ಚಡಚಣ : ಸುಮಾರು ವರ್ಷಗತಿಸಿದ್ರೂ ಈ ಜಿಲ್ಲೆಯಲ್ಲಿ ಕಾಣದ ಅಭಿವೃದ್ಧಿ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ದಿವ್ಯ ನಿರ್ಲಕ್ಷ್ಯವಹಿಸಿದ ಸರಕಾರದ ವಿರುದ್ಧ ವಾಗ್ದಾಳಿ ಮಾಡಿದರು.
ನಾಗಠಾಣದಲ್ಲಿ ಆಯೋಜಿಸಲಾದ ನವ ನಾಗಠಾಣ ಸಮಾವೇಶವನ್ನು ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಉದ್ಘಾಟಿಸಿ ಮಾತಾನಾಡಿದ ಅವರು ನಾಗಠಾಣ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ ಎಂದರು. ಇನ್ನೂ ಈ ಹಿಂದೆ ಸಚಿವನಾಗಿದ್ದಾಗ ವಿಜಯಪುರದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದ್ದೆ ಅದು ಕಿಂದಿಗೂ ತೆವಳುತ್ತಾ ಸಾಗಿದೆ ಕಿಡಿಕಾರಿದರು.
ಮೂಲ ಸೌಕರ್ಯ ವಂಚಿತ ನಾಗಠಾಣ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಕನಸು. ಈ ಕ್ಷೇತ್ರವನ್ನು ನವ ನಾಗಠಾಣ ನಿರ್ಮಿಸಲು ಅಭ್ಯರ್ಥಿ ಶ್ರೀಕಾಂತ ಬಂಡಿ ಬದ್ಧರಾಗಿದ್ದಾರೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಘೊಷಿತ ಅಭ್ಯರ್ಥಿ ಶ್ರೀಕಾಂತ ಬಂಡಿ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಬಸವೇಶ್ವರರು ಹಾಗೂ ಸಿದ್ಧೇಶ್ವರ ಸ್ವಾಮೀಜಿ ಜನಸಿದ ಪುಣ್ಯ ಭೂಮಿಯಲ್ಲಿ ಇಂದಿಗೂ ಅಭಿವೃದ್ಧಿ ಮಾತ್ರ ಮರಿಚಿಕೆಯಾಗಿದೆ . ಸ್ವಾಂತಂತ್ರ್ಯ ದೊರೆತು 75 ವರ್ಷ ಕಳೆದರೂ ಈ ಪ್ರದೇಶಗಳಲ್ಲಿ ಉತ್ತಮ ರಸ್ತೆಗಳಿಲ್ಲ, ಚರಂಡಿ, ಶೌಚಾಲಯಗಳು ,ಶುದ್ಧ ಕುಡಿಯುವ ನೀರಿನ ಸಮಸ್ಯೆ ಇನ್ನೂ ಕಾಡುತ್ತಿದೆ. ಗ್ರಾಮೀಣ ಭಾಗದಲ್ಲಿ ಬಸ್ ವ್ಯವಸ್ಥೆ, ಮೂಲಭೂತ ಸೌಕರ್ಯಗಳನ್ನು ಒದಗಿಸುವುದರೊಂದಿಗೆ ನವ ನಾಗಠಾಣ ಮತಕ್ಷೇತ್ರ ನಿರ್ಮಾಣಕ್ಕೆ ಒಂದು ಬಾರಿ ಆಯ್ಕೆ ಮಾಡಲು ಶ್ರೀಕಾಂತ್ ಬಂಡಿಯವರನ್ನ ಆಯ್ಕೆ ಮಾಡಿ ಎಂದು ಮನವಿ ಮಾಡಿದರು.
ಕಾರ್ಯಕ್ರಮಕ್ಕೂ ಮೊದಲು ಸಿದ್ಧೇಶ್ವರ ಶ್ರೀಗಳಿಗೆ ಗುರುವಂದನೆ ಹಾಗೂ ಪುನಿತ್ ರಾಜ್ ಕುಮಾರ ಅವರಿಗೆ ನಮನ ಕಾರ್ಯಕ್ರಮ ಜರುಗಿತು.ಈ ಸಂದರ್ಭದಲ್ಲಿ ಗಾಲಿ ಜನಾರ್ಧನ ರೆಡ್ಡಿ,ಅಭ್ಯರ್ಥಿ ಶ್ರೀಕಾಂತ ಬಂಡಿ ಅವರ ಪರಿಚಯದ ಸಾಕ್ಷಿ ಚಿತ್ರ ಬೃಹತ್ ಪರದೆಯ ಮೇಲೆ ಮೂಡಿ ಬಂದಿತು. ಕಾರ್ಯಕ್ರಮದ ನಂತರ ಸರಿಗಮಪ ಕಲಾ ತಂಡದವರಿಂದ ಸಂಗೀತ ಕಾರ್ಯಕ್ರಮ ಜರುಗಿತು.
Be the first to comment