ಕಲಬುರಗಿ ವಿಭಾಗ ವರದಿ :- ST ಸಮುದಾಯಗಳು ಮೊದಲು backword tribe(BT) ಎಂದಿತ್ತು. BT ಗೆ 5% ಮೀಸಲಾತಿ ಇತ್ತು. ಅದು ST ಗೆ ಸೇರಿಕೊಂಡ ಮೇಲೆ ಆ ಪ್ರಮಾಣ 3% ಆಗಿ ಕಡಿಮೆಯಾಯಿತು. ಅದನ್ನು ಈಗ 7.5 ಗೆ ಏರಿಸಬೇಕೆಂದು ಒತ್ತಾಯ ಇದೆ. ಅದಕ್ಕೆ ಯಾವ ರೀತಿ ಮಾಡಬಹುದು ಎಂದು ಸರ್ಕಾರ 50% ಮೇಲೆ ಮೀಸಲಾತಿ ಪ್ರಮಾಣ ಮಾಡಿದಂಥ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಅದನ್ನು ತಳ್ಳಿಹಾಕಿತ್ತು.ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಸಮಿತಿ ವರದಿ ಬಂದ ಮೇಲೆ SC ಮತ್ತು ST ತಮ್ಮ ಜನಸಂಖ್ಯೆಗೆ ಅನುಗುಣವಾಗಿ ಅವರ ಮೀಸಲಾತಿ ಪ್ರಮಾಣ ಹೆಚ್ಚಾಗಬೇಕು ಅನ್ನೋದು ಒಂದು ಕಡೆ, OBC-2A ದಲ್ಲಿರುವರು STಗೆ ಬರಬೇಕು, OBC-3B ಯಲ್ಲಿರುವವರು 2Aಗೆ ಬರಬೇಕು, ಮತ್ತು ಯಾವುದು ಇಲ್ಲದವರು BC ಗೆ ಮತ್ತೆ ಬರಬೇಕು ಎಂದು ಸರ್ಕಾರದ ಮುಂದಿಟ್ಟವು. ಆಗ ಸರ್ಕಾರ ಒಂದೇ ಮನೆಯಲ್ಲಿ ಚರ್ಚೆ ಮಾಡಿದ ಮೇಲೆ ಸುಪ್ರೀಂಕೋರ್ಟ್ನ ಒಂದು ಆದೇಶ ಬಂತು. ಆಗ ಎಲ್ಲಾ ರಾಜ್ಯ ಸರ್ಕಾರ SC/ST,OBC ಜನಸಂಖ್ಯೆ ಏರಿಕೆ ಕಂಡಿದೆ, aspiration ಕೂಡ ಹೆಚ್ಚಾಗಿದೆ. ಹಾಗಾಗಿ ಮೀಸಲಾತಿ ಆ 50% ceiling ತೆಗೆದು ಹೆಚ್ಚಿಗೆ ಮಾಡಬೇಕು ಎಂದು ನ್ಯಾಯಾಲಯಕ್ಕೆ ಅಭಿಪ್ರಾಯ ನೀಡಿತ್ತು.
ಆದರೆ ನ್ಯಾಯಾಲಯ ಇದನ್ನು ಒಪ್ಪಲಿಲ್ಲ ಇಂದ್ರ ಸಹನಾ ಕೇಸಿನ ತೀರ್ಪು ಎತ್ತಿ ಹಿಡಿದು, ಇದರನ್ವಯ ಆಗಬೇಕು ಎಂದು ಹೇಳಿತು. ನ್ಯಾಯಮೂರ್ತಿ ನಾಗಮೋಹನ ದಾಸ್ ವರದಿಯ ಶಿಫಾರಸ್ಸು ಸಂವಿಧಾನದ ಪ್ರಕಾರ ಹೇಗೆ ಮಾಡಬೇಕು ಮತ್ತು ಬೇರೆ ಬೇರೆ ಸಮುದಾಯಗಳ ಬೇಡಿಕೆ ಏನಿದೆ ಇವೆಲ್ಲವೂ ತುಲನಾತ್ಮಕವಾಗಿ ಅಭ್ಯಾಸ ಮಾಡಿ ವರದಿ ನೀಡಲು ತಿಳಿಸಿದೆ. ಆದರೆ ಇಂದ್ರ ಸಹನಾ ಕೇಸನಲ್ಲಿ ಒಂದು ಮಾರ್ಗ/ ಅವಕಾಶ ಇದ್ದು, we have to make out a special case ಇದರಡಿಯಲ್ಲಿ ಯಾವ ರೀತಿ ತರಬೇಕು ಎಂದು AG ಯವರು ನೀಡುವ ವರದಿ ಮೇಲೆ ನಿಂತಿದೆ. ಮೂಲ ಸಮಸ್ಯೆ ಬಂದಿರುವುದು article 14 &15 ರಲ್ಲಿ ಶೈಕ್ಷಣಿಕ, ಸಾಮಾಜಿಕವಾಗಿ ಹಿಂದುಳಿದವರಿಗೆ ನೀಡಬೇಕು ಎಂದು ಇದೆ. ಆದರೆ ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ 10% ಮೀಸಲಾತಿ ನೀಡಿರಿವುದು ಇಷ್ಟೆಲ್ಲಾ ಸಮಸ್ಯೆಗೆ ಕಾರಣ. ಏನೇ ಆದರೂ ಮೀಸಲಾತಿ 50% ರಿಂದ 60% ಕೊಟ್ಟರೆ ಮಾತ್ರ ಸಾಧ್ಯ.
Be the first to comment