ಬೆಂಗಳೂರು ವರದಿ : ನನ್ನ ಗಂಡನ ಸಾವಿಗೆ ಪರೋಕ್ಷವಾಗಿ ಕಾರಣರಾಗಿ ಮತ್ತು ನಮ್ಮಿಂದ ಕೋಟಿಗಟ್ಟಲೆ ಹಣವನ್ನ ಪಡೆದು ವಕೀಲ ಸಿ ಗಜೇಂದ್ರ ಮೋಸ ಮಾಡಿದ್ದಾರೆ ಎಂದು ವೈದ್ಯೆ ಮಾಲತಿ ಆಪಾದಿಸಿದ್ದಾರೆ
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಇವರು, ಸುಮಾರು 6 ವರ್ಷಗಳ ಹಿಂದೆ ವಕೀಲ ಸಿ.ಗಜೇಂದ್ರ ನಮ್ಮ ಕುಟುಂಬಕ್ಕೆ ಪರಿಚಯವಾದರು ನನ್ನ ಪತ್ನಿ ಹೆಸರಾಂತ ಬಿಲ್ಡರ್, ಇವರ ಬಳಿ ಅನೇಕ ಸುಳ್ಳುಗಳನ್ನ ಹೇಳಿ ಕೋಟಿಗಟ್ಟಲೆ ಹಣ ಅಂದರೆ 6,50,00000 ರೂಗಳನ್ನು ತೆಗೆದುಕೊಂಡಿದ್ದಾರೆ ಎಂದು ದೂರಿದರು.
ಹಣವನ್ನು ಕೇಳಲು ಹೋದರೆ ನೀವು ಯಾರು ಬಳಿಯಾದರೂ ದೂರು ಕೊಡಿ ಏನಾದರೂ ಮಾಡಿಕೊಳ್ಳಿ ಎಂದು ಧಮ್ಕಿ ಹಾಕುತ್ತಿದ್ದಾರೆ. ಈ ವಿಷಯದ ಕುರಿತು ವಕೀಲರ ಸಂಘಕ್ಕೆ, ಪೊಲೀಸ್ ಕಮಿಷನರ್ ಕಚೇರಿಗೆ ಮತ್ತು ಮಹಿಳಾ ಆಯೋಗಕ್ಕೂ ದೂರು ಕೊಟ್ಟಿದ್ದೇವೆ ಆದರೆ ಇಲ್ಲಿವರೆಗೂ ಯಾವುದೇ ನ್ಯಾಯ ಸಿಕ್ಕಿಲ್ಲ ಎಂದು ತಮ್ಮ ಅಳಿಯನ ತೋಡಿಕೊಂಡರು.
ಅಷ್ಟೇ ಅಲ್ಲದೆ ನನ್ನ ಮೈದುನನ ಮಗಳಿಗೆ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಲಿಪಿಗಾರ ಕೆಲಸ ಕೊಡಿಸುವುದಾಗಿ ಸುಮಾರು ಆರು ಲಕ್ಷ ಹಣವನ್ನು ಪಡೆದು ಕೆಲಸ ಕೊಡಿಸದೆ ಮೋಸ ಮಾಡಿದ್ದಾರೆ ಎಂದರು
ಸರ್ಕಾರ ನನ್ನಂತಹ ಹೆಣ್ಣು ಮಕ್ಕಳಿಗೆ ನ್ಯಾಯ ಒದಗಿಸಿ, ಪದೇ ಪದೇ ಬೆದರಿಸುತ್ತಿರುವ ವಕೀಲರಿಂದ ನನಗೆ ರಕ್ಷಣೆ ಒದಗಿಸಿ ಕೊಡಬೇಕೆಂದು ಕೇಳಿಕೊಂಡರು
ಪತ್ರಿಕಾಗೋಷ್ಠಿಯಲ್ಲಿ ಡಾ. ಗಣೇಶ್, ರಂಗನಾಥ್, ಸುರೇಶ್ ಉಪಸಿತರಿದ್ದರು
Be the first to comment