ಲಿಂಗಸಗೂರು: ಉಪಕೃಷಿ ನಿರ್ದೆಶಕಿ ದಲಿತ ಮಹಿಳಾ ಅಧಿಕಾರಿಯಾದ ಸರಸ್ವತಿಯ ಮೇಲೆ ರೈತಸಂಘ ಹಾಗೂ ಹಸಿರುಸೇನೆ ತಾಲೂಕಾ ಅಧ್ಯಕ್ಷ ಶಿವಪುತ್ರಗೌಡ ಜಾಗೀರನಂದಿಹಾಳ ಇವರು ಸುಳ್ಳು ಆರೋಪಗಳನ್ನು ಮಾಡಿದ್ದು ಆತನ ಮೇಲೆ ಸೂಕ್ತ ಕ್ರಮಕ್ಕೆ ಒತ್ತಾಯಿಸಿ ತಾಲೂಕಾ ಛಲವಾದಿ ಮಹಾಸಭಾದಿಂದ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪಟ್ಟಣದ ಎಸಿ ಕಚೇರಿಯ ಸಹಾಯಕ ಆಯುಕ್ತ ಅವಿನಾಶ ಸಿಂದೆ ಇವರಿಗೆ ಮನವಿ ಸಲ್ಲಿಸುವ ಮೂಲಕ ಪ್ರತಿಭಟಿಸಿದರು. ಕೃಷಿ ಇಲಾಖೆಗೆ ಸರ್ಕಾರದಿಂದ ಬಂದಿರುವ ಹಲವಾರು ಕೃಷಿ ಪರಿಕರಗಳು ಇಲಾಖೆಯ ಕಟ್ಟಡದಲ್ಲಿ ದಾಸ್ತಾನು ಇಟ್ಟಿದ್ದು ಅದು ಸಂಪೂರ್ಣವಾಗಿ ತಾಲೂಕಾ ಕೃಷಿ ಅಧಿಕಾರಿ ಆರೀಫ್ ಅಕ್ತರ ಸುಪರ್ದಿಗೆ ಬರುತ್ತದೆ. ಅದರ ಅನುಷ್ಟಾನ ಅಧಿಕಾರಿಗಳು ಸಹಾಯಕ ಕೃಷಿ ನಿರ್ದೆಶಕರೆ ಆಗಿರುತ್ತಾರೆ ಮತ್ತೊಂದೆಡೆ ಪ್ರಕರಣ ಹೊರಬಂದಾಗ ತನಿಖಾಧಿಕಾರಿಯನ್ನಾಗಿ ಉಪಕೃಷಿ ನಿರ್ದೇಶಕರ ನಿಯಮಿಸಬಹುದಾಗಿತ್ತು ಆದರೆ ಅವರ ಗಮನಕ್ಕೆ ವಿಷಯ ತಿಳಿಸದೆ ಆರೀಫ್ ಆಕ್ತರಗೆ ತಂಡದ ಮುಖ್ಯಸ್ಥರನ್ನಾಗಿ ನಿಯಮಬಾಹಿರವಾಗಿ ನೇಮಿಸಿರುತ್ತಾರೆ, ಅಲ್ಲದೆ ನಾಲ್ಕನೆ ಶನಿವಾರ ರಜಾದಿನದಂದು ಗೌಪ್ಯವಾಗಿ ಪಂಚನಾಮೆಯನ್ನು ಮಾಡಿದ್ದು ಗಮನಕ್ಕೆ ಬಂದಿದೆ.
ಈ ವಿಷಯವನ್ನು ಉಪಕೃಷಿ ನಿರ್ದೇಶಕರಾದ ಸರಸ್ವತಿಯವರ ಗಮನಕ್ಕೆ ತಂದಿರುವುದಿಲ್ಲ ಅಲ್ಲದೆ ಕೃಷಿ ಇಲಾಖೆಯ ಗೃಹದಲ್ಲಿ ವಸ್ತುಗಳ ದಾಸ್ತಾನು ಮತ್ತು ಅನುಷ್ಠಾನ ಎಡಿಯವರದೆ ಆಗಿರುತ್ತದೆ ಆದರೆ ಅವರನ್ನೆ ತನಿಖಾ ತಂಡದ ಮುಖ್ಯಸ್ಥರನ್ನಾಗಿ ಮಾಡಿರುವುದು ಎಷ್ಟು ಸರಿ ಮತ್ತು ದಾಸ್ತಾನು ಮಾಡಿರುವುದಕ್ಕೆ ನೇರಹೊಣೆ ಎಡಿಯವರೆ ಆಗುತ್ತಾರೆ ತನಿಖೆ ನಡೆಸಿದ ನಂತರ ಜೆಡಿ ದೇವಿಕಾರವರು ಕ್ರಮಜರುಗಿಸಬಹುದಾಗಿತ್ತು ಆದರು ಇದುವರೆಗೂ ಯಾವುದೇ ಕ್ರಮ ಜರುಗಿಸಿರುವುದಿಲ್ಲ ಎಡಿಯವರ ಮೇಲೆ ಇರುವ ದೂರನ್ನು ಉಪಕೃಷಿ ನಿರ್ದೇಶಕರಾದ ಸರಸ್ವತಿಯವರ ಮೇಲೆ ವಿನಾಕಾರಣ ಮಾಡಲಾಗುತ್ತಿದೆ ಮತ್ತು ಯಾವುದೆ ದಾಖಲಾತಿಗಳು ಇರುವುದಿಲ್ಲ ತಪ್ಪುಮಾಡದೆ ಇರುವ ದಲಿತ ಮಹಿಳಾ ಅಧಿಕಾರಿ ಎನ್ನುವ ಕಾರಣಕ್ಕೆ ಇವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ತಿರುಚಿ ಮೇಲಾಧಿಕಾರಿಗಳಿಗೆ ಬರೆಯುವದನ್ನು ಛಲವಾದಿ ಮಹಾಸಭಾ ಖಂಡಿಸುತ್ತದೆ ಮತ್ತು ರೈತ ಸಂಘದ ಅಧ್ಯಕ್ಷ ಶಿವಪುತ್ರಗೌಡನ ಮೇಲೆ ಕ್ರಮ ಜರುಗಿಸಬೇಕು ತಪ್ಪುಮಾಡದ ದಲಿತ ಮಹಿಳಾ ಅಧಿಕಾರಿಯ ಮೇಲೆ ಕ್ರಮಕ್ಕೆ ಮುಂದಾದರೆ ಛಲವಾದಿ ಸಂಘಟನೆಯಿಂದ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಆಗ್ರಹಿಸಿದರು.
ಈ ವೇಳೆ ಚಲವಾದಿ ಮುಖಂಡ ಪಂಪಾಪತಿ ಪರಂಗಿ, ಕಾರ್ಯಾಧ್ಯಕ್ಷ ಆದಪ್ಪ ನಗನೂರ, ಅಮರೇಶ ಕುಪ್ಪಿಗುಡ್ಡ, ಶರಣಬಸವ ಕಡ್ಡೋಣಿ, ಕುಬೇರ ಕುಪ್ಪಿಗುಡ್ಡ, ರಾಜಶೇಖರ ಶಿವಂಗಿ, ಸಂಜೀವಮೂರ್ತಿ, ಗುಂಡಪ್ಪ ಯರಡೋಣಾ ಸೇರಿದಂತೆ ಇದ್ದರು.
Be the first to comment