ಮಸ್ಕಿ, ಫೆಬ್ರುವರಿ 14 : ಸಾರ್ವಜನಿಕ ಹೋರಾಟ ಸಮಿತಿ ಮಸ್ಕಿ ವತಿಯಿಂದ ಪರಡಿ ನಂಬರ್ 17 ರ ಅತಿಕ್ರಮಣ ಜಾಗವನ್ನು ತೆರವುಗೊಳಿಸುವಂತೆ ಬ್ರಮರಾಂಬ ದೇವಿ ದೇವಸ್ಥಾನದಿಂದ ಅಂಬೇಡ್ಕರ್ ವೃತ್ತದ ವರೆಗೂ ಧರಣಿಯ ನಾಮಫಲಕವನ್ನು ಹಿಡಿದು ಕಾಲ್ನಡಿಗೆಯ ಮೂಲಕ ಜಾಥಾ ನಡೆಸಿದರು.ನಂತರ ಅಂಬೇಡ್ಕರ್ ವೃತ್ತದ ಬಳಿ ಧರಣಿ ನಡೆಸಿದರು.ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ಆಗಮಿಸಿ ಮನವಿ ಪತ್ರ ಸ್ವೀಕರಿಸಿದ್ದಾರೆ.
ಮಸ್ಕಿಪಟ್ಟಣವು ತಾಲೂಕು ಕೇಂದ್ರ ಸ್ಥಾನವಾಗಿದ್ದು ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಪಟ್ಟಣವಾಗಿದೆ. ಮಸ್ಕಿಪಟ್ಟಣದ ಮುಖ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ಕಾರಿ ಪರಿಡಿ ನಂಬರ್ 17 ಇದು ಸರಕಾರಿ ಜಮೀನು ಆಗಿದ್ದು ಈ ಜಮೀನನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಿಸಿ ಬಾಡಿಗೆ ರೂಪದಲ್ಲಿ ಲಕ್ಷಾಂತರ ರೂಪಾಯಿಗಳನ್ನು ಬಾಡಿಗೆ ಪಡೆದುಕೊಳ್ಳುತ್ತಿದ್ದಾರೆ. ಇದರ ಬಗ್ಗೆ ನಾವುಗಳು ಈ ಮೊದಲು ಜಿಲ್ಲಾಧಿಕಾರಿಗಳು ರಾಯಚೂರು, ಸಹಾಯಕ ಆಯುಕ್ತರು ಲಿಂಗಸಗೂರು, ತಹಸಿಲ್ದಾರರು ಮಸ್ಕಿ, ಪ್ರಾಚ್ಯ ವಸ್ತು ಇಲಾಖೆ ಹೊಸಪೇಟೆ, ಮುಖ್ಯ ಅಧಿಕಾರಿಗಳು ಪುರಸಭೆ ಮಸ್ಕಿ ಇವರುಗಳಿಗೆ ಸಾಕಷ್ಟು ಸಲ ಲಿಖಿತ ರೂಪದಲ್ಲಿ ಮನವಿಯನ್ನು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ. ಅನಿವಾರ್ಯವಾಗಿ ಪ್ರಗತಿಪರ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ರೈತ ಸಂಘಗಳು, ಚಿಂತಕರು, ರಾಜಕೀಯ ಮುಖಂಡರುಗಳು ಜೊತೆಗೂಡಿ ಸೋಮವಾರ ಒಂದು ದಿನದ ಸಂಕೇತಿಕ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದರು. ಬ್ರಮರಾಂಬ ದೇವಿ ದೇವಸ್ಥಾನದಿಂದ ಹಳೆ ಬಸ್ ನಿಲ್ದಾಣದ ಅಂಬೇಡ್ಕರ್ ವೃತ್ತದವರೆಗೂ ಹೋರಾಟ ಸಮಿತಿಯ ನಾಮಫಲಕಗಳನ್ನು ಹಿಡಿದು ಕಾಲ್ನಡಿಗೆಯ ಮೂಲಕ ಅಂಬೇಡ್ಕರ್ ವೃತ್ತ ತಲುಪಿದರು.ಧರಣಿ ನಡೆಸುವ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ಇವರು ಸಮಸ್ಯೆಯ ಕುರಿತು ಅಹವಾಲಿಸಿ,ಚರ್ಚೆ ನಡೆಸಿ, ಧರಣಿ ನಿರತರ ಮನವೊಲಿಸಿ ಮದ್ಯಾಹ್ನ ಮನವಿ ಪತ್ರವನ್ನು ಸ್ವೀಕರಿಸಿ ಈ ಮನವಿ ಪತ್ರವನ್ನು ಸಂಭಂದಪಟ್ಟ ಮೇಲಾಧಿಕಾರಿಗಳಿಗೆ ಮುಟ್ಟಿಸುವಲ್ಲಿ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಿ.ದಾನಪ್ಪ ನಿಲೋಗಲ್ ಹಿರಿಯ ಸಾಹಿತಿ, ನೀಲಕಂಠಪ್ಪ ಮಸ್ಕಿ,ಸುರೇಶ್ ಅಂತರಗಂಗಿ,ಬಸವರಾಜ್ ನಾಯಕ ವಾಡಿ ಮಸ್ಕಿ, ನಿರುಪಾದಿ ಗೋಮರ್ಸಿ ಕೆ ಆರ್ ಎಸ್ ಪಕ್ಷದ ಯುವ ಜಿಲ್ಲಾಧ್ಯಕ್ಷರು ರಾಯಚೂರು, ಆದಪ್ಪ ಅಂಕುಶದೊಡ್ಡಿ ಕೆ ಆರ್ ಎಸ್ ಪಕ್ಷ,
ಕನ್ನಡಪರ ಸಂಘಟನೆಗಳ ಅಧ್ಯಕ್ಷರಾದ ಅಶೋಕ್ ಮುರಾರಿ, ಆರ್.ಕೆ ನಾಯಕ,ದುರ್ಗರಾಜ್ ವಟಗಲ್,ಸಿದ್ದು ಮುರಾರಿ, ಮಲ್ಲಿಕ್ ಕೊಠಾರಿ ಮಸ್ಕಿ, ಭದ್ರಿ ಕೊಠಾರಿ ವಿದ್ಯಾರ್ಥಿ ಸಂಘಟನೆ ಸೇರಿದಂತೆ ಸ್ಥಳೀಯ ಮುಖಂಡರು ಪ್ರಗತಿಪರ ಸಂಘಟನೆಗಳ ಹೋರಾಟಗಾರರು ಹಾಗೂ ಕಂದಾಯ ನಿರೀಕ್ಷಕರಾದ ಶರಣೇಗೌಡ ಭಾಗಿಯಾಗಿದ್ದರು.
Be the first to comment