ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶನಿವಾರ ಸಂಜೆ ವೇಳೆ ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯಿಂದ ಪ್ರಥಮ ವರ್ಷದ ರಾಜ್ಯ ಸಮ್ಮೇಳನ ಅದ್ದೂರಿಯಾಗಿ ನಡೆಯಿತು.ಪತ್ರಕರ್ತರ ರಾಜ್ಯ ಸಮ್ಮೇಳನದ ಕಾರ್ಯಕ್ರಮವನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳಾದ ವಿ. ಗೋಪಾಲಗೌಡ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ರಾಜ್ಯದ ಪತ್ರಕರ್ತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಿ ನೆರವು ನೀಡಬೇಕು ಎಂದರು.ಅಲ್ಲದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ನಡೆಸುವ ಸರ್ಕಾರ ಉತ್ತಮ ನೀತಿ ನಿಯಮಗಳಿಂದ ಇರಬೇಕು ಇದರಲ್ಲಿ ಸ್ವಲ್ಪ ಎಡವಿದರೆ ನಾಲ್ಕನೇ ಪಿಲ್ಲರ್ ಎನಿಸಿಕೊಂಡು ಪತ್ರಿಕೆ/ ಮಾಧ್ಯಮ ಅದನ್ನು ಜನರ ಗಮನ ಸೆಳೆದು ಬಹು ದೊಡ್ಡ ರೀತಿಯಲ್ಲಿ ಕಾರ್ಯನಿರ್ವಹಿಸುವುದು ಪತ್ರಕರ್ತರು ಅಂತಾ ಹೇಳಿದರು.ಇನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಧ್ಯಕ್ಷರಾದ ಮಲ್ಲಿಕಾರ್ಜುನ ಬಂಗ್ಲೆ ಅವರು, ಮಾತನಾಡಿ ಧ್ವನಿ ಸಂಘಟನೆ ಪತ್ರಕರ್ತರು ಮಾತ್ರ ಅಲ್ಲಾ ರಾಜ್ಯದ ಎಲ್ಲಾ 16 ಸಾವಿರ ಪತ್ರಕರ್ತರ ಜ್ವಲಂತ ಸಮಸ್ಯೆಗಳನ್ನು ರಾಜ್ಯ ಸರ್ಕಾರದಿಂದ ಮುಂದಿಟ್ಟು ನ್ಯಾಯ ಕೊಡಿಸುತ್ತೇನೆ ಎಂದರು.ಇದಲ್ಲದೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಬಜೆಟ್ ನಲ್ಲಿ ಪತ್ರಕರ್ತರಿಗೆ ಯಾವುದೇ ನೆರವು ನೀಡುವ ಕೆಲಸ ಮಾಡಿಲ್ಲ. ಸರಳ ಸಜ್ಜನಿಕೆಯ ವ್ಯಕ್ತಿ ಅಂತಾರೆ ಅವರಿಗೆ ಪತ್ರಕರ್ತರ ಕಷ್ಟ ಆಲಿಸುವ ಹೃದಯವಿಲ್ಲ. ಕೊಟ್ಟ ಭರವಸೆಗಳು ಅವರು ಈಡೇರಿಸಿಲ್ಲ ಎಂದು ಹೇಳಿದರು.ಇನ್ನು ಇದೆ ವೇಳೆ ಸಮಾಜ ಸೇವೆ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಪೂಜ್ಯ ಮಹರ್ಷಿ ಆನಂದ ಗುರೂಜಿ, ಎ.ಎಸ್.ರಮಾಕಾಂತ್ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.
—–
ವರದಿ: ಧರ್ಮರಾಜ್ ಅಂಬಿಗ ನ್ಯೂಸ್ ಯಾದಗಿರಿ
Be the first to comment