ಗೆದ್ಲಗಟ್ಟೆ.ಮೊಬೈಲ್ ಬ್ಲಾಸ್ಟ್, ಪ್ರಾಣಾಪಾಯದಿಂದ ಯುವಕ ಪಾರು : ನಿಟ್ಟುಸಿರು ಬಿಟ್ಟ ಕುಟುಂಬದವರು

ವಿಜಯನಗರ, ಮಾರ್ಚ್ 04 : ಜಿಲ್ಲೆ ಕೂಡ್ಲಿಗಿ ತಾಲೂಕು, ಗೆದ್ಲಗಟ್ಟೆ ಗ್ರಾಮದ ಪವನ ತಂದೆ ಡ್ರೈವರ್ ನಾಗರಾಜ ಎಂಬ ಯುವಕನ ಮೊಬೈಲ್ ಬ್ಲಾಸ್ಟ್ ಆಗಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ತನ್ನ ಮಗ ರೆಡ್ಮಿ ಕಂಪನಿಯ ಮೊಬೈಲ್ ಬಳಸುತ್ತಿದ್ದು, ಎಂದಿನಂತೆ ಮೊಬೈಲ್ ನ್ನು ಬಳಕೆ ಮಾಡುವಾಗ ದೀಡೀರ್ ಮೊಬೈಲ್ ಬ್ಲಾಸ್ಟ್ ಆಗಿದೆ ಎಂದು ಮೊಬೈಲ್ ಬ್ಲಾಸ್ಟಾದ ಯುವಕ ಪವನನ ತಂದೆ ನಾಗರಾಜ ಮಾದ್ಯಮಕ್ಕೆ ತಿಳಿಸಿದ್ದಾರೆ. ಮನೆಯಲ್ಲಿ ಮೊಬೈಲ್ ಬಳಸುವಾಗ ಬ್ಲಾಸ್ಟ್ ಸಂಭವಿಸಿದ್ದು, ಭಾರ ಶಬ್ದವಾಗಿ ಮೊಬೈಲ್ ಹೊತ್ತಿಹುರಿದು ಕ್ಷಣ ಮಾತ್ರದಲ್ಲಿ ಸುಟ್ಟು ಕರಕಲಾಗಿದೆ.

 

 

ಪರಿಣಾಮ ಪವನ ರ ಕಣ್ಣಿಗೆ ಹಾಗೂ ಕಪಾಲಕ್ಕೆ ಗಂಭಿರ ಗಾಯಗಳಾಗಿವೆ, ಮುಂಗೈಗಳು ಭಾಶಃ ಸುಟ್ಟಿವೆ ತಕ್ಷಣ ಬೆಂಕಿ ನಂದಿಸಲಾಗಿದೆ. ಪೋಷಕರ ಸಮಯ ಪ್ರಜ್ಞೆಯೋ ಅಥವಾ ಮೊಬೈಲ್‌ ಬಳಸುತ್ತಿದ್ದ ಪವನರ ಅದೃಷ್ಟವೊ.ಯಾವುದೇ ತರಹದ ಪ್ರಾಣಾಪಾಯ ಜರುಗಿಲ್ಲ. ಘಟನೆಯ ನೆನೆದು ಕುಟುಂಬ ವರ್ಗದವರು ನಿಟ್ಟುಸಿರು ಬಿಟ್ಟಿದ್ದಾರೆ.

ಮೊಬೈಲ್ ಬ್ಲಾಸ್ಟ್ ನಿಂದಾಗಿ ಪವನ ರವರು ಅಘಾತಕ್ಕೊಳಗಾಗಿದ್ದಾರೆ, ಹಾಗೂ ಗಾಯಗೊಂಡಿದ್ದಾರೆ ಅವರು ಸ್ಥಳೀಯ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

 

Be the first to comment

Leave a Reply

Your email address will not be published.


*