ಸುರಪುರ:ಮತಕ್ಷೇತ್ರದ ಕಾಲುವೆ ಕೊನೆ ಭಾಗದ ರೈತರ ಜಮೀನುಗಳಿಗೆ ನೀರು ತಲುಪಿಸಲು ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪನಾಯಕ ಅವರು ಕೆಬಿಜೆಎನ್ನೆಲ್ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಸಿದ್ದಾಪುರ.ಬಿ, ಕಕ್ಕೇರಾ, ಕಾಮನಟಗಿ, ಶಾಂತಪುರ, ತಿಂಥಣಿ, ಅರಳಹಳ್ಳಿ, ಹಾಲಭಾವಿ, ಚನ್ನಪಟ್ನಾ, ಗೋಡಿಹಾಳ, ರಾಯಗೇರಾ, ನಾಗರಾಳ, ಹಂದ್ರಾಳ, ಕೋನಾಳ, ದೇವತ್ಕಲ್ ಗ್ರಾಮಗಳ ರೈತರಿಗೆ ಸಿದ್ದಾಪುರ.ಬಿ ಡಿಸ್ಟ್ರಿಬ್ಯೂಟರ್ ನಂ.5 ಮೂಲಕ ಕಾಲುವೆಗೆ ನೀರು ಹರಿಯುತ್ತಿದ್ದು, ಮಾ.7 ರಂದು ಕಾಲುವೆಗೆ ನೀರು ಮಾಜಿ ಶಾಸಕ ಆಗ್ರಹ ಹರಿಸುವುದು ಬಂದಾಗುತ್ತದೆ.ವಾರಾಬಂದಿ ಪದ್ಧತಿಯನ್ನು ಪ್ರಸ್ತುತ ಅವಧಿಯಲ್ಲಿ ಅನುಸರಿಸಿದರು ಕೂಡಾ ಕ್ಷೇತ್ರದ ಕೊನೆ ಭಾಗದ ರೈತರ ಜಮೀನುಗಳೀಗೆ ನೀರು ತಲುಪುತ್ತಿಲ್ಲಾ ಇದರಿಂದ ರೈತರು ಬೆಳೆದಿರುವ ಹಿಂಗಾರು ಬೆಳೆಗಳಾದ ಶೇಂಗಾ, ಸೆಜ್ಜೆ ಇನ್ನಿತರ ಬೆಳೆಯು ಒಣಗುತ್ತಿರುವುದರಿಂದ ರೈತರು ಕಂಗಾಲಾಗಿದ್ದಾರೆ ಎಂದು ತಿಳಿಸಿದ್ದಾರೆ.
ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಕಾಲುವೆ ಕೊನೆ ಭಾಗದ ರೈತರ ಜಮೀನುಗಳಿಗೆ ನೀರು ತಲುಪಿಸಲು ಅತೀ ಶೀಘ್ರದಲ್ಲಿಯೆ ಕ್ರಮವಹಿಸಬೇಕು.ಇಲ್ಲವಾದಲ್ಲಿ ಆಯಾ ಗ್ರಾಮಗಳ ರೈತರು, ಸಾರ್ವಜನಿಕರೊಂದಿಗೆ ಕಕ್ಕೇರಿಯ ಕೆಬಿಜೆಎನ್ನೆಲ್ ಎಇಇ ಉಪ ವಿಭಾಗ ಕಚೇರಿ ಎದುರಿಗೆ ಧರಣಿ ಸತ್ಯಾಗ್ರಹ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
Be the first to comment