ಕೋಲಿ ಸಮಾಜದ ಎಲ್ಲ ಅಪೇಕ್ಷಿತ ಆಕಾಂಕ್ಷಿಗಳಿಗೆ ರಾಜ್ಯದ ಎಲ್ಲ ರಾಜಕೀಯ ಪಕ್ಷಗಳಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಲು ಅಮರೇಶಣ್ಣ ಕಾಮನಕೇರಿ ಆಗ್ರಹ

ಯಾದಗಿರಿ :: ಮುಂಬರುವ ವಿಧಾನ ಸಭೆ ಚುಣಾವಣೆಯಲ್ಲಿ ಕೋಲಿ ಸಮಾಜದ ಅಭ್ಯರ್ಥಿಗಳು ಸ್ಪರ್ಧೆ ಬಯಸುವ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳು ಅಪೇಕ್ಷಿತ ಆಕಾಂಕ್ಷಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ರಾಜ್ಯ ಬುಡಕಟ್ಟು ಜನಾಂಗ ಸಂರಕ್ಷಣಾ ಸಮಿತಿ ರಾಜ್ಯಾಧ್ಯಕ್ಷರಾದ ಅಮರೇಶಣ್ಣ ಕಾಮನಕೇರಿ ಆಗ್ರಹಿಸಿದರು

ಕಳೆದ ಹಲವು ದಶಕಗಳಿಂದ ಕೋಲಿ ಸಮಾಜದ ಬಂಧುಗಳು ರಾಜ್ಯದಲ್ಲಿ ಎಲ್ಲಾ ಪಕ್ಷಗಳಲ್ಲಿ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡು ಬಂದಿರುತ್ತಾರೆ. ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ, ಅತೀ ಹಿಂದುಳಿದ ವರ್ಗಕ್ಕೆ ಸೇರಿದ ಬೆಸ್ತ,ಕಬ್ಬಲಿಗ,ಬಾರ್ಕಿ,ಮೊಗವೀರ,ಅಂಬಿಗ,ಮೊಗೇರ,ಖಾರ್ವಿ,ಹರಿಕಾಂತ,ಕಬ್ಬೇರ,ಬೋಯಿ ಪದಗಳಿಂದ ಎಸ ಸಿ ವರ್ಗದಲ್ಲೂ ಕೋಲಿ ಸಮಾಜದ ಮೋಗೇರ ಮತ್ತು ಬೊಯಿ ಹಾಗೂ ಎಸ ಟಿ ವರ್ಗದಲ್ಲಿ ಟೋಕರೆ ಕೋಳಿ,ಡೋರ ಕೋಳಿ,ಕೋಯಾ, ತಳವಾರ  ಇನ್ನಿತರ ಪರ್ಯಾಯ ಪದಗಳಿಂದ ಗುರುತಿಸ್ಪಟ್ಟಿರುವ ಕೋಲಿ ಸಮಾಜದ ಮುಖಂಡರು 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ರಾಜ್ಯದಲ್ಲಿ ಇರುವ ಪಕ್ಷಗಳ ನಿಯಮ ಮತ್ತು ಸಿದ್ದಾಂತದ ಅನುಸಾರ 30 ಅಧಿಕ ಜನ ಪ್ರಬಲ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ.ಪಕ್ಷಗಳು ಕೋಲಿ ಸಮಾಜಕ್ಕೆ ಗೌರವ ಕೋಡುವುದೆ ಆಗಿದರೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೋಡಬೇಕು ಅಲ್ಲದೆ ರಾಜ್ಯದ ಪ್ರಬಲ ರಾಜಕೀಯ ನಾಯಕರು ಕೋಲಿ ಸಮಾಜಕ್ಕೆ ಸ್ಥಾನಮಾನವನ್ನು ಕೊಡಿಸುವಲ್ಲಿ ಪ್ರಮುಖ ಪಾತ್ರಹಸಬೇಕು ಕೋಲಿ ಸಮಾಜ ಬೆಂಬಲದಿಂದ ರಾಜಕೀಯವಾಗಿ ಬೆಳದಿರು ಎಲ್ಲ ಪಕ್ಷಗಳ ರಾಜಕೀಯ ನಾಯಕರು ತಮ್ಮ ಪಕ್ಷಗಳಲ್ಲಿ ತಾವೆ ಮುಂದಾಳತ್ವ ವಹಿಸಿ ಟಿಕೆಟ್ ಕೋಡಿಸಬೇಕು. ಈ ನಿಟ್ಟಿನಲ್ಲಿ ಕೆಲಸ ಮಾಡಿದರೆ ಸಮಾಜದ ಬೆಂಬಲ ಎಲ್ಲ ಪಕ್ಷಗಳ ಪ್ರಭಲ ರಾಜಕೀಯ ನಾಯಕರಿಗೆ ಬೆಂಬಲ ಇರುತ್ತದೆ ಇಲ್ಲದೆ ಇದ್ದರೆ ರಾಜ್ಯಾದ್ಯಂತ ಇರುವ ಸಮಾಜದ ಬಂದುಗಳು ಎಲ್ಲ ಪಕ್ಷಗಳ ಪ್ರಬಲ ಪ್ರಮುಖರು ಸ್ಪರ್ಧಿಸುವ ಕ್ಷೇತ್ರದ ವಿರುದ್ಧ ಮತದಾನ ಮಾಡಲು ಇಡೀ ಕೋಲಿ ಸಮಾಜ ನಿರ್ಧಾರ ಮಾಡಿದೆ.

ಅಮರೇಶಣ್ಣ ಕಾಮನಕೇರಿ ರಾಜ್ಯಾಧ್ಯಕ್ಷರು ರಾಜ್ಯ ಬುಡಕಟ್ಟು ಜನಾಂಗ ಸಂರಕ್ಷಣಾ ಸಮಿತಿ 

ಕರ್ನಾಟಕ ರಾಜ್ಯದಲ್ಲಿ ಕೋಲಿ ಸಮಾಜವು ಓಬಿಸಿ – ಎಸ ಸಿ ಎಸ ಟಿ ಮೂರು ವರ್ಗದಲ್ಲಿ ಬರುತ್ತದೆ.

ಒಬಿಸಿಯಲ್ಲಿ ಕಬ್ಬಲಿಗ,ಬೆಸ್ತ,ಮೋಗವೀರ,ಹರಿಕಾಂತ,ಕಬ್ಬೇರ,ಅಂಬಿಗ,ಬಾರ್ಕಿ,

ಎಸ ಸಿಯಲ್ಲಿ ಬೊಯಿ,ಮೊಗೇರ,

ಎಸ ಟಿ ಯಲ್ಲಿ ಟೋಕರೆಕೋಳಿ,ಡೋರ ಕೋಳಿ,ಕೋಯಾ ತಳವಾರ 

ಈ ಮೂರ ವರ್ಗದಿಂದ ರಾಜಕೀಯವಾಗಿ ಕೆಲಸ ಮಾಡುತ್ತಿರುವವರು ಇದ್ದಾರೆ ಅವರಿಗೆ ಬಿಜೆಪಿ,ಕಾಂಗ್ರೆಸ್, ಜೆಡಿಎಸ ರಾಜಕೀಯ ಪಕ್ಷಗಳು ಟಿಕೆಟ್ ಗಳು ಮೀಸಲು ಮತ್ತು ಜನರ ಕ್ಷೇತ್ರದಲ್ಲಿ ಕೋಡಬೇಕು


ಕೋಲಿ ಸಮಾಜದ ಅಭ್ಯರ್ಥಿಗಳು 12-15 ಕ್ಷೇತ್ರಗಳಲ್ಲಿ ಗೆಲ್ಲುವ ಅವಕಾಶವಿದೆ. ಆ ಕ್ಷೇತ್ರಗಳಲ್ಲಿ ಕೋಲಿ ಸಮಾಜದ ಬಂಧುಗಳ ಮತದಾರರ ಸಂಖ್ಯೆಯು ಹೆಚ್ಚಾಗಿರುವುದರಿಂದ ಎಲ್ಲ ರಾಜಕೀಯ ಪಕ್ಷಗಳು ಟಿಕೆಟ್ ಬಯಸುತ್ತಿದೆವೆ ಆ ಕ್ಷೇತ್ರದಲ್ಲಿ ವಿವಿಧ ಪಕ್ಷಗಳಿಂದ ಸ್ಪರ್ಧಿಸಲು ಅವಕಾಶ ಕೇಳುತ್ತಿದ್ದೇವೆ.  ಸಮಾಜಕ್ಕೆ ಸಾಮಾಜಿಕ ನ್ಯಾಯದ ಅಡಿಯಲ್ಲಿ ಗೆಲ್ಲುವ ಅವಕಾಶವಿರುವುದರಿಂದ ತಾವುಗಳು ಸಕಾರಾತ್ಮಕವಾಗಿ ಸ್ಪಂದಿಸಿ ಸಹಕರಿಸುವ ವಿಶ್ವಾಸದಿಂದ ಆಗ್ರಹಿಸುತ್ತಿದ್ದೇನೆ. ರಾಜ್ಯದ ಒಟ್ಟು 224 ಕ್ಷೇತ್ರಗಳ ಪೈಕಿ 56 ಮತಕ್ಷೇತ್ರಗಳಲ್ಲಿ ನಾವು 30 ರಿಂದ 90 ಸಾವಿರಕ್ಕೂ ಹೆಚ್ಚು ಮತದಾರರನ್ನು ಹೊಂದಿದ್ದು. 110 ಕ್ಷೇತ್ರಗಳಲ್ಲಿ 12 ಸಾವಿರದಿಂದ 20 ಸಾವಿರದ ವರೆಗೂ ಮತದಾರರನ್ನು ಹೊಂದಿದ್ದೆ. 12 ಲೋಕಸಭಾ ಕ್ಷೇತ್ರಗಳಲ್ಲಿ 1.50 ಲಕ್ಷ ಸಾವಿರದಿಂದ 3.5 ಲಕ್ಷಕ್ಕಿಂತಲೂ ಹೆಚ್ಚು ಮತದಾರರನ್ನು ಹೊಂದಿದ್ದೆ 3 ಲೋಕಸಭೆ ಕ್ಷೇತ್ರದಲ್ಲಿ 5 ಲಕ್ಷ 29 ಸಾವಿರದಿಂದ 8 ಲಕ್ಷ ಮತದಾರನ್ನು ಹೊಂದಿದೆ. ಎಲ್ಲಾ ಪಕ್ಷಗಳ ಮಾನ್ಯ ಅಧ್ಯಕ್ಷರುಗಳಾದ ಬಿಜೆಪಿಯ ನಳಿನ ಕುಮಾರ ಕಟಿಲ,ಕಾಂಗ್ರೆಸ್ ಡಿ ಕೆ ಶಿವಕುಮಾರ,ಜೆಡಿಎಸನ ರಾಷ್ಟ್ರೀಯ ಅಧ್ಯಕ್ಷ ಎಚ ಡಿ ದೇವೆಗೌಡರ,ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಬಿಜೆಪಿಯ ಜೆಪಿ ನಡ್ಡ (ಹಿಮಾಚಲ ಪ್ರದೇಶ ರಾಜ್ಯದಲ್ಲಿ ಕೋಲಿ ಸಮಾಜ) ತಮ್ಮ ರಾಜಕೀಯ ಭವಿಷ್ಯದ ರೂಪಿಸಲು ಕೋಲಿ ಸಮಾಜದ ಮತದಾರರ ಪ್ರಮುಖರಾಗಿದ್ದಾರೆ.ಕೋಲಿ ಸಮಾಜದ ಮತದಾರರ ಶಕ್ತಿ ನಿಮ್ಮ ಎಲ್ಲರಿಗೂ ತಿಳಿದೆ ಇದೆ ಅದೇ ರೀತಿಯಲ್ಲಿ ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ತರುವ ಮತ್ತು ಅಧಿಕಾರದಿಂದ ದೂರ ಇಡುವ ಶಕ್ತಿ ಯನ್ನು ಹೊಂದಿದ್ದಾರೆ. ಕೋಲಿ ಸಮಾಜದ ಶಕ್ತಿ ಬಗ್ಗೆ ಹಗುರವಾಗಿ ತೆಗೆದುಕೋಳದೆ ಕೋಲಿ ಸಮಾಜಕ್ಕೆ ಗಮನಿಸಿ ಕೋಲಿ ಸಮಾಜದ ಪ್ರಬಲ ಆಕಾಂಕ್ಷಿಗಳಿಗೆ ಸ್ಪರ್ಧಿಸುವ ಅವಾಕಾಶ ನೀಡಬೇಕೆಂದು  ರಾಜ್ಯ ಬುಡಕಟ್ಟು ಜನಾಂಗ ಸಂರಕ್ಷಣ ಸಮಿತಿ ರಾಜ್ಯಾಧ್ಯಕ್ಷರಾದ ಅಮರೇಶಣ್ಣ ಕಾಮನಕೇರಿ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ

Be the first to comment

Leave a Reply

Your email address will not be published.


*