ಒಂದು ದಿನದ ತರಬೇತಿ ಹಾಗೂ ವಿಶೇಷ ಗ್ರಾಮ ಸಭೆ ಯಶಸ್ವಿ 

ಮಸ್ಕಿ, ಫೆಬ್ರುವರಿ 09 : ತಾಲೂಕಿನ ಮೆದಿಕಿನಾಳ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಒಂದು ದಿನದ ತರಬೇತಿ ಹಾಗೂ ವಿಶೇಷ ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು.

 

ಮೆದಿಕಿನಾಳ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಒಂದು ದಿನದ ತರಬೇತಿ ಹಾಗೂ ವಿಶೇಷ ಗ್ರಾಮ ಸಭೆಯನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಅನಿಮೀಯ ಮುಕ್ತತೆ, ಮತ್ತು ಮುಟ್ಟಿನ ನೈರ್ಮಲ್ಯತೆ, ಗ್ರಾಮ ಪಂಚಾಯತಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಆರೋಗ್ಯ ಅಮೃತ ಅಭಿಯಾನ ಕುರಿತು ತಾಲೂಕ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಚರ್ಚಿಸಲಾಯಿತು.

 

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಉಪಾಧ್ಯಕ್ಷರು, ಪವನ ಕುಮಾರ್ ಇಓ,ಶಿವಾನಂದ ರೆಡ್ದಿ ಎಡಿ, ತಿಮ್ಮಣ್ಣ ಭೋವಿ ಪಿಡಿಓ, ಗ್ರಾ.ಪಂ ಸರ್ವ ಸದಸ್ಯರು, SDMC ಅಧ್ಯಕ್ಷರು ಗಳು, ಶಿಕ್ಷಣ ಕಾರ್ಯಪಡೆ, ಶಾಲೆಯ ಮುಖ್ಯೋಪಾಧ್ಯಾಯರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, SHG ಗುಂಪಿನ ಮಹಿಳಾ ಪದಾಧಿಕಾರಿಗಳು,GPLF ಪದಾಧಿಕಾರಿಗಳು ಸಂಪನ್ಮೂಲ ವ್ಯಕ್ತಿಗಳಾದ ಲಲಿತಾ ಅಂಗನವಾಡಿ ಮೇಲ್ವಿಚಾರಕರು, ಬಸವರಾಜ್ ಹಿರಿಯ HIO ಮೆದಿಕಿನಾಳ, ಬಸವರಾಜ್ CHO, ಸುನೀತಾ PHCO, ಮೀನಾಕ್ಷಿ CHO,ಕವಿತಾ KHPT ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*