ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ಒಟ್ಟು ಹೊಸದಾಗಿ 96 ಅಂಗನವಾಡಿ ಕೇಂದ್ರ ಮಂಜೂರು ಆಗಿದ್ದು. ಅದರಲ್ಲಿ ಸುರಪುರ ನಗರ ಕ್ಕೆ 12 ಕೇಂದ್ರ ಮಂಜೂರು ಆಗಿರುತ್ತವೆ. ಅದರಲ್ಲಿ ಸುಣಗಾರ ಓಣಿ ಕೇಂದ್ರ ವೂ ಒಂದಾಗಿದ್ದು ಇಂದು ಮೊದಲನೆಯದಾಗಿ ಈ ಕೇಂದ್ರ ವನ್ನು ಉದ್ಘಾಟನೆ ಮಾಡಲಾಯಿತು.
ಹೊಸದಾಗಿ ಮಂಜೂರಾದ ಸುಣಗಾರ ಓಣಿ ಅಂಗನವಾಡಿ ಕೇಂದ್ರವನ್ನು ಇಂದು ನಗರಸಭೆ ಸದಸ್ಯರಾದ ಶ್ರೀ ವೇಣು ಮಾದವ ನಾಯಕ ರವರು ಉದ್ಘಾಟಿಸಿದರು. ಕಾರ್ಯಕ್ರಮ ದ ಅಧ್ಯಕ್ಷತೆಯನ್ನು ಶ್ರೀ ಬಲಭೀಮನಾಯಕ ಬೈರಿಮಡ್ಡಿ ರವರು ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಈಶ್ವರ ನಾಯಕ ಕಬಾಡಗೇರಾ,, ಶ್ರೀ ವೆಂಕಟೇಶ ನಾಯಕ ಬೈರಿಮಡ್ಡಿ, ರವಿ ನಾಯಕ ಬೈರಿಮಡ್ಡಿ , ಶ್ರೀ ರಾಚಯ್ಯ ದೊರೆ, ಶ್ರೀ ದೇವಪ್ಪ ದೊರೆ ಹಾಗೂ ಹಿರಿಯ ಮೇಲ್ವಿಚಾರಕಿಯರಾದ ಶ್ರೀಮತಿ ಶರಣಮ್ಮ ದೇಸಾಯಿ, ಪದ್ಮಾವತಿ ನಾಯಕ, ಶಶಿಕಲಾ ಗಾಳಿ, ಜಯಶ್ರೀ ಬಿರಾದಾರ, ಸಾವಿತ್ರಿ ಗಾಳಿ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮಕ್ಕಳು ಉಪಸ್ಥಿತರಿದ್ದರು.
Be the first to comment