ಚಾಕುವೇಲುವೆಂಬ ಗ್ರಾಮವು ಸಮಸ್ಯೆಗಳ ಚದುರಂಗದಾಟದಲಿ!

ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಚೇಳೂರು ತಾಲೂಕಿನ ಚಾಕವೆಳು ಗ್ರಾಮದಲ್ಲಿ ಹತ್ತಾರು ವರ್ಷಗಳು ಗತಿಸಿದರೂ ರಸ್ತೆಗೆ ಡಾಂಬರೀಕರಣ ಮಾಡದೇ ಧೂಳನ್ನೆ ಉಸಿರಾಡುವಂತಾಗಿದೆ. ಈ ರಸ್ತೆಯಲ್ಲಿ ವಾಹನಗಳು ಸಂಚರಿಸುವಾಗ ದಟ್ಟವಾದ ಧೂಳೇಳುತ್ತದೆ. ಇದರಿಂದಾಗಿ ರಸ್ತೆ ಬದಿಯಲ್ಲಿರುವ ಅಂಗಡಿಮುಗ್ಗಟ್ಟು ಮತ್ತು ಜನವಸತಿ ಪ್ರದೇಶಗಳಿಗೆ ಧೂಳಿನೋಕುಳಿ ಎರಚಿದಂತಾಗುತ್ತಿದೆ. ಇಂತಹ ಅವಸ್ಥೆಗೆ ಅಲ್ಲಿನ ನಾಗರೀಕರು ನಿತ್ಯವೂ ಹೈರಾಣಾಗುತ್ತಿದ್ದು, ಹಲವು ರೋಗರುಜಿನಗಳ ಹರಡುವ ಭೀತಿಯಲ್ಲಿದ್ದಾರೆ.

ಅಷ್ಟೇ ಅಲ್ಲದೆ ನಿತ್ಯವೂ ಶಾಲಾ,ಕಾಲೇಜುಗಳಿಗೆ ಓಡಾಡುವ ವಿದ್ಯಾರ್ಥಿಗಳು ಹಾಗೂ ವಾರದ ಸಂತೆಗೆ ಬರುವ ಗ್ರಾಮೀಣ ಜನತೆ ನಮ್ಮ ಕಡೆಯ ಬಸ್ ಎಷ್ಟೊತ್ತಿಗೆ ಬರುತ್ತೆ, ಎಷ್ಟೊತ್ತಿಗೆ ಇಲ್ಲಿಂದ ಹೊರಡುತ್ತೇವೊ? ಎಂಬ ಅಸಮಾಧಾನದಲ್ಲೆ ಬಸ್ಸಿಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇನ್ನು ಈ ಗ್ರಾಮದಲ್ಲಿ ಗ್ರಂಥಾಲಯ ಕೇಂದ್ರವು ಹೆಸರಿಗಷ್ಟೇ ಇದೆ. ನಡು ರಸ್ತೆಯಲ್ಲಿಯೇ ಚರಂಡಿಯ ಕೊಳಚೆ ನೀರು ಹರಿಯುತ್ತಿದ್ದರೂ ಸ್ಥಳೀಯ ಗ್ರಾಮ ಪಂಚಾಯತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ.

ಚುನಾವಣೆ ಹತ್ತಿರ ಬರುತ್ತಿದ್ದಂತೆ ಕ್ಷೇತ್ರದ ರಾಜಕಾರಣಿಗಳು ಸ್ಥಳೀಯ ಗಲ್ಲಿ ನಾಯಕರಿಗೆ ಜಾತಿ ರಾಜಕೀಯ ಹಾಗೂ ಮತದಾರರಿಗೆ ಎಣ್ಣೆ, ಬಾಡೂಟ ಆಸೆ ಆಮಿಷಗಳು ಒಡ್ಡಿ ಐನೂರು,ಸಾವಿರದ ಆಸೆ ತೋರಿಸಿ ಮತ ಪಡೆಯುತ್ತಾರೆ. ಆದರೆ ಮತ ಚಲಾಯಿಸಿದವರು ಸಮಸ್ಯೆಗಳ ಸುಳಿಯಲ್ಲೆ ಕೊರಗುವ ಪರಿಸ್ಥಿತಿ ಎದುರಿಸಬೇಕಿದೆ ಎಂದು ಸ್ಥಳೀಯ ಜಪ್ರತಿನಿಧಿಗಳ ವಿರುದ್ಧ ಪ್ರಜ್ಞಾವಂತ ಯುವಕರು ಆಕ್ರೋಷ ವ್ಯಕ್ತಪಡಿಸಿದರು. ಇನ್ನು ಕ್ಷೇತ್ರದ ವಿರೋಧ ಪಕ್ಷದ ನಾಯಕರು ಮಾತ್ರ ತಮಗೂ ಕ್ಷೇತ್ರಕ್ಕೆ ಸಂಬಂಧವಿಲ್ಲವೆಂಬಂತೆ ತೆಪ್ಪಿಗಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪಕ್ಕಕ್ಕಿಟ್ಟಂತಿದೆ‌.

 

Be the first to comment

Leave a Reply

Your email address will not be published.


*