ಆಧಾರ್ ಗೆ-ವೋಟರ್ ಐಡಿ ಜೋಡಣೆ. ಮಹತ್ವದ ಘೋಷಣೆ ಮಾಡಿದ ಮೋದಿ ಸರ್ಕಾರ..

ವರದಿ: ಭಾಗಣ್ಣ ಎಸ್ ಎಚ್ ಉಪಸಂಪಾದಕರು


         ದೇಶದ ಸುದ್ದಿ


ವೋಟರ್ ಐಡಿಗೆ ಆಧಾರ ಜೋಡಣೆ ಮಾಡಲು ಹೊರಟಿರುವುದು ಪ್ರಜಾಪ್ರಭುತ್ವದಲ್ಲಿ ಕ್ರಾಂತಿ ಆಗಲಿದೆ   ಅಮರೇಶ ಕಾಮನಕೇರಿ

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಇದಿಗ ಮತ್ತೊಂದು ಮಹತ್ವದ ಘೋಷಣೆ ಮಾಡಿದೆ. ರಾಷ್ಟ್ರದ ಜನರ ವೋಟರ್ ಐಡಿ ಹಾಗೂ ಆಧಾರ್ ಜೋಡಿಸುವ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಪ್ಯಾನ್‌ಕಾರ್ಡ್‌, ರೇಷನ್‌ ಕಾರ್ಡ್‌, ಬ್ಯಾಂಕ್‌ ಖಾತೆಗಳ ನಂತರ ಇನ್ನು ಮುಂದೆ ಮತದಾರರ ಗುರುತಿನ ಚೀಟಿಗೂ ಆಧಾರ್‌ ಸಂಖ್ಯೆ ಜೋಡಣೆ ಸದ್ಯದಲ್ಲೇ ಕಡ್ಡಾಯವಾಗಲಿದೆ. ಈ ಸಂಬಂಧ ಚುನಾವಣಾ ಆಯೋಗ ಈ ಹಿಂದೆ ಇರಿಸಿದ್ದ ಬೇಡಿಕೆಗೆ ಕೇಂದ್ರ ಕಾನೂನು ಸಚಿವಾಲಯ ಗ್ರೀನ್‌ ಸಿಗ್ನಲ್‌ ನೀಡಿದೆ.


                      ಜಾಹಿರಾತು


ಆಧಾರ್‌ ದತ್ತಾಂಶ ಸಂಗ್ರಹಿಸುವ ಅಧಿಕಾರವನ್ನು ಚುನಾವಣಾ ಆಯೋಗಕ್ಕೆ ನೀಡಲು ಅಗತ್ಯವಿರುವ ಕಾನೂನು ತಿದ್ದುಪಡಿಗೆ ಕೇಂದ್ರ ಕಾನೂನು ಸಚಿವಾಲಯ ಮುಂದಾಗಿದ್ದು, ಈ ಸಂಬಂಧ ಕ್ಯಾಬಿನೆಟ್‌ ಟಿಪ್ಪಣಿಯನ್ನು ಸಿದ್ಧಪಡಿಸುತ್ತಿದೆ. ಬಳಿಕ ಪ್ರಸ್ತಾವಕ್ಕೆ ಸಚಿವ ಸಂಪುಟ ಸಭೆಯ ಅನುಮೋದನೆ ಪಡೆದು, ಜ.31ರಿಂದ ಆರಂಭವಾಗಲಿರುವ ಬಜೆಟ್‌ ಅಧಿವೇಶನದಲ್ಲಿವಿಧೇಯಕ ರೂಪದಲ್ಲಿಅದನ್ನು ಸಂಸತ್ತಿನಲ್ಲಿಮಂಡಿಸುವ ಉದ್ದೇಶವನ್ನು ಸರಕಾರ ಹೊಂದಿದೆ. ಆಧಾರ್‌ ದತ್ತಾಂಶ ಸೋರಿಕೆ, ಮಾಹಿತಿ ಕಳವು ಸೇರಿದಂತೆ ಹಲವು ಸುರಕ್ಷತಾ ಮಾನದಂಡಗಳನ್ನು ಅನುಸರಿಸಿ, ಆಧಾರ್‌-ವೋಟರ್‌ ಐಡಿ ಲಿಂಕ್‌ಗೆ ಕಾನೂನು ಸಚಿವಾಲಯ ಅನುವು ಮಾಡಿಕೊಡುವ ಸಾಧ್ಯತೆಯಿದೆ.

ಒಬ್ಬನೇ ಮತದಾರ ಎರಡೆರಡು ಕಡೆ ಹೆಸರು ನೋಂದಾಯಿಸುವುದು, ಎರಡೆರಡು ಕಡೆ ಮತ ಹಾಕುವುದು, ನಕಲಿ ಮತದಾನ ಮಾಡುವುದು ಅಥವಾ ಮತದಾನದ ವೇಳೆ ಇನ್ನಾವುದೇ ಅಕ್ರಮ ಎಸಗುವುದನ್ನು ತಡೆಯುವ ಉದ್ದೇಶದಿಂದ ಚುನಾವಣಾ ಆಯೋಗವು, ವೋಟರ್‌ ಐಡಿಗೆ ಆಧಾರ್‌ ಸಂಯೋಜಿಸುವ ಪ್ರಸ್ತಾಪವನ್ನು 2019ರ ಆಗಸ್ಟ್‌ನಲ್ಲೇ ಕೇಂದ್ರ ಕಾನೂನು ಸಚಿವಾಲಯದ ಮುಂದೆ ಇರಿಸಿತ್ತು. ಇದರ ಸಾಧಕ-ಬಾಧಕಗಳನ್ನು ಅಧ್ಯಯನ ನಡೆಸಿದ ಕಾನೂನು ಸಚಿವಾಲಯ, ಇದೀಗ ಒಪ್ಪಿಗೆ ಸೂಚಿಸಿದೆ. ಇದಕ್ಕಾಗಿ ಜನಪ್ರತಿನಿಧಿ ಕಾಯ್ದೆ-1950 ಹಾಗೂ ಆಧಾರ್‌ ಕಾಯ್ದೆ-2016ಕ್ಕೆ ತಿದ್ದುಪಡಿ ತರಬೇಕಾಗುತ್ತದೆ.


ನಿಮ್ಮ ಆರ್ಥಿಕ ಸಹಾಯ ದಿಂದ ಮಾತ್ರ ಮಾಧ್ಯಮವನ್ನು ಪಾರದರ್ಶಕವಾಗಿ  ಮುನ್ನಡೆಸಲು ಸಾಧ್ಯ

ಮಾಧ್ಯಮ ಮುನ್ನೆಡೆಯಲ್ಲು ನಿವು 100,500,1000,2500,5000,10000,50000,1 ಲಕ್ಷ.  ದೇಣಿಗೆ ಸಹಾಯ ನೀಡಬಹುದು
ಗೂಗಲ್ ಪೇ ಪೋನ ಪೇ ಮೂಲಕ ಕೂಡ ನೀಡಬಹುದು 9008329745
ಅಂಬಿಗ ನ್ಯೂಸ್ ಟಿವಿ ಗೆ ಸಹಾಯ ನೀಡಲು ಈ ಕೇಳಗಿನ ಕೋಡ ಬಳಸಿ ಆನ್ ಲೈನ್ ದೇಣಿಗೆ ನೀಡಬಹುದು

Amaresh kamanakeri
A/c 62053220183 IFC-SBIN0020354 ಪೋನ ನಂ 9008329745

Be the first to comment

Leave a Reply

Your email address will not be published.


*