ಮಸ್ಕಿ,ಪಟ್ಟಣದ ಪೋಲೀಸ್ ಠಾಣೆ ಪಕ್ಕದ ಆವರಣದಲ್ಲಿ ಮಾರ್ಚ್ 11 ರಂದು ಜರುಗುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮಕ್ಕೆ ಕಪ್ಪು ಬಾವುಟವನ್ನು ತೋರಿಸುವ ಮುಖಾಂತರ ಕಾರ್ಯಕ್ರಮವನ್ನು ವಿರೋಧಿಸುತ್ತಿದ್ದೇವೆ ಎಂದು ಕೆ. ಆರ್. ಎಸ್ ರೈತ ಸಂಘಟನೆಯ ತಾಲೂಕ ಅಧ್ಯಕ್ಷ ಸಂತೋಷ್ ಹಿರೇದಿನ್ನಿ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಮಸ್ಕಿಯಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದ ಕಾರಣ ಬಿಜೆಪಿಯು ಸರ್ಕಾರ ಮಸ್ಕಿ ಕ್ಷೇತ್ರಕ್ಕೆ ಬರಲು ಅರ್ಹರಿಲ್ಲ. ತಾಲೂಕಿನ ಬಹು ಬೇಡಿಕೆಗಳಾದ ಮಸ್ಕಿ ತಾಲೂಕಾಗಿ 15 ವರ್ಷ ಆದರೂ ಕೂಡ ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೆ ಏರಿಸಿಲ್ಲ.
ತಾಲೂಕ ತಹಶೀಲ್ದಾರ್ ಕಛೇರಿಯ ಸರ್ಕಾರಿ ಕಟ್ಟಡವಿಲ್ಲ. ಸಬ್ ರಿಜಿಸ್ಟ್ ಕಛೇರಿಯೂ ಇಲ್ಲ.ಬಹು ಬೇಡಿಕೆಯ ಸರಕಾರಿ ಕಚೇರಿಗಳೇಇಲ್ಲದೆ ಹಳೆಯ ತಾಲೂಕು ಗಳಾದ ಮಾನವಿ, ಸಿಂಧನೂರು,ಲಿಂಗಸ್ಗೂರು ಅಲೆದು ಅಲೆದು ಬೇಸತ್ತ ಕ್ಷೇತ್ರದ ಜನತೆ ಹಾಗೂ ತಾಲೂಕಿನಲ್ಲಿ ಯಾವುದೇ ಸರ್ಕಾರಿ ಕಟ್ಟಡಗಳು ಇರುವುದಿಲ್ಲ.
ಇತಿಹಾಸ ಖ್ಯಾತಿಯ ಅಶೋಕನ ನಾಡು ಎಂದೇ ಪ್ರಸಿದ್ಧಿಯಾಗಿರುವ ಮಸ್ಕಿಯು ಕ್ಷೇತ್ರದ ಅಶೋಕನ ಶಿಲಾ ಶಾಸನವೇ ಅಭಿವೃದ್ಧಿ ಕಾಣದಂತಾಗಿದೆ. ಮಸ್ಕಿ ಕ್ಷೇತ್ರ ಯಾವ್ ರೀತಿಯಾಗಿ ಅಭಿವೃದ್ಧಿ ಆಗಿದೆ. ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳು ಹಾಗೂ ಮಂತ್ರಿ ಮಂಡಲದ ಸಚಿವರು ನಮಗೆ ತಿಳಿಸಬೇಕು ರೈತರಿಗೆ ಯಾವುದೇ ತರದ ಯೋಜನೆಗಳು ಇರುವುದಿಲ್ಲ ಎಸ್ ಸಿ ಎಸ್ ಟಿ ಗಂಗಾ ಕಲ್ಯಾಣ ಸೇರಿ ಅನೇಕ ಅಭಿವೃದ್ಧಿ ಕಾರ್ಯಗಳು ಕುಂಟಿತ ಮಾಡಿ ನಿಮ್ಮ ಬೊಕ್ಕಸವನ್ನು ತುಂಬಿಸುವಂತಹ ಕೆಲಸ ಮಾಡಿಕೊಂಡಿದ್ದೀರಿ.
ಎಂದು ಇದೇ ತಿಂಗಳ 11 ರಂದು ಜರುಗಲಿರುವ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸರಕಾರದ ಮಂತ್ರಿ ಮಂಡಲಕ್ಕೆ ಕಪ್ಪು ಬಾವುಟವನ್ನು ತೋರಿಸುವ ಮುಖಾಂತರ ನಾವು ಕಾರ್ಯಕ್ರಮವನ್ನು ವಿರೋಧಿಸುತ್ತಿದ್ದೇವೆ ಎಂದು ಆರ್. ಎಸ್ ಸಂಘಟನೆಯ ತಾಲೂಕ ಅಧ್ಯಕ್ಷ ಸಂತೋಷ್ ಹಿರೇದಿನ್ನಿ, ಮಾರುತಿ ಜಿನ್ನಾಪೂರ ವೆಂಕಟೇಶ್ ಚಿಲ್ಕರಾಗಿ ಸಂಘಟನೆಯ ವತಿಯಿಂದ ಪತ್ರಿಕಾ ಹೇಳಿಕೆ ನೀಡಿದ್ದಾರೆ.
Be the first to comment