ಮುಷ್ಕರ ನಿರತ NHM ಒಳ ಗುತ್ತಿಗೆ ನೌಕರರಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಪತ್ರ.

ಯಾದಗಿರಿ ಜಿಲ್ಲೆಯ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ NHM ಒಳ ಗುತ್ತಿಗೆ ನೌಕರರ ಸಂಘ (ರಿ) ಬೆಂಗಳೂರು ವತಿಯಿಂದ ತಮ್ಮ ಗಮನಕ್ಕೆ ಖುದ್ದಾಗಿ ಬಂದು ದಿನಾಂಕ 13.02.2023 ರಂದು ಜೊತೆಗೆ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಇವರಿಗೂ ಕೂಡ ಮಿಂಚಂಚೆ ಮೂಲಕ ದಿನಾಂಕ 10.02.2023 ರಂದು ಕಳುಹಿಸಿ ನಮ್ಮ ಏಕೈಕ ಬೇಡಿಕೆಯಾದ ಖಾಯಮಾತಿ ಮಾಡಲು ದಿನಾಂಕ 13.02.2023 ರಿಂದ NHM ಒಳ ಗುತ್ತಿಗೆ ನೌಕರರಾದ ನಾವುಗಳು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಂಡು ಬಂದಿರುತ್ತೇವೆ.

 

ಈ ವಿಷಯವಾಗಿ ಮಾನ್ಯರಾದ ತಾವಗಳು ಹಾಗೂ ಮಾನ್ಯ ಆಯುಕ್ತರು ಆರೋಗ್ಯ ಇಲಾಖೆ ಇವರು ಮಾನ್ಯ ಮುಖ್ಯಮಂತ್ರಿಗಳ ಆಶ್ವಾಸನೆ ಹಾಗೂ ಆರೋಗ್ಯ ಸಚಿವರ ಆದೇಶದ ಮೇರೆಗೆ ನಮ್ಮ ಮುಷ್ಕರದ ಸ್ಥಳಕ್ಕೆ ದಿನಾಂಕ 01.03.2023 ರಂದು ಮುಷ್ಕರದ 17ನೇ ದಿನದಂದು ಖುದ್ದು ಭೇಟಿ ನಿಡುರುತ್ತೀರಿ.ಬೇಟಿ ನೀಡಿದ ಸಂದರ್ಭದಲ್ಲಿ ಯಾವುದೇ ಆಶ್ವಾಸನೆ ಪ್ರತಿಗಳನ್ನು ನೀಡಿರುವುದಿಲ್ಲ.ನಮ್ಮ ಏಶ್ಯಕ ಬೇಡಿಕೆಯಾದ NHM ಒಳ ಗುತ್ತಿಗೆ ನೌಕರರ ಖಾಯಮಾತಿ ಎಂಬುದನ್ನು ತಮ್ಮ ಆದ್ಯ ಗಮನಕ್ಕೆ ಮುಷ್ಕರದ ಸ್ಥಳದಲ್ಲಿ ತಂದಿರುತ್ತವೆ. ಇದನ್ನು ಬಿಟ್ಟು ಬೇರೆ ಯಾವುದೇ ಬೇಡಿಕೆಗಳನ್ನು (ಶ್ರೀನಿವಾಸ ಆಚಾರಿ ವರದಿ ಅಥವಾ 15% ವೇತನ ಹೆಚ್ಚಳ) ನಾವು ಬೇಡವೆಂದು ಸ್ಪಷ್ಟವಾಗಿ ತಮ್ಮ ತಿಳಿಸಿರುತ್ತೇವೆ.

 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರು ನಮ್ಮ ಅಹವಾಲುಗಳಿಗೆ ಸ್ಪಂದಿಸಿ ಈಗಾಗಲೇ ಸರ್ಕಾರದ ಜೊತೆ ನಮ್ಮ ಬೇಡಿಕೆ ಈಡೇರಿಕೆಗೆ ಚರ್ಚಿಸಿದ್ದು ಸೂಕ್ತವಾದ ಹಾಗೂ ಎಲ್ಲರ ಒಳಿತಿಗಾಗಿ ಹೇಗ ಬೇರೆ ಬೇರೆ ರಾಜ್ಯಗಳಲ್ಲಿ NHM ಒಳ ಗುತ್ತಿಗೆ ನೌಕರರನ್ನು ಖಾಯಮಾತಿ ಮಾಡಿದ್ದಾರೆ ಎಂಬುದನ್ನು ಪರಿಶೀಲಿಸಲಾಗಿದ್ದು ಸರ್ಕಾರಕ್ಕೆ ಮಾಹಿತಿ ನೀಡಿರುತ್ತೇವೆ ಎಂದು ನಮಗೆ ತಿಳಿಸಿರುತ್ತೀರಿ ನಿಮ್ಮೆಲ್ಲರ ಪರವಾಗಿ ನಾವುಗಳು ಒಂದು ಒಳ್ಳೆಯ ಸಂದೇಶ ರವಾನೆ ಮಾಡುವುದಾಗಿ ನಮ್ಮ ಎಲ್ಲ ನೌಕರರ ಸಮ್ಮುಖದಲ್ಲಿ ಅಧಿಕೃತವಾಗಿ ಹೇಳಿರುತ್ತೀರಿ. ಇದಕ್ಕೆ ನಾವುಗಳು ತಮಗೆ ಆಭಾರಿಯಾಗಿರುತ್ತೇವೆ. ಜೊತೆಗೆ ತಾವುಗಳು ಅಂದೇ ನಮ್ಮ ಮುಷ್ಕರವನ್ನು ಹಿಂಪಡೆಯಲು ಹೇಳಿದಾಗ ಮುಂದಿನ ದಿನ ಅಂದರೆ, ದಿನಾಂಕ 02.03.2023 ರಂದು ನಮ್ಮ ಸಂಘದ ನಿಯೋಗವು ಬಂದು ತಿಳಿಸುತ್ತದೆ ಎಂದು ತಿಳಿಸಿರುತ್ತೇವೆ’ ಅದೇ ರೀತಿಯಾಗಿ ದಿನಾಂಕ 02.03.2023 ರಂದು ನಮ್ಮ ಸಂಘದ ನಿಯೋಗವು ತಮ್ಮ ಕಚೇರಿಗೆ ಖುದ್ದು ಭೇಟಿ ನೀಡಿ ಖಾಯಮಾತಿ ಮಾಡದೆ ಮುಷ್ಕರವನ್ನು ಹಿಂಪಡೆಯುವುದಿಲ್ಲಾ ಎಂದು ತಮ್ಮ ಗಮನಕ್ಕೆ ತಂದಿರುತ್ತೇವೆ. ಅದಾದ ನಂತರ ತಮ್ಮ ಹಾಗೂ ಸರ್ಕಾರದ ಕಡೆಯಿಂದ ಇಲ್ಲಿಯವರೆಗೂ ನಮಗೆ ಸ್ಪಷ್ಟವಾದ ಲಿಖಿತ ರೂಪದಲ್ಲಿ ಯಾವುದೇ ಸಂದೇಶ ರವಾನೆಯಾಗಿರುವುದಿಲ್ಲ. ಆದಾಗ್ಯೂ ನಾವುಗಳು ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾ ಕಾರ್ಯ ನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಇವರಿಗೆ ಮತ್ತೊಮ್ಮೆ ಮಿಂಚಂಚೆ ಮೂಲಕ ದಿನಾಂಕ 09.03.2023 ರಂದು ನಮ್ಮ ಮುಷ್ಕರದ ಬಗ್ಗೆ ಇನ್ನೂ ಕೆಲವು ದಿನಗಳ ಕಾಲ ಸಮಯಾವಕಾಶ ಕೇಳಿ ಮಿಂಚಂಚೆ ಮೂಲಕ ಮಾಹಿತಿಯನ್ನು ರಾಜ್ಯ ಸಂಘದಿಂದ ಕಳುಹಿಸಿ ಕೊಟ್ಟಿರುತ್ತೇವೆ, ಆದರೆ ದಿನಾಂಕ 16.03.2023 ರಂದು ತಮ್ಮ ಪತ್ರದಲ್ಲಿ 2025 ನೇ ಇಸವಿಗೆ Mission Mode Project ಮುಕ್ತಾಯ ವಾಗುವ ಸೂಚನೆ ಹಾಗೂ ಎಚ್ಚರಿಕೆಯನ್ನು ಸಹ ನಮಗೆ ನೀಡಿರುವುದು ಅತ್ಯಂತ ವಿಷಾದನೀಯ ವಿಷಯ, ಇದೇ Mission Mode Project ಹಾದಿಯಲ್ಲಿ ನಮ್ಮ ದೇಶದ ಅನೇಕ ರಾಜ್ಯಗಳು NHM ಒಳ ಗುತ್ತಿಗೆ ನೌಕರರನ್ನು ಖಾಯಂ ಮಾಡಿರುವುದನ್ನು ತಮ್ಮ ಹಾಗೂ ಸರ್ಕಾರದ ಗಮನಕ್ಕೆ ಈಗಾಗಲೇ ತಂದಿರುತ್ತೇವೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಹಲವಾರು ವರ್ಷಗಳಿಂದ ಅನೇಕ ಕಾರ್ಯಕ್ರಮಗಳ ಅಡಿಯಲ್ಲಿ ವೈದ್ಯರ ಹಾದಿಯಾಗಿ ಡಿ ದರ್ಜೆ ನೌಕರರ ರವರಿಗೆ ಸೇವೆಯನ್ನು ಸಲ್ಲಿಸಿ ನಮ್ಮ ವಯೋಮಿತಿಯನ್ನು ಈಗಾಗಲೆ ಕಳೆದುಕೊಂಡು ಕೆಲಸ ನಿರ್ವಹಿಸಿ ಸೇವೆ ಸಲ್ಲಿಸುತ್ತಿದ್ದೇವೆ, ಹಾಗೂ ಹೋವಿಡ -19 ರ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ನೀಡಿರುವ ಅನನ್ಯ ಸೇವೆಯನ್ನು ತಾವುಗಳು ಈಗಾಗಲೇ ಮನಗಂಡಿರುತ್ತೀರಿ. ಈಗಾಗಲೇ ರಾಷ್ಟ್ರೀಯ ಅರೋಗ್ಯ ಅಭಿಯಾನದ ಅನೇಕ ಕಾರ್ಯಕ್ರಮಗಳಲ್ಲಿ ಹಾಗೂ ಕೋವಿಡ -19 ರ ಸಮಯದಲ್ಲಿ ರಾಜ್ಯ ಸರ್ಕಾರಕ್ಕೆ ಹಾಗೂ ಇಲಾಖೆಯ ಅಧಿಕಾರಿಗಳಿಗೆ ಪ್ರಶಂಶೆಗಳನ್ನು ಹಾಗೂ ಪ್ರಶಸ್ತಿಗಳನ್ನು NHM ಒಳ ಗುತ್ತಿಗೆ ನೌಕರರು ತಂದುಕೊಡುವಲ್ಲಿ ಶ್ರಮಿಸಿರುತ್ತೇವೆ.

 

ಕೇಂದ್ರ ಚುನಾವಣಾ ಆಯೋಗವು ಈಗಾಗಲೇ ನಮ್ಮ ರಾಜ್ಯಕ್ಕೆ ಭೇಟಿ ನೀಡಿ ಚುನಾವಣೆ ಪ್ರಕ್ರಿಯೆಯ ಬಗ್ಗೆ ಪರಿಶೀಲಿಸಿರುತ್ತದೆ. ಮಾರ್ಚ್- 2023 ತಿಂಗಳ ಕೊನೆಯಲ್ಲಿ ಕರ್ನಾಟಕ ರಾಜ್ಯದ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ನಿರೀಕ್ಷೆ ಇದ್ದು ಮೇ 2023ರಂದು ಚುನಾವಣೆ ನಡೆಯುವ ನಿರೀಕ್ಷೆ ಇರುತ್ತದೆ.ಇಂತಹ ಸಂದರ್ಭದಲ್ಲಿ ನಾವುಗಳು ಈಗಾಗಲೆ 33 ದಿನಗಳ ಶಾಂತಿಯುತ ಮುಷ್ಕರವನ್ನು ಸಂವಿಧಾನದ article 19 ಹಾಗೂ 71 ರ ಅಡಿಯಲ್ಲಿ ಶಾಂತಿಯುತ ಪ್ರತಿಭಟನೆ ಹಮ್ಮಿಕೊಂಡಿದ್ದು ಸರ್ಕಾರದಿಂದ ನಮ್ಮ ನ್ಯಾಯಯುತ ಬೇಡಿಕೆಯಾದ NHM ನೌಕರರನ್ನು ಖಾಯಂ ಮಾಡುವ ನಿರೀಕ್ಷೆಯಲ್ಲಿರುತ್ತೇವೆ. ಮುಂದಿನ ಚುನಾವಣಾ ನೀತಿ ಸಂಹಿತ’ ಜಾರಿಯಾಗುವ ವರೆಗೆ ನಮ್ಮ ನ್ಯಾಯಯುತ ಬೇಡಿಕೆಯಾದ NHM ಒಳ ಗುತ್ತಿಗೆ ನೌಕರರನ್ನು ಖಾಯಂ ಮಾಡಲು ನಡೆಸುತ್ತಿರುವ ಮುಷ್ಕರಕ್ಕೆ ಸಹಕರಿಸಿ ಸರ್ಕಾರದ ಜೊತೆ ಮಾತನಾಡಿದರು ಈ ಒಂದು ಸಂದರ್ಭದಲ್ಲಿ ಎನ್ ಎಚ್ ಎಮ್ ಒಳಗುತ್ತಿಗೆ ನೌಕರರು ಪಾಲ್ಗೊಂಡಿದ್ದರು.

Be the first to comment

Leave a Reply

Your email address will not be published.


*