ಪೊಲೀಸರಿಗೆ ಬೃಹತ್ ಆರೋಗ್ಯ ಶಿಬಿರ: ಪೊಲೀಸರು ಸಮಾಜದ ಆರೋಗ್ಯದ ಕನ್ನಡಿ – ಜಿಲ್ಲಾಧಿಕಾರಿ ಕೆ.ಎ. ದಯಾನಂದ್

ಬೆಂಗಳೂರು; ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಮತ್ತು ರಾಜ್ಯ ಶಾಖೆ ಸಹಯೋಗದಲ್ಲಿ ಪೊಲೀಸರಿಗೆ ಬೃಹತ್ ಆರೋಗ್ಯ ಶಿಬಿರ ಆಯೋಜಿಸಲಾಗಿತ್ತು. ಕ್ಯಾನ್ಸರ್ ಮತ್ತಿತರ ರೋಗಗಳ ತಪಾಸಣೆ ನಡೆಸಲಾಯಿತು.

ಮೈಸೂರು ರಸ್ತೆಯ ಡಿಸಿಪಿ ಪೊಲೀಸ್ ಮುಖ್ಯ ಕಚೇರಿ ಆವರಣದಲ್ಲಿ 2300 ಕ್ಕೂ ಹೆಚ್ಚು ಪೊಲೀಸರ ಕುಟುಂಬ ಸದಸ್ಯರು ಆರೋಗ್ಯ ಶಿಬಿರದಲ್ಲಿ ಭಾಗಿಯಾಗಿದ್ದರು. ಮಧುಮೇಹ ಮತ್ತು ಇ.ಎನ್.ಟಿ. ತಪಾಸಣೆ, ನೇತ್ರ,ಹೃದ್ರೋಗ ತಪಾಸಣೆ, ಪುರುಷರ ಪೋಸ್ಟೇಟ್ ತಪಾಸಣೆ, ಸ್ತ್ರೀಯರ ಮ್ಯಾಮೊಗ್ರಾಫಿ ಪರೀಕ್ಷೆ, ಗರ್ಭಕೋಶಕಂಠ ಪರೀಕ್ಷೆ ನಡೆಸಲಾಯಿತು.

 

ಡಿಸಿಪಿ ಕುಮಾರಿ ಎಂ. ಸುಜಿತಾ ಆರೋಗ್ಯ ಶಿಬಿರ ಉದ್ಘಾಟಿಸಿದರು. ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಮಾತನಾಡಿ, ಸಮಾಜದ ಸ್ವಾಸ್ಥ್ಯ ಕಾಪಾಡುವ ಪೊಲೀಸರಿಗೆ ವಿವಿಧ ಆಸ್ಪತ್ರೆಗಳು ಸೇರಿ ಉಚಿತ ಆರೋಗ್ಯ ಶಿಬಿರ ಆಯೋಜಿಸಿರುವುದು ಉತ್ತಮ ಬೆಳವಣಿಗೆ. ಪೊಲೀಸರು ಸಮಾಜದ ಆರೋಗ್ಯದ ಕನ್ನಡಿಯಾಗಿದ್ದಾರೆ. ಪೊಲೀಸರು ಆರೋಗ್ಯ ಲೆಕ್ಕಿಸದೇ ಜನರ ರಕ್ಷಣೆಗಾಗಿ ಕೆಲಸ ಮಾಡುತ್ತಾರೆ. ಪೊಲೀಸರಿಗೆ ಸದೃಢವಾದ ದೇಹ ಇದ್ದರೆ ಸೂಕ್ತ ರೀತಿಯಲ್ಲಿ ಸಮಾಜದ ರಕ್ಷಣೆ ಮಾಡಬಲ್ಲರು ಎಂದರು.

ಕಿದ್ವಾಯಿ ವೈದ್ಯಕೀಯ ಸಂಸ್ಥೆಯ ವೈದ್ಯ ಲಾವಣ್ಯ ಅವರು ಕ್ಯಾನ್ಸರ್ ಜಾಗೃತಿ ಮತ್ತು ಅಪಾಯಗಳನ್ನು ತಪ್ಪಿಸಲು ಸೂಕ್ತ ತಪಾಸಣೆ ಜೊತೆಗೆ ಆರೋಗ್ಯದ ಬಗ್ಗೆ ಜಾಗರೂಕತೆ ವಹಿಸುವಂತೆ ಕರೆ ನೀಡಿದರು.

 

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬೆಂಗಳೂರುನಗರದ ಜಿಲ್ಲೆಯ ಸಭಾಪತಿ ಬಾಲಕೃಷ್ಣ ಶೆಟ್ಟ , ಉಪ ಸಭಾಪತಿ ಮಹಮ್ಮದ್ ತಸ್ಲೀಲ್ ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.

 

Be the first to comment

Leave a Reply

Your email address will not be published.


*