ಎರಡನೆ ಹಂತದ ಸಸಾಲಟ್ಟಿ ಏತ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಬೊಮ್ಮಾಯಿ ಚಾಲನೆ*

ರಬಕವಿ ಬನಹಟ್ಟಿ: ಬಾಗಲಕೋಟೆ ಜಿಲ್ಲೆಯ ತೇರದಾಳ ಮತಕ್ಷೇತ್ರದ ಬಹುದಿನಗಳ ಬೇಡಿಕೆಯಾದ ಸಸಾಲಟ್ಟಿ ಶಿವಲಿಂಗೇಶ್ವರ ಏತ ನೀರಾವರಿ ಸುಮಾರು ೪೭೪ ಕೋಟಿ ರೂಪಾಯಿ ವೆಚ್ಚದ ಎರಡನೇ ಹಂತದ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಸಿಗೆ ನೀರುಣಿ ಅಡಿಗಲ್ಲು ಉದ್ಘಾಟಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಸಾಲಟ್ಟಿ ಶಿವಲಿಂಗೇಶ್ವರ ಏತ ನೀರಾವರಿ ಬಾಗಲಕೋಟೆ ಜಿಲ್ಲೆಯ ರಬಕವಿ,ಮುಧೋಳ್,ಬಿಳಗಿ ತಾಲ್ಲೂಕುಗಳ ಸಾವಿರಾರು ಹೆಕ್ಟೇರ ಕೃಷಿ ಭೂಮಿಯನ್ನು ನೀರಾವರಿ ಮಾಡುವುದಲ್ಲದೆ ಸದಾ ಭೂಮಿಯನ್ನು ಹಚ್ಚು ಹಸಿರಾಗಿ ಇರುವಂತೆ ಮಾಡುತ್ತದೆ ಎಂದರು ಈಗಾಗಲೇ ಕುಳ್ಳೊಳ್ಳಿ,ಮಂಟೂರ ಏತ ನೀರಾವರಿ ಕಾಮಗಾಮಗಾರಿ ಪ್ರಗತಿಯಲ್ಲಿದ್ದು ಹೀಗೆ ಉತ್ತರ ಕರ್ನಾಟಕದ ಹತ್ತಾರು ಏತ ನೀರಾವರಿಗಳಿಗೆ ಅನುದಾನ ಬಿಡುಗಡೆ ಮಾಡಿ ಸಕಲ ಕಲ್ಯಾಣ್ ಕರ್ನಾಟಕವನ್ನು ಸಮೃದ್ಧವಾಗಿ ನೀರಾವರಿ ಮಾಡುವುದಾಗಿ ಹೇಳಿದರು. ಅಭಿವೃದ್ಧಿವಂಚಿತ ಅವಳಿ ಜಿಲ್ಲೆಗಳಾದ ವಿಜಯಪುರ-ಬಾಗಲಕೋಟೆ ಜಿಲ್ಲೆಯ ೯ ಏತ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು. ಆಲಮಟ್ಟಿ ಜಲಾಶಯದ ಎತ್ತರವನ್ನು ೫೧೯ ಮೀ ಎತ್ತರಕ್ಕೆ ಏರಿಸಲು ಅನುಮೋದಸಲಾಗುವುದು ಎಂದು ಭರವಸೆ ನೀಡಿದರು.

 

ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ಎಸಿಎಸ್ಟಿ ಬಡ ಜನರಿಗೆ ೧೦೦ ಎಲೆಕ್ಟ್ರಿಕ್ ವಾಹನ ನೀಡಲಾಗುವುದು ಎಂದು ಹೇಳಿದರು. ಪುಕ್ಕಟೆ ಯೋಜನೆಗಳ ಘೋಷಿಣೆ ಬಗ್ಗೆ ಪರೋಕ್ಷವಾಗಿ ವಿರೋಧ ಪಕ್ಷವನ್ನು ಹರಿಹಾಯ್ದ ಮುಖ್ಯಮಂತ್ರಿಗಳು ನಮ್ಮ ಸರ್ಕಾರ ಈಗಾಗಲೇ ಬಡ ಜನರ ಅಭಿವೃದ್ಧಿಪರ ಯೋಜನೆಗಳನ್ನು ಜಾರಿಗೆತಂದಿದ್ದೆವೆ ರೈತವಿಧ್ಯಾನಿಧಿ ಯೋಜನೆಯಡಿಯಲ್ಲಿ ಬಡರೈತರ ಮಕ್ಕಳ ಕಲ್ಯಾಣಕ್ಕಾಗಿ ವಿಧ್ಯಾರ್ಥಿವೇತನ ಸಂಧ್ಯಾ ಸುರಕ್ಷ ಯೋಜನೆ ಪದವಿ ಪೂರ್ವ ಮತ್ತು ಪದವಿ ಶಿಕ್ಷಣವನ್ನು ಉಚಿತವಾಗಿ ನೀಡಲು ನಿರ್ಧರಿಸಿದೆ. ಬಡ ರೈತ ಮಹಿಳೆಯರಿಗೆ ಪ್ರತಿ ತಿಂಗಳು ಸಾವಿರ ರೂಪಾಯಿ ಸಹಾಯಧನ ನೀಡಲು ಸ್ತ್ರೀಶಕ್ತಿ ಯೋಜನೆ ಜಾರಿಗೆ ತರಲಾಗಿದೆ ಎಂದರು. ರೈತರಿಗೆ ೨ ಲಕ್ಷದಿಂದ ೫ ಲಕ್ಷದವರೆಗೆ ಕಡಿಮೆ ಬಡ್ಡಿ ಸಾಲ ನೀಡಲು ಏರಿಸಲಾಗಿದೆ. ನೇಕಾರ ನಿಗಮ ಮಾಡಿ ೨ ಲಕ್ಷದವರೆಗೆ ಸಬ್ಸಿಡಿ ನೀಡಲು ಮುಖ್ಯಮಂತ್ರಿ ಭರವಸೆ ನೀಡಿದರು.

 

ತೇರದಾಳ ಮತಕ್ಷೇತ್ರದಲ್ಲಿ ನೇಕಾರರು ಹೆಚ್ಚು ಇರುವ ಕಾರಣ ಬನಹಟ್ಟಿಯಲ್ಲಿ ಜವಳಿ ಪಾರ್ಕ್ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಬಜೆಟದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ಐದು ಸಾವಿರ ಕೋಟಿ ಮೊತ್ತವನ್ನು ತೆಗೆದಿಡಲಾಗಿದ್ದು ಹಲವು ಯೋಜನೆಗಳ ಶಂಕುಸ್ಥಾಪನೆ ಕೈಗೊಳ್ಳಲಾಗಿದೆ ಎಂದರು. ಉಚಿತ ಯೋಜನೆಗಳನ್ನು ಘೋಷಿಸುತ್ತಿರುವ ಕಾಂಗ್ರೆಸ್ ಪಕ್ಷವನ್ನು ನೇರವಾಗಿ ಕುಟುಕಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ತೇರದಾಳ ಮತಕ್ಷೇತ್ರದ ಶಾಸಕ ಸಿದ್ದು ಸವದಿ ಮಾತನಾಡಿ ಒಂದು ಲಕ್ಷ ಐವತ್ತು ಸಾವಿರ ನೇಕಾರರಿಗೆ ಸಾವಿರ ರೂಪಾಯಿಂದ ಐದು ಸಾವಿರ ರೂಪಾಯಿವರೆಗೆ ಏರಿಕೆ ಮಾಡಿ ನೇರವಾಗಿ ನೇಕಾರರ ಖಾತೆಗೆ ಜಮಾ ಮಾಡಲಾಗಿದೆ ಎಂದರು.

ತೇರದಾಳ ಮತಕ್ಷೇತ್ರದಲ್ಲಿ ನಾಲ್ಕು ಪದವಿ ಪೂರ್ವ ಕಾಲೇಜುಗಳನ್ನು ಮಂಜೂರು ಮಾಡಲಾಗಿದೆ ಸುಮಾರು ೩೭.೫ ಲಕ್ಷದವರೆಗೆ ದೇವಸ್ಥಾನ ಅಭಿವೃದ್ಧಿ ಮತ್ತು ಕಟ್ಟಡ ನಿರ್ಮಾಣ ಮಾಡಲು ಅನುದಾನ ಬಿಡುಗಡೆಗೊಳಿಸಿ ಜೀರ್ಣೋದ್ಧಾರ ಕಾರ್ಯ ಕೈಗೊಳ್ಳಲಾಗಿದೆ ಎಂದರು. ನೆನೆಗುದಿಗೆ ಬಿದ್ದಿ ಬಾಗಲಕೋಟೆ-ಕುಡುಚಿ ರೈಲು ಮಾರ್ಗ ನಿರ್ಮಾಣ ಮಾಡಲು ಸುಮಾರು ೨೫೦ ಕೋಟಿ ಮೊತ್ತವನ್ನು ಮುಖ್ಯಮಂತ್ರಿಗಳು ಬಿಡುಗಡೆಗೊಳಿಸದ್ದಾರೆ ಎಂದರು. ಇದೆ ಸಂದರ್ಭದಲ್ಲಿ ಬೃಹತ್ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ,ಸಂಸದ ಪಿ.ಸಿ.ಗದ್ದಿಗೌಡರ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಬಸನಗೌಡ ಪಾಟೀಲ್,ಸಂಜು ತೆಗ್ಗಿ,ವಿದ್ಯಾಧರ ಸವದಿ,ಬಸವರಾಜ ಹಿಟ್ಟಿನಮಠ,ಸುರೇಶ ಅಕ್ಕಿವಾಟ ಉಪಸ್ಥತಿಯಲ್ಲಿದ್ದರು.

Be the first to comment

Leave a Reply

Your email address will not be published.


*