ಅಲ್ಪಸಂಖ್ಯಾತರ ಸಮುದಾಯದ ಶಾದಿ ಮಹಾಲ್ ಲೋಕಾರ್ಪಣೆ: ಶರಣಬಸಪ್ಪಗೌಡ ದರ್ಶನಾಪುರ.

ಕೆಂಭಾವಿ: ಮತಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಅನೇಕ ಗ್ರಾಮಗಳಲ್ಲಿ ಸಮುದಾಯ ಭವನ ಶಾದಿ ಮಹಲ್ಗಳನ್ನು ನಿರ್ಮಾಣ ಮಾಡಲು ಹಣ ಒದಗಿಸಿದ್ದೇನೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

ಅವರು ಇಂದು ಕೆಂಭಾವಿ ಪಟ್ಟಣದಲ್ಲಿ ನಿರ್ಮಾಣವಾಗಿರು ಸುಮಾರು 25 ಲಕ್ಷ ರೂ. ವೆಚ್ಚದ ಶಾದಿ ಮಹಲ್ನ್ನು ಉಧ್ಘಾಟಿಸಿ ಮಾತನಾಡಿದ ಅವರು ಕೆಂಭಾವಿ ಪಟ್ಟಣದಲ್ಲಿ ಝಂಡಾಕಟ್ಟೆಯ ಆಶ್ರುಖಾನ ನಿರ್ಮಾಣಕ್ಕಾಗಿ 10 ಲಕ್ಷ. ಹಾಗೂ ಶಾದಿಮಹಲ್ಕ್ಕಾಗಿ 25 ಲಕ್ಷ ಒದಗಿಸಿದ್ದು. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಕೆಲಸ ಪ್ರಾರಂಭವಾಗಲಿದೆ ಎಂದು ಹೇಳಿದ ಅವರು ಮುಂಬರುವ ದಿನಗಳಲ್ಲಿ ಪಟ್ಟಣದಲ್ಲಿ ಸುಮಾರು 1 ಎಕರೆ ಜಾಗದಲ್ಲಿ ಶಾದಿ ಮಹಲ್ ನಿರ್ಮಿಸಲು ಬೇಡಿಕೆ ಬಂದಿದ್ದು ಅದಕ್ಕೂ ಕೂಡ ಹಣವನ್ನು ಒದಗಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ
ಮಾಜಿ ಜಿಪಂ ಅಧ್ಯಕ್ಷ ಸಿದ್ದನಗೌಡ ಪೊಲೀಸ್ ಪಾಟೀಲ್, ವಾಮನ್ರಾವ್ ದೇಶಪಾಂಡೆ, ಲಿಂಗನಗೌಡ ಮಾಲಿ ಪಾಟೀಲ್, ಬಸನಗೌಡ ಪಾಟೀಲ ಹೊಸಮನಿ ಯಾಳಗಿ, ಕೆಂಭಾವಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಎಸ್ ಪಾಟೀಲ ಚಿಂಚೋಳಿ, ಅಶೋಕ್ ಸೊನ್ನದ, ಚೆನ್ನಾರೆಡ್ಡಿ ಮದ್ನೂರ್, ರವಿ ಶಂಕರ್ ಸೋನ್ನದ, ಶ್ರೀಧರ್ ದೇಶಪಾಂಡೆ ಮಹಮ್ಮದ್ ಸಾಸನೂರ್, ಅಪ್ಸರ ಪೇಶಮಾಮ, ಶರಣಬಸವ ಡಿಗ್ಗಾವಿ, ರೆಹಮಾನ್ ಪಟೇಲ್ ಯಲಗೋಡ, ಬಂದೇನವಾಜ್ ನಾಲತ್ವಾಡ, ಮೆಹಬೂಬ್ ನಾಸಿ ಸುಧಾಕರ ದಿಗ್ಗಾವಿ ರಫೀಕ್ ಖಾಜಿ ರಫೀಕ್ ವಡಿಕೇರಿ,ರಾಘವೇಂದ್ರ ಕವಲ್ದಾರ್, ಸಾಹೇಬಲಾಲ್ ಆಂದೇಲಿ, ಸಲೀಂ ಸಂಗ್ರಾಮ್ ಮಾಜಿ ಅಧ್ಯಕ್ಷರು ಪುರಸಭೆ ಶಹಾಪುರ ಸೇರಿದಂತೆ ಪಟ್ಟಣದ ಅಲ್ಪಸಂಖ್ಯಾತ ಮುಖಂಡರು ಹಾಗೂ ಯುವಕರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Be the first to comment

Leave a Reply

Your email address will not be published.


*