ಮಸ್ಕಿ, ಫೆಬ್ರುವರಿ 14 : ಇನ್ನೂ ಒಂದು ವಾರದಲ್ಲಿ ಕಡಲೆ ಕೇಂದ್ರ ಆರಂಭಿಸಲು ಕ್ರಮ ಕೈಗೊಳ್ಳುವುದಾಗಿ
ಮುಖ್ಯಮಂತ್ರಿ ಬಸವರಾಜ ಬೊಮ್ಯಾಯಿ ಭರವಸೆಯನ್ನು ನೀಡಿದ್ದಾರೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಪತ್ರಿಕೆಗೆ ತಿಳಿಸಿದ್ದಾರೆ.
ತಾಲ್ಲೂಕಿನಾದ್ಯಂತ ರೈತರು ಕಡಲೆ ಬೆಳೆ ಬೆಳೆದಿದಾರೆ. ಆದರೆ, ಮಾರುಕಟೆಯಲ್ಲಿಕಡಲೆ ಬೆಳೆ ಬೆಲೆ ಕುಸಿದಿದೆ. ಇದರಿಂದ ರೈತರಿಗೆ ನಷ್ಟ ಉಂಟಾಗುತ್ತದೆ. ಕಡಲೆ ಬೆಳೆಗಾರರಿಗೆ ಸರ್ಕಾರದ ಖರೀದಿಸುವಂತೆ ಈಚೆಗೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸಂದಿಸಿದ ಮುಖ್ಯಮಂತ್ರಿಗಳು ಒಂದು ವಾರದಲ್ಲಿಕಡಲೆ ಬೆಳೆಗೆ ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರದ ಮುಖಾಂತರ ಖರೀದಿಸಿ ರೈತರಿಗೆ ನಾಯ್ಯ ಒದಗಿಸಲಾಗುತ್ತದೆ ಎಂದು
ಭರವಸೆ ನೀಡಿದ್ದಾರೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಈ ಕುರಿತು ಪತ್ರಿಕಾ ಹೇಳಿಕೆ ಮೂಲಕ ಪ್ರತಾಪ್ ಗೌಡ ಪಾಟೀಲ್ ಮಾಜಿ ಶಾಸಕರು ಮಸ್ಕಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
Be the first to comment