ಜಿಲ್ಲಾ ಸುದ್ದಿಗಳು
ಬಾಗಲಕೋಟೆ:
ಇಲಕಲ್ಲ ತಾಲೂಕಿನ ಕೆಲೂರ ಗ್ರಾಮದ 155 ವರ್ಷಗಳ ಪುರಾತನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಬೆಳಗಾವಿ ವಿಭಾಗದ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಸಹನಿರ್ದೇಶಕ ವಾಲ್ಟರೆ ಡಿಮೆಲ್ಲೋ ಭೇಟಿ ನೀಡಿ ಕೊಠಡಿಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಅವರು, ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಬೇಕಾದರೆ ಸರ್ಕಾರದ ಯೋಜನೆಗಳ ಜತೆಗೆ ಗ್ರಾಮಸ್ಥರ ಸಹಕಾರ ಬಹಳ ಮುಖ್ಯ. 155 ವರ್ಷಗಳ ಪುರಾತನ ಇತಿಹಾಸ ಹೊಂದಿರುವ ಕೆಲೂರ ಗ್ರಾಮದ ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸಲು ಎಲ್ಲರು ಪಣತೊಡಬೇಕು. ಹೊಸ ಕಟ್ಟಡಗಳಲ್ಲಿ ಮಕ್ಕಳಿಗೆ ಜ್ಞಾನಾರ್ಜನೆ ನಡೆಯುವಂತಾಗಬೇಕು. ಪುರಾತನ ಕಟ್ಟಡ ಮಾದರಿಯಾಗಿ ಉಳಿಯಬೇಕು ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಸಿವಿಲ್ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಸ್ಥಳದಲ್ಲಿ ಗ್ರಾಪಂ ಅಧ್ಯಕ್ಷ ಮಹಾಲಿಂಗೇಶ ನಾಡಗೌಡ, ಹುನಗುಂದ ತಾಲೂಕು ಶಿಕ್ಷಣ ಇಲಾಖೆಯ ಸಂಯೋಜಕ ಎಸ್.ವಿ.ಪಾಟೀಲ, ಬಿಆರ್ ಪಿ ಆರ್.ಎಂ. ಬಾಗವಾನ, ಪಿಕೆಪಿಎಸ್ ಸದಸ್ಯೆ ವಜೀರಪ್ಪ ಪೂಜಾರ, ಇಸಿಒ ಎಸ್.ಬಿ. ಪಾಟೀಲ, ಸಿ.ಆರ್.ಪಿ ಹಣಗಿ, ಮಹಾಂತೇಶ ತಿಪ್ಪಣ್ಣವರ, ಮುಖ್ಯಗುರುಮಾತೆ ಬಿ.ಆರ್.ಲಾಳಿ, ಎಸ್.ಆಯ್. ಸಣಕಲ್ ಇದ್ದರು.
Be the first to comment