ಜಿಲ್ಲಾ ಸುದ್ದಿಗಳು
ಬಾಗಲಕೋಟೆ:75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ 100 ಮೀಟರ್ ಭವ್ಯ ರಾಷ್ಟ್ರಧ್ವಜ ತಿರಂಗ ಯಾತ್ರೆ ಬಾಗಲಕೋಟೆ ನಗರದ ಪ್ರಮುಖ ಬೀದಿಗಳಲ್ಲಿ ದೇಶಭಕ್ತಿಯ ಘೋಷಣೆಗಳನ್ನು ಕೂಗುತ್ತಾ ತಿರಂಗ ಯಾತ್ರೆ ಮಾಡಲಾಯಿತು.
ಚರಂತಿಮಠ ಶಿವಾನುಭವ ಕಲ್ಯಾಣ ಮಂಟಪದಲ್ಲಿ ಸೇರಿ ತಿರಂಗಯಾತ್ರೆಗೆ ವಾಗ್ದೇವಿ ಕಾಲೇಜಿನ ಅಧ್ಯಕ್ಷರಾದ ಡಾ. ಶೇಖರ್ ಮಾನೆ ಹಾಗೂ ಲಕ್ಷ್ಮಣ ನಿರಾಣಿ ಅವರು ಚಾಲನೆ ನೀಡಿದರು.ವಾಗ್ದೇವಿ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅತಿ ಉತ್ಸುಕದಿಂದ 100 ಮೀಟರ್ ದ್ವಜವನ್ನು ಹಿಡಿದು ತಿರಂಗ ಯಾತ್ರೆಯಲ್ಲಿ ಭಾರತ್ ಮಾತಾ ಕಿ ಜೈ ವಂದೇ ಮಾತರಂ ಘೋಷಣೆಗಳನ್ನು ಕೂಗುತ್ತಾ ತಿರಂಗ ಯಾತ್ರೆಯಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಕಾಮದೇನು ಸಂಸ್ಥೆಯ ಅಧ್ಯಕ್ಷರು ರವಿ ಕುಮುಟಗಿ, ಕಾಮಧೇನು ಸಂಸ್ಥೆ ಉಪಾಧ್ಯಕ್ಷ ಅಶೋಕ್ ಮುತ್ತಿನಮಠ, ಕಾಮಧೇನು ಸಂಸ್ಥೆ ಕಾರ್ಯದರ್ಶಿ ವಿಜಯ ಸುಲಾಖೆ, ಕಾಮಧೇನು ಸಂಸ್ಥೆ ಖಜಾಂಚಿ ಶಿವು ಮೇಲ್ನಾಡ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಗಂಗಾಧರ್ ಮುರನಾಳ, ಕೃಷ್ಣ ರಾಜೂರ,ಅರುಣ್ ಲೋಕಪುರ್, ಗುರು ಅನಗವಾಡಿ, ಪ್ರಶಾಂತ್ ಸನಕನಾಳ, ವೀರೇಶ್ ಹಿರೇಮಠ, ವಿನಾಯಕ ಹಾಸಲಕರ,ರಾಜು ಗೌಳಿ,ಶಂಕರ ಗನೇಕಲ, ಮನೋಜ ಕರೋಡಿವಾಲ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಹಿತೈಷಿಗಳು ,ಕಾರ್ಯಕರ್ತರು ಉಪಸ್ಥಿತರಿದ್ದರು.
Be the first to comment