ಮಕ್ಕಳ ಬೆಳವಣಿಗೆ ಹಾಗೂ ಪ್ರತಿಭೆಯನ್ನು ಹೊರಹಾಕಲು ಕ್ರೀಡೆಯಿಂದ ಸಾಧ್ಯ: ಶಾಸಕ ಶರಣಬಸಪ್ಪಗೌಡ ದರ್ಶನಾಪುರ

ಕೆಂಭಾವಿ: ಶಹಾಪುರ ಕ್ಷೇತ್ರದ ಸುರಪುರ ತಾಲ್ಲೂಕಿನ ಜೈನಾಪುರ ಗ್ರಾಮದಲ್ಲಿ ಇಂದು ನಡೆದ ಕ್ರಿಕೆಟ್ ಪಂದ್ಯಗಳಿಗೆ ಉಧ್ಘಾಟಿಸಿದ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರ ಅವರು.ಯುವಕರು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ಆರೋಗ್ಯ ವೃದ್ಧಿಸುತ್ತದೆ. ಯುವಕರು ದೇಶಿ ಕ್ರೀಡೆಗಳಿಗೂ ಆದ್ಯತೆ ನೀಡಬೇಕು ಎಂದು ಶಾಸಕರು ತಿಳಿಸಿದರು.ಜೈನಾಪುರ ಗ್ರಾಮದಲ್ಲಿ ಶರಣಬಸಪ್ಪಗೌಡ ದರ್ಶನಾಪುರ ಅಭಿಮಾನಿಗಳ ಬಳಗದ ವತಿಯಿಂದ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಯ ಪಂದ್ಯಾವಳಿಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.ಕ್ರಿಕೆಟ್ ಜತೆದೇಶಿ ಆಟಗಳಿಗೂ ಪ್ರೋತ್ಸಾಹ ನೀಡಬೇಕು, ಇಂತಹ ಕಾರ್ಯಕ್ರಮಗಳು ಅತಿ ಹೆಚ್ಚಾಗಿ ಜರುಗುವುದರಿಂದ ಪ್ರತಿಭೆಗಳನ್ನು ಗುರುತಿಸಬಹುದು ಎಂದು ಹೇಳಿದರು.ಈಗಿನ ಕಂಪ್ಯೂಟರ್ ಯುಗದಲ್ಲಿ ಕ್ರೀಡೆಗಳಲ್ಲಿ ಭಾಗವಹಿಸುವವರ ಸಂಖ್ಯೆ ಕಡಿಮೆಯಾಗಿದೆ. ಯುವಕರು ಕ್ರೀಡೆಯಲ್ಲಿ ಆಸಕ್ತಿಯಿಂದ ಭಾಗವಹಿಸಿ ಇತರರಿಗೆ ಮಾದರಿಯಾಗಬೇಕು ಎಂದರು.

ಈ ಸಂದರ್ಭದಲ್ಲಿ ಬಸವರಾಜ ಎಸ್ ಪಾಟೀಲ ಚಿಂಚೋಳಿ, ಬಸನಗೌಡ ಪಾಟೀಲ ಹೊಸಮನಿ ಯಾಳಗಿ,ಮಾನಪ್ಪ ಸೂಗೂರ, ಕೆಂಭಾವಿ ಪಿಎಸ್‌ಐ ಹಣಮಂತರಾಯ ಬಂಕಲಿಗಿ,ಅಮೀನರೆಡ್ಡಿ ಬಿರಾದಾರ ಕಿರದ್ದಳ್ಳಿ, ಸಿದ್ದಣ್ಣ ಚಾಮನೂರ, ಮಹಾದೇವ ಸಾಲಿಮನಿ,ದೊಡ್ಡಪ್ಪಗೌಡ ಬಿರಾದಾರ ಜೈನಾಪುರ, ಧರ್ಮೀಬಾಯಿ ರಾಠೋಡ, ದೇವಣ್ಣ ದೊರೆ, ಶಿವಕಾಂತ್ ರೈಟರ್, ಕ್ರೀಡಾಪಟುಗಳು ಹಾಗೂ ಸುತ್ತಮುತ್ತಲಿನ ಗ್ರಾಮದ ಯುವಕರು ಮತ್ತು ಹಿರಿಯರು ಭಾಗವಹಿಸಿದ್ದರು.

Be the first to comment

Leave a Reply

Your email address will not be published.


*