ಎರಡನೇ ಶ್ರೀಶೈಲ ಎಂದೇ ಖ್ಯಾತಿ ಪಡೆದ ಮಲ್ಲಿಕಾರ್ಜುನ ರಥೋತ್ಸವ ಇಂದು ಅದ್ಧೂರಿಯಾಗಿ ಜರುಗಿತು

ಮಸ್ಕಿ, ಫೆಬ್ರವರಿ 05 : ಇಂದು ಪಟ್ಟಣದ ಐತಿಹಾಸಿಕ ಎರಡನೇ ಶ್ರೀಶೈಲ ಎಂದೇ ಖ್ಯಾತಿ ಪಡೆದ

ಮಲ್ಲಿಕಾರ್ಜುನ ದೇವರ
ರಥೋತ್ಸವವು ಸಂಭ್ರಮ ಸಡಗರದಿಂದ ಹಾಗೂ ಶಾಂತಿಯುತವಾಗಿ ಜರುಗಿತು.

ಗಚ್ಚಿನಮಠದ ವರ ರುದ್ರಮುನಿ ಸ್ವಾಮೀಜಿ ನೇತೃತ್ವದಲ್ಲಿ ಇಂದು ಬೆಳಿಗ್ಗೆ ರಥದ ಕಳಸಾರೋಹಣ ಹಾಗೂ ಸಂಜೆ 6 ಕ್ಕೆ ರಥೋತ್ಸವ ಜರುಗಿತು. ಮಸ್ಕಿ ಸೇರಿ ರಾಯಚೂರು ನೆರೆ ಜಿಲ್ಲೆಗಳ ಭಕ್ತರು ಸೇರಿ ಸುತ್ತ ಮುತ್ತಲಿನ ಸಾವಿರಾರು ಜನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು. 120 ವರ್ಷಗಳಷ್ಟು ಹಳೆಯದಾದ ರಥವನ್ನು ದೈವದಕಟ್ಟೆಯ ಪಾದಗಟ್ಟೆವರೆಗೆ ಎಳೆದು ಪುನಃ ದೇವಸ್ಥಾನಕ್ಕೆ ತರಲಾಯಿತು.

ಫೆಬ್ರವರಿ 6 ರಂದು ಪಲ್ಲಕ್ಕಿ ಸೇವೆ ಹಾಗೂ 7 ರಂದು ಕಡುಬಿನ ಕಾಳಗದ ಮೂಲಕ ರಥೋತ್ಸವದ ಕಾರ್ಯಕ್ರಮಗಳು ಪೂರ್ಣಗೊಳ್ಳಲಿವೆ. ರಥೋತ್ಸವವು ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಶಾಂತಿಯುತವಾಗಿ ನಡೆಯಿತು.

Be the first to comment

Leave a Reply

Your email address will not be published.


*