ಕಾಂಗ್ರೆಸ್ ವಿರುದ್ಧ ವಾಗ್ದಾಳಿ ದಾಖಲೆ ಸಮೇತ ಸಿದ್ದ :ರಾಜುಗೌಡ

ಸುರಪೂರ, ಫೆ. 13: ಇಲ್ಲಿಯ ನಗರಸಭೆ ಸದಸ್ಯ ಸೋಮನಾಥ ಡೊಣ್ಣಿಗೇರಿ, ಯುವ ಮುಖಂಡರಾದ ಪ್ರವೀಣ್, ಪ್ರತಾಪ್‌ ಸೇರಿ ತಾಲೂಕಿನ ನಾನಾ ಗ್ರಾಮಗಳ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ತೊರೆದು ಶಾಸಕ ರಾಜುಗೌಡರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.ಇದೇ ಸಂದರ್ಭದಲ್ಲಿ ಮಹಿಳಾ ಸ್ವಸಹಾಯ ಸಂಘದ ನೂರಕ್ಕೂ ಹೆಚ್ಚು ಮಹಿಳೆಯರು ಬಿಜೆಪಿಗೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಎಲ್ಲರನ್ನು ಪಕಕ್ಕೆ ಬರಮಾಡಿಕೊಂಡು ಮಾತನಾಡಿದ ಶಾಸಕ ರಾಜುಗೌಡ, ಅನೇಕರು ಬಿಜೆಪಿ ಪಕ್ಷಕ್ಕೆ ಬರುವವರಿಗೆ ದುಡ್ಡು ಕೊಟ್ಟು ಸೇರಿಸಿಕೊಳ್ಳುತ್ತಾರೆ ಎಂದು ಸುಳ್ಳು ಹೇಳುತ್ತಿದ್ದಾರೆ. ಇಂದು ಪಕ್ಷಕ್ಕೆ ಸೇರ್ಪಡೆಗೊಂಡವರು ಕಾಂಗ್ರೆಸ್ ಪಕ್ಷದ ಧೋರಣೆಗೆ ಬೇಸತ್ತು ಬಂದಿದ್ದಾರೆ ವಿನಃ,ಯಾರಿಗೂ ಹಣವನ್ನು ನೀಡಿಲ್ಲ ಅಲ್ಲದೆ ಯಾವುದೇ ಡಿಮ್ಯಾಂಡ್ ಇಲ್ಲದೆ ಇಂದು ನಮ್ ಪಕ್ಷಕ್ಕೆ ಬಂದಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಕಳೆದ ಕೆಲ ದಿನಗಳ ಹಿಂದೆ ದೇವತೈಲ್ ಗ್ರಾಮಕ್ಕೆ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರು ಶಾಸಕ ರಾಜುಗೌಡ ನೀಡಿದ್ದ ಹೇಳಿಕೆಗೆ ಹರಿಹಾಯ್ದ ಮಾಜಿ ಸಿ.ಎಮ್ ಸಿದ್ದರಾಮಯ್ಯ ಮತ್ತು ಮಾಜಿ ಸಚಿವ ಎಮ್.ಬಿ ಪಾಟೀಲ್ ವಿರುದ್ಧ ಮಾತನಾಡಿ, ಮಿಸ್ಟರ್ ಎಂ.ಬಿ.ಪಾಟೀಲ್, ನಾರಾಯಣಪುರ ಸ್ಮಾಡಾ ಗೇಟ್-2ನ್ನು 2017 ರಲ್ಲಿ ನೀವೆ ಉದ್ಘಾಟಿಸಿದ್ದರೆ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುವೆ. ಇಲ್ಲಾ 2018 ರಲ್ಲಿ ನಾನು ಎಂಎಲ್‌ ಎ ಆದ ನಂತರ ಟೆಂಡರ್ ಆಗಿತ್ತು ಅಂದ್ರೆ ನೀವು ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕು. ತಾಕತ್ತಿದ್ದರೆ ನನ್ನ ಈ ಸವಾಲು ಸ್ವೀಕರಿಸಿ ಎಂದು ಗುಡುಗಿದರು. ರಾಜೂಗೌಡಗೆ ತಲೆ ಕೆಟ್ಟಿದೆ, ಹುಚ್ಚ ಅಂತಾ, ನಾವು ಮಾಡಿದ ಉದ್ಘಾಟನೆ 5 ವರ್ಷದ ನಂತರ ಉದ್ಘಾಟಿಸಲಾಗಿದೆ ಎಂದು ಏನೇನೋ ಮಾತಾಡಿ ಹೋಗಿದ್ದಾರೆ. ಸ್ಯಾಡಾ ಗೇಟ್ ಯಾವಾಗ ಉದ್ಘಾಟನೆಯಾಗಿದೆ ಎಂಬುದು ದಾಖಲೆ ಸಮೇತ ಚರ್ಚೆಗೆ ನಾನು ಸಿದ್ದ. ನನ್ನ ಸವಾಲು ಸ್ವೀಕರಿಸುವ ತಾಕತ್ತು ಎಂ.ಬಿ.ಪಾಟೀಲ್ ಗೆ ಇದರ ಬರಲಿ ಎಂದು ಸವಾಲು ಎಸೆದರು.ಸುರಪುರ ಕ್ಷೇತ್ರ ಅಭಿವೃದ್ಧಿಯಾಗಿಲ್ಲ, ಇಲ್ಲಿ ಯಾವ ಯೋಜನೆಗಳು ಜಾರಿಯಾಗಿಲ್ಲ ಎಂದು ಹೇಳಿ ಹೋಗಿರುವ ಶಾಸಕ ಜಮೀರ್ ಅಹ್ಮದ್, ಪ್ರಿಯಾಂಕ್ ಖರ್ಗೆ ಅವರು ಅಂದು ದೇವತ್ಕಲ್ ನಲ್ಲಿ ನಿಂತು ಭಾಷಣ ಮಾಡಿ ಹೋದ ಸ್ಥಳ ಹೈಸ್ಕೂಲ್ ಮೈದಾನ, ಹೈಸ್ಕೂಲ್ ಕಟ್ಟಡ ನಿರ್ಮಾಣ ಇದೇ ರಾಜೂಗೌಡ ಮಾಡಿಸಿದ್ದು, ಅದು ಅವರ ಕಣ್ಣಿಗೆ ಕಾಣಲಿಲ್ಲ. ಮುಂದೆ ಅವರ ಕ್ಷೇತ್ರಕ್ಕೆ ಹೋದಾಗ ಈ ಕುರಿತು ಉತ್ತರ ಕೊಟ್ಟು ಬರುವೆ ಎಂದು ಹೇಳಿದರು.ಉದ್ಯಮಿ ಡಾ.ಎಸ್.ಪಿ.ದಯಾನಂದ, ಪ್ರಮುಖರಾದ ರಾಜಾ ಹನುಮಪ್ಪನಾಯಕ, ಯಲ್ಲಪ್ಪ ಕುರುಕುಂದಿ, ಡಾ.ಸುರೇಶ್ ಸಜ್ಜನ್, ಕಿಶೋರಚಂದ ಜೈನ್, ಮರಿಲಿಂಗಪ್ಪ ನಾಯಕ ಕರ್ನಾಳ, ಬಸವರಾಜ ಸ್ಥಾವರಮಠ, ಹಣಮಂತ ನಾಯಕ ಬಬುಗೌಡ, ರಾಜಾ ಮುಕುಂದ ನಾಯಕ, ದೊಡ್ಡ ದೇಸಾಯಿ, ವೇಣುಮಾಧವ ನಾಯಕ, ಪ್ರಕಾಶ ಸಜ್ಜನ್, ದುರ್ಗಪ್ಪ ಗೋಗಿ ಕೇರಾ, ರಾಜಾ ರಂಗಪ್ಪ ನಾಯಕ, ಭೀಮಾಶಂಕರ ಬಿಲ್ಲವ, ಡಾ.ಬಿ.ಎಂ.ಹಳ್ಳಿಕೋಟೆ ಇದ್ದರು.ನಂತರ ಟೆಂಡರ್ ಆಗಿತ್ತು ಅಂದ್ರೆ ನೀವು ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕು.

ತಾಕತ್ತಿದ್ದರೆ ನನ್ನ ಈ ಸವಾಲು ಸ್ವೀಕರಿಸಿ ಎಂದು ಗುಡುಗಿದರು. ರಾಜೂಗೌಡಗೆ ತಲೆ ಕೆಟ್ಟಿದೆ, ಹುಚ್ಚ ಅಂತಾ, ನಾವು ಮಾಡಿದ ಉದ್ಘಾಟನೆ 5 ವರ್ಷದ ನಂತರ ಉದ್ಘಾಟಿಸಲಾಗಿದೆ ಎಂದು ಏನೇನೋ ಮಾತಾಡಿ ಹೋಗಿದ್ದಾರೆ. ಸ್ಯಾಡಾ ಗೇಟ್ ಯಾವಾಗ ಉದ್ಘಾಟನೆಯಾಗಿದೆ ಎಂಬುದು ದಾಖಲೆ ಸಮೇತ ಚರ್ಚೆಗೆ ನಾನು ಸಿದ್ದ. ನನ್ನ ಸವಾಲು ಸ್ವೀಕರಿಸುವ ತಾಕತ್ತು ಎಂ.ಬಿ.ಪಾಟೀಲ್ ಗೆ ಇದರ ಬರಲಿ ಎಂದು ಸವಾಲು ಎಸೆದರು.ಸುರಪುರ ಕ್ಷೇತ್ರ ಅಭಿವೃದ್ಧಿಯಾಗಿಲ್ಲ, ಇಲ್ಲಿ ಯಾವ ಯೋಜನೆಗಳು ಜಾರಿಯಾಗಿಲ್ಲ ಎಂದು ಹೇಳಿ ಹೋಗಿರುವ ಶಾಸಕ ಜಮೀರ್ ಅಹ್ಮದ್, ಪ್ರಿಯಾಂಕ್ ಖರ್ಗೆ ಅವರು ಅಂದು ದೇವತ್ಕಲ್ ನಲ್ಲಿ ನಿಂತು ಭಾಷಣ ಮಾಡಿ ಹೋದ ಸ್ಥಳ ಹೈಸ್ಕೂಲ್ ಮೈದಾನ, ಹೈಸ್ಕೂಲ್ ಕಟ್ಟಡ ನಿರ್ಮಾಣ ಇದೇ ರಾಜೂಗೌಡ ಮಾಡಿಸಿದ್ದು, ಅದು ಅವರ ಕಣ್ಣಿಗೆ ಕಾಣಲಿಲ್ಲ. ಮುಂದೆ ಅವರ ಕ್ಷೇತ್ರಕ್ಕೆ ಹೋದಾಗ ಈ ಕುರಿತು ಉತ್ತರ ಕೊಟ್ಟು ಬರುವೆ ಎಂದು ಹೇಳಿದರು.

ಉದ್ಯಮಿ ಡಾ.ಎಸ್.ಪಿ.ದಯಾನಂದ, ಪ್ರಮುಖರಾದ ರಾಜಾ ಹನುಮಪ್ಪನಾಯಕ, ಯಲ್ಲಪ್ಪ ಕುರುಕುಂದಿ, ಡಾ.ಸುರೇಶ್ ಸಜ್ಜನ್, ಕಿಶೋರಚಂದ ಜೈನ್, ಮರಿಲಿಂಗಪ್ಪ ನಾಯಕ ಕರ್ನಾಳ, ಬಸವರಾಜ ಸ್ಥಾವರಮಠ, ಹಣಮಂತ ನಾಯಕ ಬಬುಗೌಡ, ರಾಜಾ ಮುಕುಂದ ನಾಯಕ, ದೊಡ್ಡ ದೇಸಾಯಿ, ವೇಣುಮಾಧವ ನಾಯಕ, ಪ್ರಕಾಶ ಸಜ್ಜನ್, ದುರ್ಗಪ್ಪ ಗೋಗಿ ಕೇರಾ, ರಾಜಾ ರಂಗಪ್ಪ ನಾಯಕ, ಭೀಮಾಶಂಕರ ಬಿಲ್ಲವ, ಡಾ.ಬಿ.ಎಂ.ಹಳ್ಳಿಕೋಟೆ ಇದ್ದರು.

 

Be the first to comment

Leave a Reply

Your email address will not be published.


*