ಪ್ರ+ ಅದಾನಿ ಯಾವ ಸಂಧಿಯಾಗಲಿದೆ? ಟ್ವಿಟರ್‌ನಲ್ಲಿ ಪ್ರಶ್ನೆ ಹಾಕಿದ ಪ್ರಕಾಶ್‌ ರಾಜ್!

Bengaluru : ಪ್ರ+ಅದಾನಿ ಯಾವ ಸಂಧಿ?? ಕ್ಯಾಚ್‌ ಮಿ ಇಫ್‌ ಯೂ ಕ್ಯಾನ್‌ ಎಂದು ನಟ, ರಾಜಕಾರಣಿ ಪ್ರಕಾಶ್‌ ರಾಜ್‌(Prakash Raj) ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಫೋಟವನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡುವ ಮೂಲಕ ವ್ಯಂಗ್ಯವಾಗಿ (Prakash Raj questioned Modi) ಪ್ರಶ್ನಿಸಿದ್ದಾರೆ.

 

ಕಳೆದ ಒಂದೆರೆಡು ವಾರಗಳಿಂದ ದೇಶದಲ್ಲಿ ದೊಡ್ಡ ಸಂಚಲನ ಮೂಡಿಸುತ್ತಿರುವ ಗೌತಮ್‌ ಅದಾನಿ(Gautham Adani) ಅವರ ಬಗ್ಗೆ ಹಿಂಡನ್‌ಬರ್ಗ್‌ ಮಾಡಿರುವ ವರದಿ,

 

ಇದೀಗ ತೀವ್ರವಾಗಿ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಈ ಮಧ್ಯೆ ನಟ, ರಾಜಕಾರಣಿ ಪ್ರಕಾಶ್‌ ರಾಜ್‌ ಅವರು ಕೂಡ ತಮ್ಮದೊಂದು ಹೇಳಿಕೆಯನ್ನು ಟ್ವಿಟರ್‌ ಮೂಲಕ ವ್ಯಂಗ್ಯವಾಗಿ ತಿಳಿಸಿದ್ದಾರೆ.

 

ಸಾಮಾಜಿಕ ಜಾಲತಾಣವಾದ(Social Media) ಟ್ವಿಟರ್‌ನಲ್ಲಿ (Twitter)ಪೋಸ್ಟ್‌ ಮಾಡಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಜೊತೆಗೆ ಗೌತಮ್‌ ಅದಾನಿ ಅವರ ನೆರಳಿರುವ ಫೋಟೊವನ್ನು ಹಾಕಿ,

ಪ್ರ+ಅದಾನಿ ಯಾವ ಸಂಧಿ?? ಎಂದು ಬರೆಯುವುದರ ಜೊತೆಗೆ ಕ್ಯಾಚ್‌ ಮೀ ಇಫ್‌ ಯೂ ಕ್ಯಾನ್‌ ಎಂಬ ಸಾಲನ್ನೂ ಬಳಸಿ ಪೋಸ್ಟ್‌ ಮಾಡಿದ್ದಾರೆ.

ಪ್ರಕಾಶ್‌ ರಾಜ್‌ ಅವರ ಈ ಒಂದು ತಿರುಚಾದ ಪ್ರಶ್ನೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೌತಮ್‌ ಅದಾನಿ ಎಂಬುದು ಸ್ಪಷ್ಟವಾಗಿ ತಿಳಿಯುತ್ತಿದೆ. ಕಳೆದ ಕೆಲ ದಿನಗಳಿಂದ ಓಡಾಡುತ್ತಿರುವ ಸುದ್ದಿಯನ್ನು ಗಮನದಲ್ಲಿಟ್ಟುಕೊಂಡು ಟ್ವೀಟ್‌ ಮಾಡಿದ್ದಾರೆ.

 

ಅದಾನಿ ಗ್ರೂಪ್ಸ್‌(Adani Groups) ಷೇರು ಅಕ್ರಮದ ಬಗ್ಗೆ ಸ್ಪೋಟಕ ವರದಿ ನೀಡಿದ ಹಿಂಡೆನ್‌ಬರ್ಗ್‌ ಸಂಶೋಧನಾ ಸಂಸ್ಥೆ (Prakash Raj questioned Modi) ಈ ವರದಿಯನ್ನು ಪ್ರಕಟಿಸಿತ್ತು!

ಹಿಂಡೆನ್‌ ಬರ್ಗ್‌ ಪ್ರಕಟಿಸಿದ ವರದಿ ಅನುಸಾರ, ಅದಾನಿ ಗ್ರೂಪ್ಸ್‌ ಷೇರು ಮೌಲ್ಯದ ಮೇಲೆ ಕೃತಕವಾಗಿ ಪ್ರಭಾವ ಬೀರಬಲ್ಲ ಕೃತ್ಯಗಳಲ್ಲಿ ನಾಚಿಕೆಯಿಲ್ಲದೆ ತೊಡಗಿಸಿಕೊಂಡಿದೆ ಮತ್ತು ಲೆಕ್ಕಪತ್ರ ವಂಚನೆ ಎಸಗಿದೆ ಎಂದು ಉಲ್ಲೇಖಿಸಿದೆ.

 

ತೆರಿಗೆ ವಂಚಕರ ಪಾಲಿಗೆ ಸ್ವರ್ಗವೆಂದು ಕರೆಸಿಕೊಂಡಿರುವ ವಿಸ್ತಾರದ ನಾಡುಗಳನ್ನು ಗ್ರೂಪ್ಸ್‌ ಶೆಲ್‌(Shell) ಕಂಪನಿಗಳ ಮೂಲಕ ಸರಿಯಲ್ಲದ ರೀತಿಯಲ್ಲಿ ಉಪಯೋಗಿಸಿಕೊಂಡಿದೆ ಎಂದು ಅದು ಆರೋಪಿಸಿದೆ. ಅದಾನಿ ಗ್ರೂಪ್‌ಗೆ ಸೇರಿದ ಷೇರುಪೇಟೆ ರಿಜಿಸ್ಟ್ರೆಡ್‌ ಕಂಪನಿಗಳ ಸಾಲದ ಪ್ರಮಾಣವು ಗಣನೀಯ ಪ್ರಮಾಣದಲ್ಲಿ ಇದೆ.

ಇದರಿಂದಾಗಿ ಇಡೀ ಗ್ರೂಪ್‌ನ ಆರ್ಥಿಕ ಸ್ಥಿತಿ ಅಪಾಯದ ಮಟ್ಟದಲ್ಲಿದೆ ಎಂಬುದು ಕೂಡ ವರದಿಯಲ್ಲಿ ಉಲ್ಲೇಖವಾಗಿದೆ. ಈ ವರದಿ ಜಗಜಾಹಿರಾಗುತ್ತಿದ್ದಂತೆ ಅದಾನಿ ಗ್ರೂಪ್ಸ್‌ ಸಂಸ್ಥೆಗಳ ಷೇರು ಮೌಲ್ಯ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ.

Be the first to comment

Leave a Reply

Your email address will not be published.


*