ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ಬಿಡಾಡಿ ದನಗಳ ಹಾವಳಿ ತಪ್ಪಿಸಲು ಸೂಕ್ತ ಕ್ರಮಕ್ಕೆ ಮುಂದಾದ ಹರಪನಹಳ್ಳಿ ಪುರಸಭೆ.

ಬಿಡಾಡಿ ದನಗಳ ಮಾಲೀಕರು ತಮ್ಮ ಮಾಲೀಕತ್ವದಲ್ಲಿ ಕಟ್ಟಿಕೊಳ್ಳಲು, ಹರಪನಹಳ್ಳಿ ಪುರಸಭೆಯ ಎಚ್ಚರಿಕೆಯ ಸಾರ್ವಜನಿಕ ಪ್ರಕಟಣೆ.

 

ಹರಪನಹಳ್ಳಿ : (ವಿಜಯನಗರ ಜಿಲ್ಲೆ) :- ಪಟ್ಟಣದ ವ್ಯಾಪ್ತಿಯಲ್ಲಿರುವ ಜನಸಂದಣಿ ಪ್ರದೇಶಗಳಾದ ಮಾರುಕಟ್ಟೆ, ಬಸ್ ನಿಲ್ದಾಣ ಮತ್ತು ಮುಖ್ಯ ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿಯಿಂದ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ತೊಂದರೆಯಾಗಿರುವ ಘಟನೆಗಳು ವರದಿಯಾಗಿರುತ್ತವೆ, ಹಾಗಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಸ್ಥಳಾಂತರ ಮಾಡುವುದು ಅನಿವರ‍್ಯವಾಗಿರುತ್ತದೆ. ಆದ್ದರಿಂದ ಈ ಪ್ರಕಟಣೆ ಪ್ರಕಟಪಡಿಸಿದ ತಕ್ಷಣ ತಾವು ಎಚ್ಚೆತ್ತುಕೊಂಡು ನಿಮ್ಮ ಮಾಲೀಕತ್ವದ ದನಗಳನ್ನು ಸಾರ್ವಜನಿಕವಾಗಿ ಬಿಡದೇ ನಿಮ್ಮ ಮಾಲೀಕತ್ವದಲ್ಲಿ ಕಟ್ಟಿಕೊಳ್ಳತಕ್ಕದ್ದು, ತಪ್ಪಿದಲ್ಲಿ ಕರ್ನಾಟಕ ಪುರಸಭೆ ಅಧಿನಿಯಮ 1964ರ ಪ್ರದತ್ತ ಅಧಿಕಾರದ ಮೇರೆಗೆ ಕಾನೂನು ಅಥವಾ ಪುರಸಭೆಯಿಂದ ಹಿಡಿದು ಗೋಶಾಲೆಗೆ ಸಾಗಿಸಿ, ಅದಕ್ಕೆ ತಗಲುವ ವೆಚ್ಚವನ್ನು ನಿಮ್ಮಿಂದ ಭರಿಸಲು ಅಗತ್ಯ ಕ್ರಮವಹಿಸಲಾಗುವುದೆಂದು ಪುರಸಭೆ ಮುಖ್ಯಾಧಿಕಾರಿಯಾದ ಎರಗುಡಿ ಶಿವಕುಮಾರ್ ಈ ಪತಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*