ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಿ . ಆರ್‌ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಜೈನ ಕಾಲೇಜು ವಿದ್ಯಾರ್ಥಿಗಳನ್ನು ಬಂಧಿಸಿ, ಮನವಿ

ಬೆಳಗಾವಿ: ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಿ . ಆರ್‌ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಜೈನ ಕಾಲೇಜು ವಿದ್ಯಾರ್ಥಿಗಳನ್ನು ಬಂಧಿಸಿ, ಸೂಕ್ತ ಕ್ರಮ ಜರುಗಿಸುವಂತೆ ಕರ್ನಾಟಕ ವಾಲ್ಮೀಕಿ ಯುವ ವೇದಿಕೆಯಿಂದ ಪೊಲೀಸ್‌ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

 

ಈಗಾಗಲೇ ರಾಜ್ಯಾದ್ಯಂತ ಪ್ರತಿಭಟನೆ ಹೋರಾಟಗಳು ನಡೆಯುತ್ತಿದ್ದು ಕಾಲೇಜು ಆಡಳಿತ ಮಂಡಳಿ ಆರು ವಿದ್ಯಾರ್ಥಿಗಳನ್ನು ಅಮಾನತ್ತು ಮಾಡಿದ್ದು ಸಾಲದು ಕೂಡಲೇ ಪೊಲೀಸ್‌ರು ಆರೋಪಿಗಳನ್ನು ಬಂಧಿಸಬೇಕು. ಜಾತಿ ವ್ಯವಸ್ಥೆಯನ್ನು ಖಂಡಿಸುವ ಸಂದೇಶವನ್ನ ಕೊಡುವ ಭರದಲ್ಲಿ ವಿದ್ಯಾರ್ಥಿಗಳು ಡಾ. ಬಿ . ಆರ್‌ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ.

 

ಇಂತಹ ಹೇಳಿಕೆಯಿಂದ ಅಶಾಂತಿ ಉಂಟಾಗಿದೆ. ಜಾತಿ ಜಾತಿಗಳ ಮಧ್ಯ ಜಗಳ ಹತ್ತುತ್ತಿದ್ದಾರೆ ಇದಕ್ಕೆಲ್ಲ ಕಡಿವಾಣ ಹಾಕಬೇಕಾಗಿದೆ ಜಾತಿವಾದಿಗಳು ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ದಿನನಿತ್ಯ ಅವಮಾನ ಮಾಡುತ್ತಿದ್ದಾರೆ ಅಂತ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯವಿದೆ ಎಂದು ಹೇಳಿದರು. ‌

 

ವಿದ್ಯಾರ್ಥಿಗಳ ಅಸಭ್ಯ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ದಲಿತ ಪರ ಸಂಘಟನೆಯಿಂದ ಆಕ್ರೋಶ ವ್ಯಕ್ತವಾಗಿದೆ.ಈಗಾಗಲೇ ಘಟನೆ ಬಗ್ಗೆ ಮಹಾರಾಷ್ಟ್ರದಲ್ಲಿ ದಲಿತ ಸಂಘಟನೆಯ ಮುಖಂಡ ಅಕ್ಷಯ್‌ ಬನ್ಸೋಡೆ ಎಂಬುವವರು ನಾಂದೇಡ್‌ ಅವರು ಕೂಡಾ( ನೆರೆ ರಾಜ್ಯ ( ಮಹಾರಾಷ್ಟ್ರ) ಜಿಲ್ಲಾ ಪೊಲೀಸ್‌ ವರಿಷ್ಠಾಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಅಂದರಂತೆ ಸಂವಿಧಾನ ಶಿಲ್ಪಿ ಡಾ. ಬಿ. ಆರ್‌ ಅಂಬೇಡ್ಕರ್ ಅವರಿಗೆ ಅವಹೇಳನ ಮಾಡಿರುವರ ವಿರುದ್ಧ ಎಸ್‌ ಸಿ ಸೆಕ್ಷನ್‌ 3 ರ ಅಡಿಯಲ್ಲಿ ಹಾಗೂ ಎಸ್ಟಿ ಕಾಯ್ದೆ, ಹಾಗೇಯೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 153 , 153 ಎ , 295 , 499, 500, 503, 504, 506 ಮತ್ತು 34ರ ದೂರನ್ನು ಪರಿಗಣಿಸಿ ಪ್ರದರ್ಶಕರು ಮತ್ತು ವಿಶ್ವ ವಿದ್ಯಾಲಯ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪೊಲೀಸ್‌ ಆಯುಕ್ತರ ಅಧಿಕಾರಿಗಳಿಗೆ ಒತ್ತಾಯಿಸಲಾಯಿತು.

 

ಈ ಸಂದರ್ಭದಲ್ಲಿ ಕರ್ನಾಟಕ ವಾಲ್ಮೀಕಿ ಯುವ ವೇದಿಕೆ ರಾಜಾಧ್ಯಕ್ಷ ವಿಜಯ ತಳವಾರ, ಮಹಾದೇವ ತಳವಾರ, ದೀಪಕ ಗುಡಗನಟ್ಟಿ, ಸುರೇಶ ಗೌವನ್ನರ, ನೀತಿಶ ಅರುಂದೆ ಹಾಗೂ ಇತರರು ಇದ್ದರು.

Be the first to comment

Leave a Reply

Your email address will not be published.


*