ಲಾಲ್ ಕೊಲೆ ಪ್ರಕರಣ ಖಂಡಿಸಿವಿವಿಧ ಹಿಂದೂಪರ ಸಂಘಟನೆಗಳ ವತಿಯಿಂದ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ

ವರದಿ:-ರಾಮು ಬಿ ಚನ್ನುರು ಕಲಬುರ್ಗಿ

ಜೇವರ್ಗಿ: ತಾಲೂಕಿನ ಬಸವೇಶ್ವರ ವೃತ್ತದಲ್ಲಿ ರಾಜಸ್ಥಾನ್ದ ಉದಯಪುರ್ ನಗರದಲ್ಲಿ ನಡೆದ ಲಾಲ್ ಕೊಲೆ ಪ್ರಕರಣ ಖಂಡಿಸಿ ಇಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಾಗೂ ವಿವಿಧ ಹಿಂದೂಪರ ಸಂಘಟನೆಗಳ ವತಿಯಿಂದ ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕಾಡ ನಿರ್ದೇಶಕರಾದ ಬಾಗೇಶ ಹೋತಿನ ಮಾಡು ಮಾತನಾಡಿ ಹಿಂದು ವ್ಯಕ್ತಿಗಳನ್ನು ಕೊಲೆಗೈತ್ತಿರುವ ದೇಶದ್ರೋಹಿಗಳನ್ನು ಕೂಡಲೇ ಬಂಧಿಸಬೇಕು. ಸಂವಿಧಾನ ಗೌರವಿಸುತ್ತೇವೆ ಎಂದು ಹೇಳುವ ದೇಶದ್ರೋಹಿಗಳು ಇಂದು ಇಂತಹ ಕೆಲಸ ಮಾಡುತ್ತಿದ್ದಾರೆ ಅದಕ್ಕಾಗಿ ಕೂಡಲೇ ಇಂತವರನ್ನು ಬಂಧಿಸಬೇಕೆಂದು ಆಗ್ರಹಿಸಿದರು.

ಸಂದರ್ಭದಲ್ಲಿ ಜಗದೀಶ್ ಪಾಟೀಲ ನರಬೋಳ, ವಿಶ್ವನಾಥ್ ಇಮ್ಮಣ್ಣಿ, ಪರಮೇಶ್ವರ ಬಿರಾಳ, ನಿಂಗಣ್ಣ ಗೌಡ ರಾಸಣಗಿ, ಬಸವರಾಜ್ ಸೂಗೂರು, ಕೇದಾರಲಿಂಗಯ್ಯ ಹಿರೇಮಠ, ಮಲ್ಲನಗೌಡ ಕಟ್ಟಿ ಸಂಗಾವಿ, ರಾಜು ರದ್ದೇವಡಗಿ, ತಿಪ್ಪಣ್ಣ ರಾಠೋಡ, ರಾಜಕೀಯ ಮುಖಂಡರು ವಿವಿಧ ಹಿಂದೂಪರ ಸಂಘಟನೆ ಸದಸ್ಯರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*