ಸುರಪುರ 24×7 ಶಾಶ್ವತ ಕುಡಿಯುವ ನೀರಿನ ಕಾಮಗಾರಿಗಾರಿಯನ್ನು ಲೋಕಾರ್ಪಣೆ ಮಾಡಿದ ಭೈರತಿ.

ಯಾದಗಿರಿ ಜಿಲ್ಲೆಯ ಸುರಪುರ ನಗರದ ವೀರಶೈವ ಕಲ್ಯಾಣ ಮಂಟಪದ ಆವರಣದಲ್ಲಿ ಇಂದು 24×7 ಶಾಶ್ವತ ಕುಡಿಯುವ ನೀರಿನ ಕಾಮಗಾರಿಯನ್ನು ಕರ್ನಾಟಕ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಅವರು ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಬೆಂಗಳೂರು ಹಾಗೂ ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕ ನರಸಿಂಹ ನಾಯಕ್ (ರಾಜುಗೌಡ) ಅವರು ಜ್ಯೋತಿ ಬೆಳಗಿಸುವುದರ ಜೊತೆಗೆ ಶಾಶ್ವತ ಕುಡಿಯುವ ನೀರನ್ನು ನಲ್ಲಿ ಆರಂಭ ಮಾಡುವ ಮೂಲಕ ಲೋಕಾರ್ಪಣೆಗೊಳಿಸಿದರು.ಸುರಪುರ ನಗರ ಮತ್ತು ಮಾರ್ಗ ಮಧ್ಯದ ಮೂರು ಹಳ್ಳಿಗಳಿಗೆ ಎರಡನೇ ಹಂತದ ಕುಡಿಯುವ ನೀರು ಸರಬರಾಜು ಯೋಜನೆಯು ಸುಮಾರು 195.5 ಕೋಟಿ ರೂಪಾಯಿಗಳ ವೆಚ್ಚದಲ್ಲಿ ದೇವಾಪುರ ಗ್ರಾಮದ ಕಂಪಾಪುರ ಆಂಜನೇಯನ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿರುವ ಕೃಷ್ಣಾ ನದಿಯಿಂದ ಸುರಪುರ ನಗರಕ್ಕೆ ಪ್ರತಿ ದಿನವು 24*7 ಶಾಶ್ವತ ಕುಡಿಯುವ ನೀರನ್ನು ಪ್ರತಿ ಮನೆ ಮನೆಗೆ ಒದಗಿಸಿದ ಆಧುನಿಕ ಭಗೀರಥ ಸುರಪುರ ಪಟ್ಟಣಕ್ಕೆ ಸುಮಾರು 40 ವರ್ಷದಿಂದ ಶಾಶ್ವತ ಕುಡಿಯುವ ನೀರು ಇಲ್ಲದೆ ಪಟ್ಟಣದ ಸಾರ್ವಜನಿಕರು ಪರದಾಡುವಂತ ಪರಿಸ್ಥಿತಿ ಇರುವುದನ್ನು ಮನಗಂಡಾ ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕ ನರಸಿಂಹ ನಾಯಕ್ ‌(ರಾಜುಗೌಡ) ಅವರು ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 3 ಬಾರಿ ಶಾಸಕರನ್ನಾಗಿ, ಒಂದು ಬಾರಿ ಸಚಿವನನ್ನಾಗಿ, ಹಾಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿಗಮ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಲು ಅನುಕೂಲ ಮಾಡಿಕೊಟ್ಟಂತ ಸುರಪುರ ನಗರದ ಜನೆತೆಯ ಬಹಳ ದಿನಗಳ ಕನಸು ಇಂದಿಗೆ ನನಸು ಮಾಡಿದ್ದೇನೆ ಮತ ಬ್ಯಾಂಕ್ ಗೋಸ್ಕರ ನಾನು ಈ ಒಂದು ಕಾರ್ಯವನ್ನು ಮಾಡಿಲ್ಲಾ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದಂತ ಸಾರ್ವಜನಿಕರ ಮುಂದೆ ಸ್ಪಷ್ಟನೆ ನೀಡಿದರು.

2022-23 ನೇ ಸಾಲಿನ ಅನುದಾನದಲ್ಲಿ ರೂಪಾಯಿ 127.7 ಕೋಟಿಗಳ ವೆಚ್ಚದಲ್ಲಿ ಸುಮಾರು 56.355 ಎಕರೆ ಭೂಮಿಗೆ ನೀರು ಹರಿಸುವ ಏತ ನೀರಾವರಿ ಕೇಂದ್ರಗಳಾದ ದೇವತ್ಕಲ್ ಏತ ನೀರಾವರಿ, ಕೆ.ತಳ್ಳಳ್ಳಿ ಏತ ನೀರಾವರಿ ಹಾಗೂ ಭೈರಿಮಡ್ಡಿ ಕೆರೆಯಿಂದ ಪೀಡರ್ ಮೂಲಕ ನೀರಾವರಿ ಏದಲಬಾವಿ ಏತ ನೀರಾವರಿ ಕಾಮಗಾರಿಗಳಿಗೆ ಶಂಕು ಸ್ಥಾಪನೆಯನ್ನು ನೇರವೇರಿಸಿದರು.

 

ಈ ಸಂದರ್ಭದಲ್ಲಿ ರಾಯಚೂರು ಲೋಕಸಭಾ ಸದಸ್ಯ ರಾಜಾ ಅಮರೇಶ್ವರ ನಾಯಕ, ನಗರಸಭೆ ಅಧ್ಯಕ್ಷೆ ಸುಜಾತ ವೇಣುಗೋಪಾಲ ಜೇವರ್ಗಿ,ಉಪಾಧ್ಯಕ್ಷ ಮಹೇಶ್ ಪಾಟೀಲ್, ಡಿಸಿಸಿ ಬ್ಯಾಂಕ್ ನ ಉಪಾಧ್ಯಕ್ಷ ಸುರೇಶ ಸಜ್ಜನ್, ಭಾರತೀಯ ಜನತಾ ಪಕ್ಷದ ಮುಖಂಡರಾದ ಎಚ್.ಸಿ.ಪಾಟೀಲ್, ಬಿ.ಎಮ್ ಅಳ್ಳಿಕೋಟಿ ಪ್ರಥಮ‌ ದರ್ಜೆ ಗುತ್ತಿಗೆದಾರರು ,ಬಿಜೆಪಿ ಪಕ್ಚದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತ ಭಾಗಿಯಾಗಿದ್ದರು.

Be the first to comment

Leave a Reply

Your email address will not be published.


*