ಕೋಲಿ ಸಮಾಜ ಎಸಟಿ ಸೇರಿಸದೆ ಇದ್ದರೆ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತೆವೆ.

ಕಲಬುರಗಿ: ‘ಕೋಲಿ, ಕಬ್ಬಲಿಗ, ಅಂಬಿಗ, ಬೆಸ್ತ ಎಂದು ಕರೆಸಿಕೊಳ್ಳುವ ಕೋಲಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು. ಇಲ್ಲದಿದ್ದರೆ ಬಿಜೆಪಿಗೆ ತಕ್ಕ ಶಾಸ್ತಿಯಾಗಲಿದೆ’ ಎಂದು ರಾಜ್ಯ ಕೋಲಿ ಕಬ್ಬಲಿಗ ಎಸ್‌ಟಿ ಹೋರಾಟ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಲಚ್ಚಪ್ಪ ಜಮಾದಾರ ಎಚ್ಚರಿಸಿದರು.

 

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದೆ ರಾಜ್ಯಕ್ಕೆ ಭೇಟಿ ನೀಡಿದ್ದ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ನಿಮ್ಮ ಬೇಡಿಕೆ ನಮ್ಮ ಗಮನದಲ್ಲಿದೆ ಎಂದಿದ್ದರು. ಅಲ್ಲದೇ, ಈ ಕುರಿತಾದ ಕಡತವು ಕುಲಶಾಸ್ತ್ರೀಯ ಅಧ್ಯ ಯನದೊಂದಿಗೆ ಕೇಂದ್ರ ಸರ್ಕಾರದ ಬಳಿಯೇ ಇದೆ. ಆದರೂ ನಿರ್ಧಾರ ಕೈಗೊಳ್ಳಲು ಹಿಂದೇಟು ಹಾಕುತ್ತಿ ರುವುದೇಕೆ’ ಎಂದು ಪ್ರಶ್ನಿಸಿದರು.

 

‘ಕಳೆದ ಜನವರಿ 23ರಂದು ದೇವಲ ಗಾಣಗಾಪುರ ಗ್ರಾಮದಲ್ಲಿ ಮು ಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಠ್ಠಲ ಹೇರೂರ ಅವರ ಮೂರ್ತಿ ಅನಾವರಣ ಕಾರ್ಯ ಕ್ರಮದಲ್ಲಿ ಮಾತನಾಡಿ, ಅಧಿವೇಶನಕ್ಕೆ ಮುಂಚೆ ರಾಜ್ಯದ ಕೋಲಿ ಸಮಾಜದ ಪ್ರಮುಖರ ನಿಯೋಗವನ್ನು ದೆಹಲಿಗೆ ಕರದೊಯ್ದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮನವರಿಕೆ ಮಾಡುವುದಾಗಿ ಹೇಳಿರುವುದು ಮರೆತಿದ್ದಾರೆ’ ಎಂದು ಟೀಕಿಸಿದರು.

 

20ರಂದು ಪ್ರತಿಭಟನೆ: ಕೇವಲ ಬಾಯಿ ಮಾತಿನಲ್ಲೇ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ವಿರೋಧಿ ನೀತಿ ಖಂಡಿಸಿ ಇದೇ 20ರಂದು ಪ್ರತಿಭಟನೆ ಹಮ್ಮಿಕೊ ಳ್ಳಲಾಗಿದೆ. ಬೀದರ್, ಕಲಬುರಗಿ, ಯಾದಗಿರಿ ಹಾಗೂ ವಿಜಯಪುರ ಜಿಲ್ಲೆಗಳಿಂದ ಸಮಾಜದ ಬಾಂಧವರು ಪ್ರತಿಭಟನೆಗೆ ಆಗಮಿಸಲಿದ್ದಾರೆ ಎಂದು ವಿವರಿಸಿದರು.

Be the first to comment

Leave a Reply

Your email address will not be published.


*