ಹಿಂದುಳಿದ ವರ್ಗಗಳ ಅಲೆಮಾರಿ/ ಅರೆ ಅಲೆಮಾರಿ ಜನಾಂಗದ ತಾಲೂಕಾ ಪ್ರಗತಿ ಪರಿಶೀಲನಾ ಸಮಿತಿ ಸಭೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಹುನಗುಂದ ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ಮೀಸಲಾತಿ ಸೌಲಭ್ಯದ ಸಲಹಾ ಸಮಿತಿಯ ತಾಲೂಕಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಹುನಗುಂದ ತಹಶೀಲ್ದಾರ ಬಸಲಿಂಗಪ್ಪ ನಾಯ್ಕೋಡಿ ಮಾತನಾಡಿದರು.

ಬಾಗಲಕೋಟೆ:ಶೈಕ್ಷಣಿಕ ಮತ್ತು ಆರ್ಥಿಕವಾಗಿ ಅತ್ಯಂತ ಹಿಂದುಳಿದಿರುವ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗದ ಜನರಿಗೆ ಸರ್ಕಾರದ ಸೌಲಭ್ಯಗಳನ್ನು ಸಕಾಲದಲ್ಲಿ ಸಮರ್ಪಕವಾಗಿ ದೊರಕಿಸಿ ಕೊಡಲು ಎಲ್ಲ ಇಲಾಖೆ ಅಧಿಕಾರಿಗಳು ಹಾಗೂ ಅಲೆಮಾರಿ ಜನಾಂಗದ ಸಂಸ್ಥೆಯ ಇಬ್ಬರು ಪ್ರತಿನಿಧಿಯನ್ನೊಳಗೊಂಡು ತಾಲೂಕಾ ಮಟ್ಟದ ಸಲಹಾ ಸಮಿತಿಯನ್ನು ತಹಶೀಲ್ದಾರ ಬಸಲಿಂಗಪ್ಪ ನಾಯ್ಕೋಡಿ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಯಿತು.

ತಾಲೂಕ ಮಟ್ಟದ ಸಲಹಾ ಸಮಿತಿಗೆ ಗೊಂದಳಿ ಸಮಾಜದ ಕಮತಗಿಯ ಅಶೋಕ ಸಿಂಗದ ಹಾಗೂ ಹೆಳವ ಸಮಾಜ ಗಂಜಿಹಾಳ ಗ್ರಾಮದ ಅಶೋಕ ಹೆಳವರ ಇವರುಗಳನ್ನು ನಾಮ ನಿರ್ದೇಶನ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ನಂತರ ಅಲೆಮಾರಿ ಅರೆ ಅಲೆಮಾರಿ ಜನಾಂದವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಸಭೆಯಲ್ಲಿ ತಹಶೀಲ್ದಾರರಾದ ಶ್ರೀ ಬಸಲಿಂಗಪ್ಪ ನಾಯ್ಕೋಡಿ ವಿವರಿಸಿ ವಿವಿಧ ಯೋಜನೆಗಳಲ್ಲಿ ಸಾಧಿಸಿರುವ ಪ್ರಗತಿ ಬಗ್ಗೆ ಪರಿಶೀಲನೆ ನಡೆಸಿದರು.

ಸಭೆಯಲ್ಲಿ ಹುನಗುಂದ ತಾಲ್ಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರಕಾಂತ ಮ್ಯಾಗೇರಿ,ಇಲಕಲ್ಲ ತಾಲೂಕಾ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಸಿದ್ದಪ್ಪ ಪಟ್ಟಿಹಾಳ,ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣಾದಿಕಾರಿ ಜಿ. ಎನ್.ಖ್ಯಾಡಿ,ತಾಲೂಕ ಆರೋಗ್ಯ ಅಧಿಕಾರಿ ಪ್ರಶಾಂತ ತುಂಬಗಿ, ವಿಸ್ತರಣಾಧಿಕಾರಿ ಎಸ್. ಎಸ್ .ಗಡೇದ,ಅಲೆಮಾರಿ ನಿಗಮದ ಸಹಾಯಕ ವ್ಯವಸ್ಥಾಪಕರಾದ ಪ್ರವೀಣ ಚವ್ಹಾಣ ಹಾಗೂ ಅಲೆಮಾರಿ ಜನಾಂಗದ ವಿವಿದ ಸಮುದಾಯಗಳ ಮುಖಂಡರಾದ ಶರಣಪ್ಪ ಹೆಳವರ ಹೆಳವ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ, ಹನಮಂತ ಯಾದವ ಜಿಲ್ಲಾ ಅಧ್ಯಕ್ಷರು ಪ್ರವರ್ಗ-1ರ ಜಾತಿಗಳ ಒಕ್ಕೂಟ ,ಮುತ್ತಪ್ಪ ಕಿಳ್ಳಿಕ್ಯಾತರ, ಬಲವಂತ ಯಾದವ ಹಾಗೂ ತಾಲೂಕಾ ಮಟ್ಟದ ವಿವಿಧ ಅದಿಕಾರಿಗಳು ಭಾಗವಹಿಸಿದಿದ್ದರು.

Be the first to comment

Leave a Reply

Your email address will not be published.


*