ತಿಂಥಣಿ ಜಗದ್ಗುರು ಮೌನೇಶ್ವರ ದೇವಸ್ಥಾನದಲ್ಲಿ ಬೇವು,ಬೆಲ್ಲ ಸವಿದ ಭಕ್ತಾದಿಗಳು.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಗ್ರಾಮದ ಆರಾಧ್ಯ ದೈವ ತಿಂಥಣಿ ಮೌನೇಶ್ವರ ದೇವಸ್ಥಾನದಲ್ಲಿ ಇಂದು ಚಂದ್ರಮಾನ ಯುಗಾದಿ ಹಬ್ಬದ ಪ್ರಯುಕ್ ಕರ್ನಾಟಕ ರಾಜ್ಯ ಧಾರ್ಮಿಕ ದಿನಾಚರಣೆ ಆಚರಿಸುವ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತಮುತ್ತಲು ತಳೀರು ತೋರಣಗಳಿಂದ ಮತ್ತು ಹೂವಿನಿಂದ ಅಲಂಕಾರ ಮಾಡಿರುವ ದೃಶ್ಯ ಭಕ್ತಾದಿಗಳ ಕಣ್ಮನ‌ ಸೆಳೆಯುವಂತೆ ಹಾಗೂ ಮದುವಣಗಿತ್ತೆಯಂತೆ ಅಲಂಕಾರಗೊಂಡ ಜಗದ್ಗುರು ತಿಂಥಣಿ ಮೌನೇಶ್ವರ ದೇವಸ್ಥಾನದಲ್ಲಿ ಭಕ್ತಾದಿಗಳು ಇಂದು ಬೇವು ,ಬೆಲ್ಲ ಸವಿದು ಹಬ್ಬ ಆಚರಣೆ ಮಾಡಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರು ಹಾಗೂ ವ್ಯವಸ್ಥಾಪನ ಸೇವಾ ಸಮಿತಿಯ ಸದಸ್ಯ ಮಲ್ಲಪ್ಪ ಕೆಸಿಪಿ, ವ್ಯವಸ್ಥಾಪನ ಸೇವಾ ಸಮಿತಿಯ ವ್ಯವಸ್ಥಾಪಕ ಶಿವಾನಂದ ಸ್ವಾಮಿ , ಕಂಪ್ಯೂಟರ್ ಆಪರೇಟರ್ ಸುಭಾಷ್, ವೆಂಕೋಬ ದೊರೆ ಇತರರು ಭಾಗಿಯಾಗಿದ್ದರು.

 

Be the first to comment

Leave a Reply

Your email address will not be published.


*