ಜೆ.ಜೆ.ಎA ಯೋಜನೆಯಡಿಯಲ್ಲಿ ಪ್ರತಿ ಮನೆ ಮನೆಗೆ ಶಾಶ್ವತ ಕುಡಿಯುವ ನೀರು ಪೂರೈಕೆಗೆ ೩೭ ಕೋಟಿ ರೂ. ಅನುದಾನ : ಶಾಸಕ ನರಸಿಂಹನಾಯಕ
ಹುಣಸಗಿ: ಪಟ್ಟಣ ಸೇರಿದಂತೆ ಕಕ್ಕೇರಾ ಮತ್ತು ಕೆಂಭಾವಿ ಪಟ್ಟಣದ ಜನತೆಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಸಲುವಾಗಿ ೩೭ ಕೋಟಿ ರೂಪಾಯಿಗಳ ಟೆಂಡರನ್ನು ಶೀಘ್ರದಲ್ಲಿಯೇ ಕರೆಯಲಾಗುವುದು ಎಂದು ಹೇಳಿದರು.
ಪಟ್ಟಣದ ಬಾಲಕೀಯರ ಪ್ರೌಢ ಶಾಲೆಯ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡ ೭೪ ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅದ್ಯಕ್ಷತೆಯನ್ನು ವಹಿಸಿ ಧ್ವಜಾವಂದನೆಯನ್ನು ಸ್ವೀಕರಿಸಿ ಮಾತನಾಡಿ ನಮ್ಮ ಭಾರತ ದೇಶಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಮಾಜದಲ್ಲಿನ ಜಾತಿಯತೆಯನ್ನು ಹೋಗಲಾಡಿಸುವುದರೊಂದಿಗೆ ಭಾರತಕ್ಕೆ ಒಳ್ಳೆಯ ಸಂವಿಧಾನವನ್ನು ರಚಿಸಿಕೊಟ್ಟಿದ್ದಾರೆ ಅವರ ಈ ಸಂವಿಧಾನದಲ್ಲಿನ ಮೂಲಭೂತ ಹಕ್ಕುಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಇದಲ್ಲದೇ ಇಂದಿನ ಯುವ ಪೀಳಿಗೆಯ ಮಕ್ಕಳಿಗೆ ಸಂವಿಧಾನದ ಅರಿವುದು ಮೂಡಿಸುವುದು ಪ್ರತಿಯೊಬ್ಬರ ಜವಾಬ್ಧಾರಿಯಾಗಿದೆ ಎಂದರು.
ಇದಲ್ಲದೇ ಹುಣಸಗಿ, ಕಕ್ಕೇರಾ, ಮತ್ತು ಕೆಂಭಾವಿ ಪಟ್ಟಣದ ಜನತೆಗೆ ಶಾಶ್ವತ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ನಮ್ಮ ದೇಶದ ನೆಚ್ಚಿನ ಮಾನ್ಯ ಪ್ರಧಾನ ಮಂತ್ರಿಗಳು ಮೆಚ್ಚುಗೆಂiÀiನ್ನು ವ್ಯಕ್ತಪಡಿಸಿ ಜೆ.ಜೆ.ಎಂ ಯೋಜನೆಯಡಿಯಲ್ಲಿ ರೂ.೩೭ ಕೋಟಿ ವೆಚ್ಚದ ಕಾಮಗಾರಿಗೆ ಶೀಘ್ರದಲ್ಲಿಯೇ ಟೆಂಡರ್ ಕರೆದು ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲಾಗುವುದು ಮತ್ತು ಪ್ರತಿ ಮನೆಮನೆಗೆ ಶುದ್ಧ ಕುಡಿಯುವ ನೀರು ದೊರೆಯುವಂತೆ ಮಾಡಲಾಗುವುದು ಎಂದು ಹೇಳಿದರು.
ತಹಸೀಲ್ದಾರ ಜಗದೀಶ ಚೌರ ೭೪ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿ ನಮ್ಮ ದೇಶವು ಸುಭದ್ರತೆ ಕಾಣಲು ಸಂವಿಧಾನದ ಅವಶ್ಯಕತೆ ತುಂಬಾ ಇತ್ತು ಆಗ ಡಾ.ಬಿ.ಆರ್.ಅಂಬೇಡ್ಕರ್ ಅವರು ಕರಡು ಸಮಿತಿಯನ್ನು ರಚಿಸುವ ಮೂಲಕ ಸಂವಿಧನದ ಕರಡುನ್ನು ಸಿದ್ಧಪಡಿಸಿ ಜ.೨೬- ೧೯೫೦ ರಂದು ನಮ್ಮ ಭಾರತಕ್ಕೆ ಸಂವಿಧನವನ್ನು ಜಾರಿಗೊಳಿಸಿದರು. ಈ ಒಂದು ಸಂವಿಧಾನದನಲ್ಲಿನ ಪ್ರತಿಯೊಂದು ಹಕ್ಕುಗಳ ಬಗ್ಗೆ ನಾವೆಲ್ಲರೂ ತಿಳಿದುಕೊಂಡು ಸಮಾಜದಲ್ಲಿ ಹೇಗೆ ಬದುಕಬೇಕು ಮತ್ತು ಅದರಲ್ಲಿನ ಅಂಶಗಳು ಯಾವ ಯಾವ ಕಾರ್ಯಕ್ರಮಗಳಿಗೆ ಉಪಯೋಗ ಇದ್ದಾವೆ ಎಂಬುದರ ಬಗ್ಗೆ ತಿಳಿದುಕೊಂಡು ಭಾರತ ರತ್ನ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ನಡೆದು ಬಂದ ಹಾದಿಯನ್ನು ನಾವೆಲ್ಲರೂ ತಿಳಿದುಕೊಂಡು ಸಂವಿಧಾನದ ಆಶಯದಂತೆ ನಡೆದುಕೊಂಡು ಹೋಗಬೇಕೆಂದರು.
ಕರ್ನಾಟಕ ಕಾರ್ಯನಿತರ ಪತ್ರಕರ್ತರ ಸಂಘದ ರಾಜ್ಯ ಸಮಿತಿಯ ಸದಸ್ಯ ಹಾಗೂ ತಾಲೂಕಿನ ಹಿರಿಯ ಪತ್ರಕರ್ತರಾದ ರಾಘವೇಂದ್ರ ಜಹಾಗೀರದಾರ ಕಾಮನಟಗಿ ಅವರು ವಿಶೇಷ ಉಪನ್ಯಾಸ ನೀಡುವ ಮೂಲಕ ಯಾರೂ ಸಂವಿಧಾನವ ವಿರುದ್ಧವಾಗಿ ನಡೆದುಕೊಳ್ಳದೇ ಸಂವಿಧಾನಕ್ಕೆ ಗೌರವ ಕೊಡುವುದರೊಂದಿಗೆ ಇಂದಿನ ಮಕ್ಕಳಲ್ಲಿ ಸಂವಿಧಾನ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕೆಂದು ಹೇಳಿದರು.
ಬಾಕ್ಸ್: ಸಾಧಕರಿಗೆ ಸನ್ಮಾನ: ನಂತರ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸೈನಿಕ ವಿಭಾಗ, ಪತ್ರಿಕಾ ರಂಗ, ಶಿಕ್ಷಣ ಕ್ಷೇತ್ರ, ಸಂಗೀತ ಕ್ಷೇತ್ರ, ಕಂದಾಯ ಕ್ಷೇತ್ರ, ಗ್ರಾಮ ಓನ್ ಕೇಂದ್ರದ ಆಪರೇಟರ್‌ಗಳಿಗೆ, ಮಹಿಳಾ ಸಾಧಕರಿಗೆ, ರಾಜ್ಯಮಟ್ಟದ ಕಬಡ್ಡಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿನ ಸಾಧಕರಿಗೆ ತಾಲೂಕು ಆಡಳಿತ ವತಿಯಿಂದ ಸನ್ಮಾನಿಸಿ ಪ್ರಶಸ್ತಿ ಪತ್ರವನ್ನು ಪ್ರಧಾನ ಮಾಡಲಾಯಿತು.
ಬಾಕ್ಸ್: ಶಾಲಾ ಮಕ್ಕಳು ಹಾಗೂ ವಿವಿಧ ಸರಕಾರಿ ಕಛೇರಿಯಿಂದ ಅಣಕು ಚಿತ್ರ ಪ್ರದರ್ಶನ: ವಿವಿಧ ಶಾಲೆಯ ವತಿಯಿಂದ ಸ್ಥಭ್ಧ ಚಿತ್ರಗಳ ಭಿತ್ತಿ ಚಿತ್ರಗಳು, ಹಾಗೂ ರೈತ ಸಂಪರ್ಕ ಕೇಂದ್ರದ ಯೋಜನೆಯ ಉಪಕರಣಗಳ ಸ್ಥಭ್ದ ಚಿತ್ರ, ಹಾಗೂ ಇತರೆ ಇಲಾಖೆಗಳಲ್ಲಿನ ಸೌಲರ್ಭಯಗಳ ಕುರಿತು ಮಾಹಿತಿ ನೀಡುವ ಅಣಕು ಚಿತ್ರಗಳ ಪ್ರದರ್ಶನವನ್ನು ತಾಲೂಕು ಆಡಳಿತ ಏರ್ಪಡಿಸಿದ್ದು ಸಾರ್ವಜನಿಕರು ಸೇರಿದಂತೆ ಶಾಸಕ ರಾಜುಗೌಡ ಅವರು ಕೂಡಾ ವೀಕ್ಷಿಸಿದರು.
ಇದೇ ವೇಳೆ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಯ್ಯ ಹಿರೇಮಠ, ಸಿಪಿ.ಐ ಚಿಕ್ಕಣ್ಣನವರ, ಕಾಡಾ ನಿರ್ದೇಶಕ ರವಿ ಖಾನಾಪೂರ ಸೇರಿದಂತೆ ಪಟ್ಟಣದ ಗಣ್ಯವ್ಯಕ್ತಿಗಳಾದ ವಿರೇಶ ಚಿಂಚೋಳಿ, ಬಸವರಾಜ ಸ್ಥಾವರಮಠ, ಸಂಗಣ್ಣ ವೈಲಿ, ಎಮ್.ಎಸ್. ಚಂದಾ, ಹಮಿದ ಡೆಕ್ಕನ್, ಅನಿಲ ಬಳಿ, ಸೇರಿದಂತೆ ಇತರೆ ಸರಕಾರಿ ಕಛೇರಿ ಸಿಬ್ಬಂಧಿ ಮತ್ತು ಶಾಲಾ ಕಾಲೇಜಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ದೈಹಿಕ ಶಿಕ್ಷಕ ನಾಗನಗೌಡ ಪಾಟೀಲ್ ಸ್ವಾಗತಿಸಿದರು. ಅಕ್ಕಮಹಾದೇವಿ ದೇಶಮುಖ ಹಾಗೂ ಮಲ್ಲಿಕಾರ್ಜುನ ಗುತ್ತೇದಾರ ನಿರೂಪಿಸಿದರು. ವೆಂಕಟೇಶ ವಂದಿಸಿದರು.
* ತಾಲೂಕು ಕ.ಸಾ.ಪ ಹಾಗೂ ಪಟ್ಟಣ ಸಹಕಾರಿ ಬ್ಯಾಂಕ್ ಸೇರಿದಂತೆ ವಿವಿಧೆಡೆ ಧ್ವಜಾರೋಹಣ:
ಪಟ್ಟಣದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಛೇರಿಯಲ್ಲಿ ಪರಿಷತ್ತಿನ ಅಧ್ಯಕ್ಷ ವೆಂಕಟಗಿರಿ ದೇಶಪಾಂಡೆ ಅವರು ಧ್ವಜಾರೋಹಣ ನೆರವೆರಿಸಿದರು. ಹಾಗೂ ಹುಣಸಗಿ ಪಟ್ಟಣ ಸಹಕಾರಿ ಬ್ಯಾಂಕ್ ವತಿಯಿಂದ ೭೪ ನೇ ಧ್ವಜಾರೋಹಣವನ್ನು ಸಂಘದ ಅಧ್ಯಕ್ಷ ಬಸವರಾಜ ಮೇಲಿನಮನಿ ನೆರವೆರಿಸಿದರು.
Be the first to comment