೋಜಕರಾದ ವೈ.
ಶಿಲ್ಪ, ವಕೀಲರ ಸಂಘದ ಉಪಾಧ್ಯಕ್ಷರಾದ ವೆಂಕಟೇಶ,ಕಾರ್ಯದರ್ಶಿ ಡಿ.ಕೆ.ಬಿ.ರಾಜು, ಪದಾಧಿಕಾರಿಗಳು ಹಾಗೂ ಸರ್ವಸದಸ್ಯರು, ವಿವಿದ ಮಹಿಳಾ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಜಾಥದಲ್ಲಿ ಭಾಗವಹಿಸಿದ್ದರು. ಹೋರಾಟಗಾರರು ಹಾಗೂ ವಕೀಲರಾದ ಸಿ.ವಿರುಪಾಕ್ಷಪ್ಪ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Be the first to comment