ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು, ನರಸಿಂಹಗಿರಿ ಗ್ರಾಮದಲ್ಲಿ. ಮಾ8ರಂದು ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ, ಎನ್.ಟಿ.ಶ್ರೀನಿವಾಸ ಅಭಿಮಾನಿಳಗದವರಿಂದ. ಶ್ರೀಮತಿ ಒಬಮ್ಮರವರ ಮುಂದಾಳತ್ವದಲ್ಲಿ, ಸಮಾಜ ಸೇವಕ ಹಾಗೂ ನೇತ್ರ ತಜ್ಞರಾದ ಎನ್.ಟಿ.ಶ್ರೀನಿವಾಸ ಮತ್ತು ಅವರ ಸಹೋದರ ಎನ್.ಟಿ.ತಮ್ಮಣ್ಣ ನರ ನೇತೃತ್ವದಲ್ಲಿ. ನರಸಿಂಹ ಗಿರಿ ಗ್ರಾಮ ಸೇರಿದಂತೆ ನೆರೆ ಹೊರೆ ಗ್ರಾಮಗಳ, ನೂರಾರು ಮಹಿಳೆಯರಿಗೆ. ಸೀಮಂತ ಮತ್ತು ಉಡಿತುಂಬುವ ಕಾರ್ಯಕ್ರಮ, ಬಹು ಸಂಭ್ರಮದಿಂದ ಜರುಗಿಸಲಾಯಿತು.
ಕೂಡ್ಲಿಗಿ ಕ್ಷೇತ್ರದ ಮಾಜಿ ಶಾಸಕರಾದ ದಿವಂಗತ ಎನ್.ಟಿ.ಬೊಮ್ಮಣ್ಣನವರ, ಧರ್ಮಪತ್ನಿ ಓಬಮ್ಮರವರ ಮಾರ್ಗದರ್ಶನದಲ್ಲಿ. ಗ್ರಾಮದ ಹಿರಿಯ ಮಹಿಳೆಯರ ಸಹಯೋಗದೊಂದಿಗೆ. ವಿವಿದ ಮಹಿಳಾ ಸಂಘಟನೆಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆಯಿತು. ನರಸಿಂಹ ಗಿರಿ ಹಾಗೂ ನೆರೆ ಗ್ರಾಮಗಳ ನೂರಾರು ಮಹಿಳೆಯರಿಗೆ, ಸಂಪ್ರದಾಯದಂತೆ ಸೀಮಂತ ಮಾಡಲಾಯಿತು ಮತ್ತು ನೂರಾರು ಮಹಿಳೆಯರಿಗೆ ಉಡಿತುಂಬಿಸಲಾಯಿತು. ಸಮಾಜ ಸೇವಕ ಹಾಗೂ ವೈದ್ಯ ಎನ್.ಟಿ.ಶ್ರೀನಿವಾಸ ರ ಅಭಿಮಾನಿ ಬಳಗದಿಂದ, ಮಹಿಳೆಯರಿಗಾಗಿ ಸಂಪ್ರದಾಯಿಕ ಆಚರಣೆಯನ್ನು, ಬಹು ಸಂಭ್ರಮದಿಂದ ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ನರಸಿಂಹ ಗಿರಿ ಗ್ರಾಮ ಸೇರಿದಂತೆ ನೆರೆ ಹಿರೆಯ ಗ್ರಾಮಗಳ, ನೂರಾರು ಮಹಿಳೆಯರು ಪಾಲ್ಗೊಂಡು ಸಂಭ್ರಮಿಸಿದರು. ವಿವಿದ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು, ವಿವಿಸ ಸಮುದಾಯಗಳ ಹಿರಿಯ ಮಹಿಳೆಯರು, ವಿವಿದ ಮಹಿಳಾ ಜನ ಪ್ರತಿನಿಧಿಗಳು. ಎಲ್ಲಾ ಸಮುದಾಯಗಳ ಮಹಿಳೆಯರು, ಅನೇಕ ಗ್ರಾಮಗಳ ಮಹಿಳಾ ಮುಖಂಡರು ಭಾಗಿಯಾಗಿದ್ದರು. ಮಹಿಳಾ ದಿನಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ, ಸಂಪ್ರದಾಯಿಕ ಸೀಮಂತ ಮತ್ತು ಉಡಿತುಂಬುವ ಕಾರ್ಯಕ್ರಮದಲ್ಲಿ. ಅಂತಿಮವಾಗಿ ವಾಡಿಕೆಯಂತೆ ನೆರೆದ ಸರ್ವ ಮಹಿಳೆಯರಿಗೆ , ಹಾಗೂ ನೆರೆದ ಗ್ರಾಮಸ್ಥರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಈ ಮೂಲಕ ಮಹಿಳಾ ದಿನಾಚರಣೆ ನರಸಿಂಹ ಗಿರಿ ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಠಿಸಿತ್ತು, ಅಸಂಖ್ಯಾತ ಮಹಿಳೆಯರು ಸಕ್ರೀಯವಾಗಿ ಪಾಲ್ಗೊಂಡು ಸಂಭ್ರಮಿಸಿದರು.
Be the first to comment