ಕಾಲ ಕಮಲ ಒ”ಭಾರತವು ಡಿಜಿಟಲ್ ಗೇಮಿಂಗ್ನಲ್ಲಿ ಸಾಕಷ್ಟು ವಿಷಯ ಮತ್ತು ಸಾಮರ್ಥ್ಯವನ್ನು ಹೊಂದಿದೆ.”
– ಪ್ರಧಾನಿ ನರೇಂದ್ರ ಮೋದಿ ರವರಿಂದ
ಪರಿಚಯ
ಆಜಾದಿ ಕಾ ಅಮೃತ ಮಹೋತ್ಸವ ಆಚರಣೆಗಳು ಭಾರತದ ಸ್ವಾತಂತ್ರ್ಯ ಹೋರಾಟದ ಕಥೆಯನ್ನು ಆಳವಾಗಿ ಅಧ್ಯಯನ ಮಾಡಲು ಮತ್ತು ಭಾರತದ ಸ್ವಾತಂತ್ರ್ಯಹೋರಾಟದಲ್ಲಿ ಅಪಾರ ಕೊಡುಗೆ ನೀಡಿದ ಅಸಾಧಾರಣ ವೀರರ ಬಗ್ಗೆ ತಿಳಿದುಕೊಳ್ಳಲು ಅವಕಾಶವನ್ನು ಒದಗಿಸುತ್ತವೆ.
ಭಾರತದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸ್ವಾತಂತ್ರ್ಯಪ ಅ, ಚಳವಳಿಯ ಬಗ್ಗೆ ವಿಶಿಷ್ಟ ರೀತಿಯಲ್ಲಿ ನಾಗರಿಕರಿಗೆ ಅರಿವು ಹೆಚ್ಚಿಸಲು, ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಝಿಂಗಾ ಇಂಡಿಯಾ ಸಹಯೋಗದಲ್ಲಿ ಅಭಿವೃದ್ಧಿಪಡಿಸಿದ ಆನ್ಲೈನ್ ಶೈಕ್ಷಣಿಕ ಮೊಬೈಲ್ ಆಟಗಳ ಸರಣಿಯಾದ ‘ಆಜಾದಿ ಕ್ವೆಸ್ಟ್’ ಗೆ ಆಗಸ್ಟ್ 24, 2022 ರಂದು ಚಾಲನೆ ನೀಡಿದರು.
ಭಾರತದ ಸ್ವಾತಂತ್ರ್ಯ ಹೋರಾಟದ ಮೈಲಿಗಲ್ಲುಗಳು ಮತ್ತು ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಸಾಹಸವನ್ನು ಪ್ರದರ್ಶಿಸುವ ಆಟಗಳು ಮತ್ತು ಆಟಿಕೆಗಳನ್ನು ಅಭಿವೃದ್ಧಿಪಡಿಸಲು ಗೇಮಿಂಗ್ ಉದ್ಯಮಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಕರೆಯಿಂದ ಈ ವಿಶಿಷ್ಟ ರೀತಿಯ ಉಪಕ್ರಮವು ಸ್ಫೂರ್ತಿ ಪಡೆದಿದೆ. ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಭಾರತದ ಸ್ವಾತಂತ್ರ್ಯ ಹೋರಾಟದ ಕುರಿತು ಯುವಕರು ಮತ್ತು ಹಿರಿಯರನ್ನು ಸಮಾನವಾಗಿ ತೊಡಗಿಸುವುದು, ಮನರಂಜನೆ ಮತ್ತು ಶಿಕ್ಷಣ ನೀಡುವುದು ಇದರ ಉದ್ದೇಶವಾಗಿದೆ. ಈ ಆಟಗಳು ಆನ್ಲೈನ್ ಗೇಮರ್ಗಳ ಬೃಹತ್ ಮಾರುಕಟ್ಟೆಯನ್ನು ಬಳಸಿಕೊಳ್ಳುವ ಮತ್ತು ಆಟಗಳ ಮೂಲಕ ಅವರಿಗೆ ಶಿಕ್ಷಣ ನೀಡುವ ಪ್ರಯತ್ನವಾಗಿವೆ.
ಆಜಾದಿ ಕಾ ಅಮೃತ ಮಹೋತ್ಸವ
ಆಜಾದಿ ಕಾ ಅಮೃತ ಮಹೋತ್ಸವವು 75 ವರ್ಷಗಳ ಸ್ವಾತಂತ್ರ್ಯ ಮತ್ತು ದೇಶದ ಜನರು, ಸಂಸ್ಕೃತಿ ಮತ್ತು ಸಾಧನೆಗಳ ವೈಭವಯುತ ಇತಿಹಾಸವನ್ನು ಆಚರಿಸುವ ಮತ್ತು ಸ್ಮರಿಸುವ ಭಾರತ ಸರ್ಕಾರದ ಉಪಕ್ರಮವಾಗಿದೆ. ಆಜಾದಿ ಕಾ ಅಮೃತ ಮಹೋತ್ಸವದ ಅಧಿಕೃತ ಪ್ರಯಾಣವು ಮಾರ್ಚ್ 12, 2021 ರಂದು ಪ್ರಾರಂಭವಾಯಿತು, ಅಂದಿನಿಂದ ನಮ್ಮ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವಕ್ಕೆ 75 ವಾರಗಳ ಕೌಂಟ್ಡೌನ್ ಪ್ರಾರಂಭವಾಯಿತು ಮತ್ತು ಆಗಸ್ಟ್ 15, 2023 ರಂದು ಒಂದು ವರ್ಷದ ನಂತರ ಕೊನೆಗೊಳ್ಳುತ್ತದೆ.
ಭಾರತದ ಸ್ವಾತಂತ್ರ್ಯ ಹೋರಾಟವನ್ನು ಆಧರಿಸಿದ ಆನ್ಲೈನ್ ಶೈಕ್ಷಣಿಕ ಆಟಗಳ ಸರಣಿ ‘ಆಜಾದಿ ಕ್ವೆಸ್ಟ್’ ಗೆ ಚಾಲನೆ
• ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಅನುರಾಗ್ ಸಿಂಗ್ ಠಾಕೂರ್, ಭಾರತ ಸ್ವಾತಂತ್ರ್ಯ ಹೋರಾಟದ ಕಥೆಗಳನ್ನು ಹೊರತರುವ ಸರ್ಕಾರದ ಪ್ರಯತ್ನಗಳ ಸರಣಿಯಲ್ಲಿ ಇದು ಮತ್ತೊಂದು ಉಪಕ್ರಮವಾಗಿದೆ ಎಂದರು.
• ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಭಾರತದಲ್ಲಿ ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ (ಎವಿಜಿಸಿ) ವಲಯವನ್ನು ಅಭಿವೃದ್ಧಿಪಡಿಸಲು ಸ್ಥಿರವಾದ ಕ್ರಮಗಳನ್ನು ತೆಗೆದುಕೊಂಡಿದೆ. ಕಳೆದ ಕೆಲವು ವರ್ಷಗಳಲ್ಲಿ ಭಾರತವು ಗೇಮಿಂಗ್ ವಲಯದಲ್ಲಿ ಅಗ್ರ ಐದು ರಾಷ್ಟ್ರಗಳಲ್ಲೊಂದಾಗಿದೆ. ಗೇಮಿಂಗ್ ಕ್ಷೇತ್ರವು ಕೇವಲ 2021 ರಲ್ಲಿಯೇ ಶೇ. 28 ರಷ್ಟು ಬೆಳೆದಿದೆ. ಆನ್ಲೈನ್ ಗೇಮರ್ಗಳ ಸಂಖ್ಯೆ 2020 ರಿಂದ 2021 ರವರೆಗೆ ಶೇ.ಎಂಟರಷ್ಟು ಹೆಚ್ಚಾಗಿದೆ ಮತ್ತು 2023 ರ ವೇಳೆಗೆ, ಅಂತಹ ಗೇಮರ್ಗಳ ಸಂಖ್ಯೆ 45 ಕೋಟಿಗೆ ತಲುಪುವ ನಿರೀಕ್ಷೆಯಿದೆ.
• ಈ ಆ್ಯಪ್ಗಳು ಭಾರತದ ಎವಿಜಿಸಿ ಕ್ಷೇತ್ರದ ಸಾಮರ್ಥ್ಯಗಳನ್ನು ಹೆಚ್ಚಿಸುತ್ತವೆ ಮತ್ತು ದೇಶದ ಅದ್ಭುತ ಇತಿಹಾಸವನ್ನು ವಿಶ್ವದ ಮೂಲೆಮೂಲೆಗೂ ತಲುಪಿಸುತ್ತವೆ ಎಂದು ಸಚಿವರು ಹೇಳಿದರು.
‘ಆಜಾದಿ ಕ್ವೆಸ್ಟ್’ ಗೇಮ್ಸ್ನ ಮುಖ್ಯಾಂಶಗಳು
• ಈ ಅಪ್ಲಿಕೇಶನ್ಗಳಲ್ಲಿನ ಮಾಹಿತಿಯನ್ನು ಪ್ರಕಟಣಾ ವಿಭಾಗ ಮತ್ತು ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ (ಐ ಸಿ ಹೆಚ್ ಆರ್) ರೂಪಿಸಿದ್ದು, ಇದು ಭಾರತ ಸ್ವಾತಂತ್ರ್ಯ ಹೋರಾಟದ ಅಧಿಕೃತ ಮಾಹಿತಿಗೆ ಸುಲಭವಾಗಿ ಪ್ರವೇಶಿಸಬಹುದಾದ ಮಾಹಿತಿ ಕಣಜವಾಗಿದೆ.
• ಭಾರತದ ಸ್ವಾತಂತ್ರ್ಯದ ಪ್ರಯಾಣ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟಗಾರರ ಸಾಹಸದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಆಟಗಾರನಿಗೆ ವೇದಿಕೆಯನ್ನು ಕಲ್ಪಿಸುತ್ತದೆ, ಇದನ್ನು ಆಟದ ಮೋಜಿನೊಂದಿಗೆ ಹೆಣೆಯಲಾಗಿದೆ.
• ಆಜಾದಿ ಕ್ವೆಸ್ಟ್ ಗೇಮ್ಗಳು ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳನ್ನು ಬಳಸುವ ಭಾರತದ ಜನರಿಗೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಲಭ್ಯವಿವೆ ಮತ್ತು ಸೆಪ್ಟೆಂಬರ್ 2022 ರಿಂದ ವಿಶ್ವದಾದ್ಯಂತ ಲಭ್ಯವಿರುತ್ತವೆ.
ಎರಡು ಆಟಗಳು ಲಭ್ಯವಿವೆ:
ಆಜಾದಿ ಕ್ವೆಸ್ಟ್: ಮ್ಯಾಚ್ 3 ಪಜಲ್ – ಆಟಗಾರನಿಗೆ ಪ್ರೀತಿಯ ಪಾತ್ರಗಳ – ಅಜ್ಜಿ (ದಾದಿ), ರೇಖಾ ಮತ್ತು ಛೋಟು- ಮೂಲಕ ಮಾರ್ಗದರ್ಶನ ನೀಡಲಾಗುತ್ತದೆ. ಕುತೂಹಲಿಗಳಾದ ಮೊಮ್ಮಕ್ಕಳು ದಾದಿಯ ನೆನಪುಗಳನ್ನು ಕೇಳಲು ಅವಳ ಸುತ್ತ ನೆರೆಯುತ್ತಿದ್ದಂತೆ, ಭಾರತದ ಸ್ವಾತಂತ್ರ್ಯದ ವರ್ಣರಂಜಿತ ಪ್ರಯಾಣವು ಆಟಗಾರರಿಗೆ ತರೆದುಕೊಳ್ಳುತ್ತದೆ.
ಆಜಾದಿ ಕ್ವೆಸ್ಟ್: ಹೀರೋಸ್ ಆಫ್ ಭಾರತ್ – ಹೀರೋಸ್ ಆಫ್ ಭಾರತ್ ಭಾರತ ಸ್ವಾತಂತ್ರ್ಯದ ಬಗ್ಗೆ 750 ಪ್ರಶ್ನೆಗಳನ್ನು ಒಳಗೊಂಡಿದೆ. ಇದನ್ನು ಭಾರತದ ಸ್ವಾತಂತ್ರ್ಯ ಚಳುವಳಿಯ ವ್ಯಕ್ತಿತ್ವಗಳ ಬಗ್ಗೆ ಆಟಗಾರರ ಜ್ಞಾನವನ್ನು ಪರೀಕ್ಷಿಸಲು ರಸಪ್ರಶ್ನೆ ಆಟವವನ್ನಾಗಿ ವಿನ್ಯಾಸಗೊಳಿಸಲಾಗಿದೆ. ಆಟಗಾರರು 75 ‘ಆಜಾದಿ ವೀರ್’ ಕಾರ್ಡ್ಗಳನ್ನು ಸಂಗ್ರಹಿಸಬಹುದು, ಪ್ರತಿಯೊಂದೂ ಭಾರತದ ಸ್ವಾತಂತ್ರ್ಯ ಹೋರಾಟದ ಅಜ್ಞಾತ ನಾಯಕನ ದಂತಕಥೆಯನ್ನು ಬಿಚ್ಚಿಡುತ್ತದೆ. ವಿಶೇಷ ಬೆಳ್ಳಿ ಮತ್ತು ಚಿನ್ನದ ಆವೃತ್ತಿಗಳನ್ನು ಪ್ರತಿ ಹಂತವನ್ನು ದಾಟುವ ಮೂಲಕ ಅನ್ಲಾಕ್ ಮಾಡಬಹುದು.
• ಪ್ರತಿಯೊಬ್ಬ ಆಟಗಾರರು ತಮ್ಮ ಆಟದ ಪ್ರಗತಿ ಮತ್ತು 75 ಟ್ರಿವಿಯಾ ಕಾರ್ಡ್ಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಬಹುದು.
• ಆಟಗಾರರು ಲೀಡರ್ಬೋರ್ಡ್ಗಳಲ್ಲಿ ಸ್ಪರ್ಧಿಸಬಹುದು, ದೈನಂದಿನ ಬೋನಸ್ಗಳು ಮತ್ತು ಆಟದಲ್ಲಿ ಬಹುಮಾನಗಳನ್ನು ಗಳಿಸಬಹುದು.
• ಆಜಾದಿ ಕ್ವೆಸ್ಟ್ ಅನ್ನು ಸರಾಗವಾಗಿ ಆಡಲು ಮತ್ತು ಸರಿಯಾದ ಉತ್ತರಗಳನ್ನು ನೀಡಲು ಆಟಗಾರರು ‘ಸ್ನೇಹಿತರನ್ನು ಕೇಳಿ’ ವೈಶಿಷ್ಟ್ಯವನ್ನು ಬಳಸಿಕೊಳ್ಳಬಹುದು.
• ಆಟಗಳಲ್ಲಿ ಹೆಚ್ಚಿನ ತೊಡಗಿಸುವಿಕಾಗಿ, ಆಟಗಾರರು ತಮ್ಮ ಪ್ರಗತಿಯನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲು ಅವಕಾಶವಿದೆ. ಇದಲ್ಲದೆ, ಆಟಗಳು ಆಟಗಾರರಿಗೆ ತಮ್ಮ ವರ್ಚುವಲ್ ಪ್ರಯಾಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಅವರ ಸಾಧನೆಯನ್ನು ಗುರುತಿಸುವ ಪ್ರಮಾಣಪತ್ರವನ್ನು ನೀಡುತ್ತವೆ.
ಅಪ್ಲಿಕೇಶನ್ ಡೌನ್ಲೋಡ್ ಮಾಡುವ ಕ್ರಮಗಳು:
ಆಜಾದಿ ಕ್ವೆಸ್ಟ್
ಮೊಬೈಲ್ ಗೇಮ್ಗಳ ಸರಣಿಯ ಮೂಲಕ ಡಿಜಿಟಲ್ ಕಲಿಕೆಯ ಅನುಭವ
• ವಾರ್ತಾ ಮತ್ತು ಪ್ರಸಾರ ಸಚಿವಾಲಯವು Zynga ಇಂಡಿಯಾ ಸಹಯೋಗದೊಂದಿಗೆ ಆನ್ಲೈನ್ ಶೈಕ್ಷಣಿಕ ಮೊಬೈಲ್ ಆಟಗಳ ಸರಣಿಯನ್ನು ಅಭಿವೃದ್ಧಿಪಡಿಸಿದೆ
• ಜನರನ್ನು ತೊಡಗಿಸಿಕೊಳ್ಳುತ್ತದೆ, ಮನರಂಜನೆ ಮತ್ತು ಶಿಕ್ಷಣ ನೀಡುತ್ತದೆ
• ಭಾರತ ಸ್ವಾತಂತ್ರ್ಯ ಹೋರಾಟದ ಪ್ರಮುಖ ಮೈಲಿಗಲ್ಲುಗಳನ್ನು ಹೈಲೈಟ್ ಮಾಡುತ್ತದೆ
ಆಜಾದಿ ಕ್ವೆಸ್ಟ್
ಮೊಬೈಲ್ ಗೇಮ್ಗಳ ಸರಣಿಯ ಮೂಲಕ ಡಿಜಿಟಲ್ ಕಲಿಕೆಯ ಅನುಭವ
ಪ್ರಮುಖ ಲಕ್ಷಣಗಳು:
• ಸೆಪ್ಟೆಂಬರ್ 2022 ರಿಂದ ವಿಶ್ವದಾದ್ಯಂತ ಲಭ್ಯವಿದೆ
• Android ಮತ್ತು iOS ಸಾಧನಗಳಲ್ಲಿ ಲಭ್ಯವಿದೆ
• ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಲಭ್ಯವಿದೆ
• ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಆಟದ ಪ್ರಗತಿಯನ್ನು ಹಂಚಿಕೊಳ್ಳಬಹುದು
• ಅತ್ಯಾಕರ್ಷಕ ಬಹುಮಾನಗಳು ಮತ್ತು ಪ್ರಮಾಣಪತ್ರ
ಆಜಾದಿ ಕ್ವೆಸ್ಟ್
ಮೊಬೈಲ್ ಗೇಮ್ಗಳ ಸರಣಿಯ ಮೂಲಕ ಡಿಜಿಟಲ್ ಕಲಿಕೆಯ ಅನುಭವ
ಡೌನ್ಲೋಡ್ ಮಾಡುವುದು ಹೇಗೆ?
ಹಂತ 1
ನಿಮ್ಮ ಮೊಬೈಲ್ ಸಾಧನದಲ್ಲಿ Google Play/App Store ನಲ್ಲಿ `Azadi Quest’ ಅನ್ನು ಹುಡುಕಿ
ಆಜಾದಿ ಕ್ವೆಸ್ಟ್
ಮೊಬೈಲ್ ಗೇಮ್ಗಳ ಸರಣಿಯ ಮೂಲಕ ಡಿಜಿಟಲ್ ಕಲಿಕೆಯ ಅನುಭವ
ಡೌನ್ಲೋಡ್ ಮಾಡುವುದು ಹೇಗೆ?
ಹಂತ 2
ಎರಡು ಆಟಗಳು ಲಭ್ಯವಿವೆ
ಆಜಾದಿ ಕ್ವೆಸ್ಟ್: ಮ್ಯಾಚ್ 3 ಪಝಲ್
ಆಜಾದಿ ಕ್ವೆಸ್ಟ್: ಹೀರೋಸ್ ಆಫ್ ಭಾರತ್
ನೀವು ಆಡಲು ಬಯಸುವ ಆಟವನ್ನು ಡೌನ್ಲೋಡ್ ಮಾಡಿ
ಆಜಾದಿ ಕ್ವೆಸ್ಟ್
ಮೊಬೈಲ್ ಗೇಮ್ಗಳ ಸರಣಿಯ ಮೂಲಕ ಡಿಜಿಟಲ್ ಕಲಿಕೆಯ ಅನುಭವ
ಡೌನ್ಲೋಡ್ ಮಾಡುವುದು ಹೇಗೆ?
ಹಂತ 3
ಒಮ್ಮೆ ಇನ್ ಸ್ಟಾಲ್ ಮಾಡಿದ ನಂತರ, ಆದ್ಯತೆಯ ಭಾಷೆಯನ್ನು ಆಯ್ಕೆಮಾಡಿ ಮತ್ತು ಆಟ ಆಡಲು ಪ್ರಾರಂಭಿಸಿ
Video Link
• https://www.youtube.com/watch?v=HOoIe5wXqzc
Twitter Links
• https://twitter.com/PIB_India/status/1562669233825128450
• https://twitter.com/PIB_India/status/1562392234867118080
• https://twitter.com/PIB_India/status/1562416956459868160
• https://twitter.com/PIB_India/status/1562670147860516865
• https://twitter.com/PMOIndia/status/1407950717629861890?s=20&t=P04tvOe5WkNuT02_SsuzAg
References
• Press Release Union Minister Shri Anurag Thakur launches, ‘Azadi Quest’ a series of online educational
games based on India’s freedom struggle dated August 24, 2022.
• https://amritmahotsav.nic.in/
Be the first to comment