ರಾಟ್ಲಾಮ್(ಮಧ್ಯಪ್ರದೇಶ): ಹನುಮಾನ್ ವಿಗ್ರಹದ ಎದುರು ಭಾನುವಾರ ಇಲ್ಲಿ ನಡೆದ 2023ರ ಮಹಿಳಾ ಬಾಡಿ ಬಿಲ್ಡರ್ ಇಂಡಿಯಾ ಚಾಂಪಿಯನ್‌ಶಿಪ್ ವಿವಾದಕ್ಕೆಡೆಯಾಗಿದೆ.
ಮಧ್ಯಪ್ರದೇಶದ ರಾಟ್‌ಲ್ಯಾಮ್‌ನಲ್ಲಿ ಈ ಶೋ ನಡೆದಿದ್ದು ವೇದಿಕೆ ಮೇಲೆ ಹನುಮಾನ್ ಪ್ರತಿಮೆ ಮುಂದೆ ಮಹಿಳಾ ಬಾಡಿ ಬಿಲ್ಡರ್ಗಳು ಟು ಪೀಸ್‌ನಲ್ಲಿ ಪ್ರದರ್ಶನ ನೀಡಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಭಾನುವಾರ ಬೆಳಗ್ಗೆ ಈ ಸ್ಪರ್ಧೆಯು ಹನುಮಾನ್ ಜಿ ಅವರ ಪೂಜೆಯೊಂದಿಗೆ ಪ್ರಾರಂಭವಾಯಿತು. ಇದನ್ನು ಬಿಜೆಪಿಯ ಮೇಯರ್ ಸ್ವತಃ ಆಯೋಜಿಸಿದ್ದಾರೆ. ಪ್ರದರ್ಶನದ ವೇಳೆ ಹನುಮಾನ್ ವಿಗ್ರಹದ ಮುಂದೆ ಟು ಪೀಸ್ ಮತ್ತು ಸೂಟ್‌ಗಳನ್ನು ಧರಿಸಿ ಪ್ರದರ್ಶನ ನೀಡಿರುವುದು ವಿವಿಧ ಸಾಮಾಜಿಕ ಮತ್ತು ರಾಜಕೀಯ ಸಂಸ್ಥೆಗಳು ರಾಜ್ಯಾದ್ಯಂತ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಭಟನೆ ವ್ಯಕ್ತವಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕರ್ತರು ಮಂಡಿ ಪ್ರದೇಶದಲ್ಲಿ ಸೇರಿ ಘಟನೆಯ ವಿರುದ್ಧ ಪ್ರತಿಭಟಿಸಿದರಲ್ಲದೆ ಹನುಮಾನ್ ಚಾಲಿಸಾ ಪಠಿಸಿದರು.
ಕಾಂಗ್ರೆಸ್ ಹಿರಿಯ ನಾಯಕ ಪರಾಸ್ ಸಕ್ಲೆಚಾ, ‘ಸ್ಪರ್ಧೆಯ ಹೆಸರಿನಲ್ಲಿ ನಡೆದಿರುವ ಅಶ್ಲೀಲತೆ ನಾಚಿಕೆಗೇಡಿನ ಸಂಗತಿಯಾಗಿದೆ. ಈ ಸ್ಪರ್ಧೆಯ ಬ್ಯಾನರ್‌ನಲ್ಲಿ, ಭಾರತೀಯ ಜನತಾ ಪಕ್ಷದ ನಾಯಕರೊಂದಿಗೆ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರ ಫೋಟೋಗಳೂ ಇದ್ದವು ಎಂದು ಹೇಳಿದರು.
Be the first to comment