ಬೆಂಗಳೂರು, ಮಾ 9, ಬ್ರೇಕ್ಸ್ ಇಂಡಿಯಾ ವಿದ್ಯುತ್ ಚಾಲಿತ ವಾಹನಗಳಿಗಾಗಿ ವಿಶೇಷ ವಿನ್ಯಾಸದ ಬ್ರೇಕ್ ಪ್ಯಾಡ್ ಪರಿಚಯಿಸಿದೆ.
ಈಗಿರುವ ಟ್ರೆಂಡ್ ಗೆ ಸರಿಹೊಂದುವ ಹಾಗೇ ಮತ್ತು ವಾಹನ ವಲಯದ ಬೆಳೆಯುತ್ತಿರುವ ಮಾರುಕಟ್ಟೆ ಅಗತ್ಯಗಳಿಗೆ ತಕ್ಕಂತೆ, ಟಿವಿಎಸ್ ಅಪಾಚೆಯ ಬ್ರಾಂಡ್ ಆಗಿರುವ ಬ್ರೇಕ್ಸ್ ಇಂಡಿಯಾದ ಎಲೆಕ್ಟ್ರಿಕ್ ವಾಹನಗಳಿಗೆ ಸುಧಾರಿತ ಘರ್ಷಣೆ ತಂತ್ರಜ್ಞಾನದೊಂದಿಗೆ ZAP ಬ್ರೇಕ್ ಪ್ಯಾಡ್‌ಗಳನ್ನು ಬಿಡುಗಡೆ ಮಾಡಿದೆ. ಶಬ್ದ ಮಾಲಿನ್ಯ ನಿಯಂತ್ರಿಸುವ ಜೊತೆಗೆ ತುಕ್ಕಿನಿಂದ ರಕ್ಷಣೆ ನೀಡುತ್ತದೆ.
ಭಾರತೀಯ ಮತ್ತು ಜಾಗತಿಕ ಹೆಸರಾಂತ ಮೂಲ ಉತ್ಪಾದನಾ ತಯಾರಕಗಳಿಗೆ ಆರು ದಶಕಗಳಿಂದ ಶ್ರೇಣಿ-1 ಪೂರೈಕೆದಾರರಾಗಿ, ಬ್ರೇಕ್ಸ್ ಇಂಡಿಯಾ ಉತ್ತಮ ಗ್ರಾಹಕ ಕೇಂದ್ರಿತವಾಗಿ ವಿನ್ಯಾಸ, ಅಭಿವೃದ್ಧಿ, ಗುಣಮಟ್ಟದ ಬಗ್ಗೆ ಗಮನಹರಿಸಿದೆ. ವಿದ್ಯುತ್ ಚಾಲಿತ ಕಾರು ವಲಯ ಈಗ ಬೆಳವಣಿಗೆ ಸಾಧಿಸುತ್ತಿದ್ದು, ಈ ವಲಯದಲ್ಲಿ ಉತ್ತಮ ಗುಣಮಟ್ಟದ ಬ್ರೇಕ್ ಪ್ಯಾಡ್ ಗಳ ಅಗತ್ಯ ಪೂರೈಕೆಗಾಗಿ ಸುಧಾರಿತ ಘರ್ಷಣೆ ತಂತ್ರಜ್ಞಾನದ ಝ್ಯಾಪ್ ಅನ್ನು ಪರಿಚಯಿಸಲಾಗಿದೆ.
” ಪ್ರಯಾಣಿಕ ಕಾರುಗಳಲ್ಲಿ ಘರ್ಷಣೆ ನಿರ್ವಹಣೆಯಲ್ಲಿ ಟಿವಿಎಸ್ ಅಪಾಚೆ ದೇಶೀಯ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆ ಕ್ಷಿಪ್ರವಾಗಿ ಬೆಳೆಯುತ್ತಿದೆ. ಈ ಅವಕಾಶದ ಸದ್ಬಳಕೆ ಮಾಡಿಕೊಂಡು, ಗ್ರಾಹಕಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಝ್ಯಾಪ್ ಪರಿಚಯಿಸಲಾಗಿದ್ದು, ಇತರ ವಿದ್ಯುತ್ ಚಾಲಿತ ವಾಹನಗಳಿಗೂ ಇಂತಹ ಸೌಲಭ್ಯ ವಿಸ್ತರಿಸಲಾಗುವುದು.
ಸಂಶೋಧನೆ ಮತ್ತು ಅಭಿವೃದ್ಧಿಯ ಸಹಿತವಾಗಿ ಝ್ಯಾಪ್ ಬ್ರೇಕ್ ಪ್ಯಾಡ್‌ಗಳನ್ನು ಶಬ್ದ ನಿಗ್ರಹ, ಸ್ಥಿರ ನಿಲುಗಡೆ ಶಕ್ತಿ, ಕಡಿಮೆ ಬ್ರೇಕ್ ಧೂಳು ಮತ್ತು ತುಕ್ಕಿನಿಂದ ಹೆಚ್ಚಿನ ರಕ್ಷಣೆಗಾಗಿ ವಿನ್ಯಾಸಗೊಳಿಸಲಾಗಿದೆ. ಜೊತೆಗೆ ಪರಿಸರ ರಕ್ಷಣೆ ಮತ್ತು ಸುಸ್ಥಿರತೆಗಾಗಿ ಉನ್ನತ ಮಾನದಂಡಗಳನ್ನು ಅನುಸರಿಸಲಾಗುತ್ತಿದೆ ”ಎಂದು ಬ್ರೇಕ್ಸ್ ಇಂಡಿಯಾದ ಉಪಾಧ್ಯಕ್ಷ ಮತ್ತು ಮುಖ್ಯಸ್ಥ ಎಸ್ ಸುಜಿತ್ ನಾಯಕ್ ವಿವರಿಸಿದ್ದಾರೆ.
Be the first to comment