ಶಹಪೂರ ತಾಲೂಕಿನ ಸಗರ ಗ್ರಾಮದಲ್ಲಿ ಪರಿಸರ ಸುರಕ್ಷಾ ಜಾಗೃತಿ ಕಾರ್ಯಕ್ರಮ

ವರದಿ: ನ್ಯಾಮಣ್ಣ ಸಗರ ಶಹಾಪುರ

ಶಹಾಪೂರ ಜು;20 : ಸಗರನಾಡಿನ ಪರಿಸರ ಪ್ರೇಮಿ ಎಂದೇ ಪ್ರಖ್ಯಾತನಾದ , ಸಾಮಾಜಿಕ ಕಾರ್ಯಕರ್ತನಾತನಾದ ಮತ್ತು ಪರಿಸರ ಸುರಕ್ಷಾ ಟ್ರಸ್ಟ(ರಿ) ಸಗರದ ಅಧ್ಯಕ್ಷರಾದ ಕು.ಶಿವಬಸಪ್ಪ ನವರ ಹುಟ್ಟು ಹಬ್ಬದ ಪ್ರಯುಕ್ತ ಸಗರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ಯಾ ಶಾಲೆಯಲ್ಲಿ ” ಪರಿಸರ ಸುರಕ್ಷಾ ಜಾಗೃತಿ ಅಭಿಯಾನ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ 2021-22ನೇ ಸಾಲಿನ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಸರಕಾರಿ ಮಾದರಿಯ ಪ್ರಾಥಮಿಕ ಬಾಲಕರ ಶಾಲೆಯ ಶಿಕ್ಷಕಿಯಾದ ಶ್ರೀಮತಿ ರೂಪಾ ಎನ್.ಆರ್ ಶಿಕ್ಷರಿಗೆ ಟ್ರಸ್ಟ್ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ 2022-23ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿದರು.

ತನ್ನ ಹುಟ್ಟು ಹಬ್ಬದ ಸವಿನೆನಪಿಗಾಗಿ ಶಾಲೆಗೆ 30 ಸಸಿಗಳನ್ನು ಕಾಣಿಕೆಯಾಗಿ ನೀಡಿದರು 

ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರುಗಳಾದ ಶ್ರೀನಿವಾಸ ಸರ್ ಹಾಗೂ ಮುಖ್ಯ ಅತಿಥಿ ಗಳಾದ ಶ್ರೀ ಸಂಕಪ್ಪ ಸ.ಶಿ , ಶ್ರೀಮತಿ ರೂಪಾ ಸ.ಶಿ ಶ್ರೀ ಮಲ್ಲು ಕೊಬ್ರಿ ಹಾಗೂ ಶಾಲೆಯ ಸಿಬ್ಬಂದಿಗಳಾದ ಶ್ರೀ ವಿದ್ಯಾಸಾಗರ ಸ.ಶಿ , ಶ್ರೀ ಶ್ರಿನಿವಾಸ,  ಶ್ರೀ ಮತಿ ನೀಲಮ್ಮ , ಶ್ರೀ ಮತಿ  ಈರಮ್ಮ , ಶ್ರೀಮತಿ ಯಾಸ್ಮಿನ್ ಬಾನು ಅತಿಥಿ ಶಿಕ್ಷರಾದ ಕು.ನ್ಯಾಮಣ್ಣ , ಶ್ರೀಮತಿ ಭಾಗ್ಯಶ್ರಿ,ಶ್ರೀಮತಿಸುಮಂಗಲ,.ಕು.ನಾಗವೇಣಿ,ಕು.ಶಾಂತಾ ಅವರು ಉಪಸ್ಥಿತರಿದ್ದರು . ಕಾರ್ಯಕ್ರಮವನ್ನು ಕು.ನಾಗವೇಣಿ ನಿರೂಪಿಸಿದರು ಶ್ರೀಮತಿ ಈರಮ್ಮ ಸ.ಶಿ ವಂದಿಸಿದರು ಕಾರ್ಯಕ್ರಮದ ಉಸ್ತುವಾರಿಯನ್ನು ಕು.ನ್ಯಾಮಣ್ಣ ಅವರು ನಿರ್ವಹಿಸಿದರು

Be the first to comment

Leave a Reply

Your email address will not be published.


*