ಮಸ್ಕಿ, ಮಾರ್ಚ್ 03 : ತಾಲೂಕಿನ ಮುಜರಾಯಿ ಇಲಾಖೆ ಆರ್ಚಕರು ಮಸ್ಕಿ ತಾಲ್ಲೂಕು
ವತಿಯಿಂದ ದೇವಸ್ಥಾನ ತಸದಿಕ್ ಭತ್ಯೆ ಹಾಗೂ ಅರ್ಚಕರ ಗುರುತಿನ ಚೀಟಿ ನೀಡಬೇಕು ಎಂದು
ಜಿಲ್ಲಾಧಿಕಾರಿಗಳು ರಾಯಚೂರು ಇವರಿಗೆ ಗ್ರೇಡ್ 2 ತಹಶೀಲ್ದಾರ್ ಶಣ್ಮುಖಪ್ಪ ಮಾನವಿ ಇವರ ಮೂಲಕ ಮನವಿಯನ್ನು ಸಲ್ಲಿಸಿದರು.
ಈ ವೇಳೆ ಆರ್ಚಕರಾದ ಸಿದ್ದಯ್ಯ ಹಿರೇಮಠ ಮಾತನಾಡಿ ತಾಲೂಕಿನ ಎಲ್ಲಾ ಗ್ರಾಮಗಳ ಮುಜರಾಯಿ ಇಲಾಖೆಗೆ ಸಂಬಂಧಪಟ್ಟ ಎಲ್ಲಾ ದೇವಸ್ಥಾನಗಳಿಗೆ ಸರಕಾರದಿಂದ ಹಣ ಮಂಜೂರಾಗಿದ್ದು, ಅಧಿಕಾರಿಗಳು ತಸದಿಕ್ ಭ್ಯತೆ ಬಿಡುಗಡೆ ಮಾಡಿ ಸಂಬಂಧಪಟ್ಟ ಅಧಿಕಾರಿಗಳನ್ನು ಬೇಟಿ ಮಾಡಿ ಕೇಳಿದರೆ, ನಮಗೆ
ಇಲ್ಲಿಯವರೆಗೆ ಯಾವುದೇ ಆದೇಶವಾಗಲೀ, ಮುಜರಾಯಿಗೆ ಸೇರುವ ದೇವಸ್ಥಾನಗಳ ಮಾಹಿತಿಯಾಗಲೀ ನೀಡಿರುವುದಿಲ್ಲ. ಆದ್ದರಿಂದ ತಾವುಗಳು ಈ ಮೊದಲಿನ ತಾಲೂಕುಗಳಾದ ಮಾನವಿ, ಸಿಂಧನೂರು, ಲಿಂಗಸುಗೂರು ತಾಲೂಕುಗಳಲ್ಲಿ ಕೇಳಿ ಎನ್ನುತ್ತಾರೆ. ಅದರಂತೆ ನಾವು ಆಯಾ ತಾಲೂಕುಗಳಲ್ಲಿ ಹೋಗಿ ಕೇಳಿದರೆ ನಿಮ್ಮದು ಮಸ್ಕಿ ತಾಲೂಕು ಬರುತ್ತೇ ನೀವು ಅಲ್ಲಿಯೇ ಹೋಗಿ ಕೇಳಿ ಎಂದು ವಿನಾಕಾರಣ ಕಾಲಹರಣ ಮಾಡುವುದು ಸರಿ ಅಲ್ಲ.
ಸ್ವಾಮೀ ನಾವು ಬಡ ಜಂಗಮರು ನಾವು ಮಂಗಳಾರತಿ ತಟ್ಟೆಯಿಂದ ಜೀವನ ಸಾಗಿಸುವವರು ಅಲೆದಾಡಲು ಸಹ ಆರ್ಥಿಕ ತೊಂದರೆ ಇದೆ ನಮ್ಮ ಅರ್ಚಕರ ಗೋಳನ್ನು ಮನಗಂಡು ತಾವುಗಳು ಇದರ ಬಗ್ಗೆ ಪರಿಶೀಲಿಸಿ ಆದಷ್ಟು ಬೇಗನೆ ನಮಗೆ ತಸದಿಕ್ ಭತ್ಯೆ ಎಲ್ಲಿಂದ ನಿಂತಿರುತ್ತದೆಯೋ ಅಲ್ಲಿಂದ 2022-23ನೇ ಸಾಲಿನವರೆಗೆ ತಸದಿಕ್ ಭತ್ಯೆ ಹಾಗೂ ವರ್ಷಸಾನ ಭತ್ಯೆ ಮತ್ತು ಅರ್ಚಕರಿಗೆ ಗುರುತಿನ ಚೀಟಿ ನೀಡಬೇಕೆಂದು ಎಂದು ಪಟ್ಟಣದ ತಹಶೀಲ್ದಾರ್ ಕಛೇರಿ ಮುಂಭಾಗ ತಾಲೂಕಿನ ಮುಜರಾಯಿ ಇಲಾಖೆ ಆರ್ಚಕರು ಗ್ರೇಡ್ 2 ತಹಶೀಲ್ದಾರ್ ಶಣ್ಮುಖಪ್ಪ ಮಾನವಿ ಇವರ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ಪ್ರಧಾನ ಅರ್ಚಕರಾದ ಸಿದ್ದಯ್ಯ ಹೆಸರೂರು ,ಮರಿಸ್ವಾಮಿ ಚಿಲ್ಕರಾಗಿ,ಬಸವಪ್ರಭು ವಟಗಲ್,ಸಿದ್ದಯ್ಯ ಚಿಲ್ಕರಾಗಿ,ಬಸಾಪುರ,ಮಲ್ಲದಗುಡ್ಡ,
ಹೀಗೆ ಮಸ್ಕಿ ತಾಲೂಕಿನ ಮುಜರಾಯಿ ಅರ್ಚಕರು ಇದ್ದರು.
Be the first to comment